ಹಿಮಾಚಲ ಭೀಕರ ಭೂಕುಸಿತದಿಂದ ಸಾಯುವ ಮೊದಲು ಜೈಪುರ ವೈದ್ಯರ ಟ್ವೀಟ್
Landslide in Himachal Pradesh: ಭೀಕರವಾದ ಘಟನೆಯಲ್ಲಿ ಜೈಪುರದ ಆಯುರ್ವೇದ ವೈದ್ಯೆ ದೀಪಾ ಶರ್ಮಾ ಕೂಡಾ ಸಾವಿಗೀಡಾಗಿದ್ದಾರೆ. ಸಾವಿನ ಹಿಂದಿನ ದಿನ ಹಿಮಾಚಲ ಪ್ರವಾಸದ ಫೋಟೋವನ್ನು ಟ್ವೀಟ್ ಮಾಡಿದ್ದರು.
ಹಿಮಾಚಲ ಪ್ರದೇಶದಲ್ಲಿ ಭಾನುವಾರ ನಡೆದ ಭೀಕರ ಭೂಕುಸಿತದಲ್ಲಿ 9 ಜನ ಸಾವಿಗೀಡಾಗಿದ್ದಾರೆ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿತ್ತು. ಭೀಕರವಾದ ಘಟನೆಯಲ್ಲಿ ಜೈಪುರದ ಆಯುರ್ವೇದ ವೈದ್ಯೆ ದೀಪಾ ಶರ್ಮಾ ಕೂಡಾ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ, ಅವರು ಸಾವಿನ ಹಿಂದಿನ ದಿನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಹಿಮಾಚಲದ ಫೋಟೋ ಇದೀಗ ಹರಿದಾಡುತ್ತಿದೆ.
ಭಾರತದ ಅಂಚಿನಲ್ಲಿ ನಾವು ನಿಂತಿದ್ದೇವೆ. ಸುಮಾರು 80 ಕಿ.ಮೀಟರ್ ದೂರದಲ್ಲಿ ಟಿಬೆಟ್ ಗಡಿ ಇದೆ ಎಂದು 34 ವರ್ಷದ ವೈದ್ಯೆ ದೀಪಾ ಟ್ವೀಟ್ ಮಾಡಿದ್ದರು. ಸಾಂಗ್ಲಾ ಕಣಿವೆಯಲ್ಲಿನ ಬಂಡೆಗಳು ನೆಲಕ್ಕುರುಳಿ 9 ಮಂದಿ ಸಾವಿಗೀಡಾಗಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಶರ್ಮಾ ಅವರ ಟ್ವಿಟರ್ ಹಿಮಾಚಲ ಪ್ರದೇಶ ಪ್ರವಾಸದ ರಮಣೀಯ ದೃಶ್ಯಗಳಿಂದ ತುಂಬಿತ್ತು.
Standing at the last point of India where civilians are allowed. Beyond this point around 80 kms ahead we have border with Tibet whom china has occupied illegally. pic.twitter.com/lQX6Ma41mG
— Dr.Deepa Sharma (@deepadoc) July 25, 2021
Extremely sad & shocking beyond words to express pain heartbreaking ?#DeepaSharma Mahadev bless the soul ? pic.twitter.com/iHtpJpir2Y
— Nandini Idnani?? (@idnani_nandini) July 25, 2021
Standing at the last point of India where civilians are allowed. Beyond this point around 80 kms ahead we have border with Tibet whom china has occupied illegally. pic.twitter.com/lQX6Ma41mG
— Dr.Deepa Sharma (@deepadoc) July 25, 2021
Om Shanti ??
— Venu Adhiya Hirani ?? (@venu_bodyworks) July 25, 2021
ಸಾವಿಗೀಡಾದ ಪ್ರವಾಸಿಗರ ಕುಂಟುಬಗಳಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ದುರಂತದಲ್ಲಿ ಗಾಯಗೊಂಡವರಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು. ಅವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹೇಳಿದ್ದಾರೆ. ಪ್ರಧಾನಿ ನರೆಂದ್ರ ಮೋದಿ ತಲಾ ₹2 ಲಕ್ಷ ಘೋಷಿಸಿದ್ದಾರೆ. ಭೀಕರ ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಕ್ಕೆ ಮತ್ತು ಗಾಯಾಳುಗಳಿಗೆ 50,000 ರೂಪಾಯಿ ನೀಡಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:
Published On - 2:42 pm, Mon, 26 July 21