ಯಡಿಯೂರಪ್ಪ ರಾಜೀನಾಮೆಯಿಂದ ಬೂಕನಕೆರೆಯಲ್ಲಿ ಸೂತಕದ ಛಾಯೆ, ಗ್ರಾಮ ದೇವತೆ ಗೋಗಲಮ್ಮ ದೇವಸ್ಥಾನದ ಬಾಗಿಲು ತೆರೆಯುವುದಿಲ್ಲವೆಂದ ಗ್ರಾಮಸ್ಥರು

ಯಡಿಯೂರಪ್ಪ ರಾಜೀನಾಮೆಯಿಂದ ಬೂಕನಕೆರೆಯಲ್ಲಿ ಸೂತಕದ ಛಾಯೆ, ಗ್ರಾಮ ದೇವತೆ ಗೋಗಲಮ್ಮ ದೇವಸ್ಥಾನದ ಬಾಗಿಲು ತೆರೆಯುವುದಿಲ್ಲವೆಂದ ಗ್ರಾಮಸ್ಥರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jul 26, 2021 | 6:33 PM

ಬೂಕನೆಕೆರೆಯಲ್ಲಿ ಹಿರಿಯರೊಬ್ಬಯ ನಿಧನರಾದರೆ, ಗೋಗಲಮ್ಮ ದೇವಸ್ಥಾನದ ಬಾಗಿಲನ್ನು ಆ ನಿರ್ದಿಷ್ಟ ದಿನದಂದು ತೆಗೆಯುವುದಿಲ್ಲವಂತೆ. ಯಡಿಯೂರಪ್ಪನವರು ರಾಜೀನಾಮೆ ಸಲ್ಲಿಸಿರುವುದರಿಂದ ಗ್ರಾಮದಲ್ಲಿ ಜನ ಸೂತಕ ಆಚರಿಸುತ್ತಿದ್ದಾರೆ. ಹಾಗಾಗಿ, ಸೋಮವಾರ ದೇವಸ್ಥಾನದ ಬಾಗಿಲನ್ನು ತೆಗೆಯುವುದಿಲ್ಲವೆಂದು ಗ್ರಾಮದ ಜನ ಹೇಳಿದ್ದಾರೆ.

ಮಂಡ್ಯ: ಬಿಎಸ್​ ಯಡಿಯೂರಪ್ಪನವರು ರಾಜಕೀಯವಾಗಿ ಬೆಳೆದಿದ್ದು ಷಿಕಾರಿಪುರದಲ್ಲಾದರೂ ಅವರು ಹುಟ್ಟಿದ್ದು ಮಾತ್ರ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಬೂಕನೆಕೆರೆ ಗ್ರಾಮದಲ್ಲಿ. ಪ್ರತಿ ವರ್ಷ ಅವರು ಈ ಊರಿಗೆ ಭೇಟಿ ನೀಡಿ ಗ್ರಾಮ ದೇವತೆ ಗೋಗಲಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಾರೆ. ಯಡಿಯೂರಪ್ಪನವರು ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದು ಬೂಕನೆಕೆರೆ ಗ್ರಾಮದಲ್ಲಿ ಸೂತಕದ ಛಾಯೆ ಮೂಡಿಸಿದೆ. ಗ್ರಾಮಸ್ಥರು ದುಃಖ ವ್ಯಕ್ತಪಡಿಸುತ್ತಾ ಶೋಕ ಆಚರಿಸುತ್ತಿದ್ದಾರೆ. ಸ್ಥಳೀಯರು ಹೇಳುವ ಪ್ರಕಾರ ಕೇವಲ ಈ ಊರಿನ ಜನ ಮಾತ್ರ ಅಲ್ಲ, ಇಡೀ ಮಂಡ್ಯ ಜಿಲ್ಲೆಯ ಜನ ದುಃಖದಲ್ಲಿದ್ದಾರೆ.

ಸೋಮವಾರದಂದು ಟಿವಿ9 ಮಂಡ್ಯ ವರದಿಗಾರ ಈ ಗ್ರಾಮಕ್ಕೆ ಭೇಟಿ ನೀಡಿ ಜನರನ್ನು ಮಾತಾಡಿಸಿದರು. ಬಿಜೆಪಿ ಕಾರ್ಯಕರ್ತರೂ ಆಗಿರುವ ವ್ಯಕ್ತಿಯೊಬ್ಬರು ಮಾತಾಡಿ, ಯಡಿಯೂರಪ್ಪನವರು ನಾಲ್ಕು ಬಾರಿ ಮುಖ್ಯಮಂತ್ರಿಯಾದಾಗಲೂ ಅವರಿಗೆ ಪಕ್ಷದವರಿಂದಲೇ ದ್ರೋಹವಾಗಿದೆ, ಒಮ್ಮೆಯೂ ಅವರಿಗೆ ಅವಧಿ ಪೂರ್ತಿಗೊಳಿಸಲು ಅವಕಾಶ ನೀಡಲಿಲ್ಲ. ಅವರ ರಾಜೀನಾಮೆ ಪಡೆಯುವ ಮೂಲಕ, ಪಕ್ಷದ ಹಿರಿಯ ನಾಯಕರು ದೊಡ್ಡ ಪ್ರಮಾದವೆಸದಿದ್ದಾರೆ. ಸ್ಥಳೀಯ ಕಾರ್ಯಕರ್ತರು ಈಗ ಗೊಂದಲದಲ್ಲಿದ್ದು ಅವರು ಬೇರೆ ಪಕ್ಷಗಳಿಗೆ ಹೋದರೂ ಆಶ್ಚರ್ಯವಿಲ್ಲ. ಇನ್ನು ಮುಂದೆ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವು ದೊಡ್ಡ ಚುನಾವಣೆಗಳನ್ನು ಗೆಲ್ಲುವ ಮಾತು ಹಾಗಿರಲಿ, ಲೋಕಲ್ ಚುನಾವಣೆಗಳನ್ನೂ ಗೆಲ್ಲಲಾರದು ಎಂದು ಈ ಕಾರ್ಯಕರ್ತರು ಹೇಳಿದರು.

ಬೂಕನೆಕೆರೆಯಲ್ಲಿ ಹಿರಿಯರೊಬ್ಬಯ ನಿಧನರಾದರೆ, ಗೋಗಲಮ್ಮ ದೇವಸ್ಥಾನದ ಬಾಗಿಲನ್ನು ಆ ನಿರ್ದಿಷ್ಟ ದಿನದಂದು ತೆಗೆಯುವುದಿಲ್ಲವಂತೆ. ಯಡಿಯೂರಪ್ಪನವರು ರಾಜೀನಾಮೆ ಸಲ್ಲಿಸಿರುವುದರಿಂದ ಗ್ರಾಮದಲ್ಲಿ ಜನ ಸೂತಕ ಆಚರಿಸುತ್ತಿದ್ದಾರೆ. ಹಾಗಾಗಿ, ಸೋಮವಾರ ದೇವಸ್ಥಾನದ ಬಾಗಿಲನ್ನು ತೆಗೆಯುವುದಿಲ್ಲವೆಂದು ಗ್ರಾಮದ ಜನ ಹೇಳಿದ್ದಾರೆ.

ಇದನ್ನೂ ಓದಿ: ಶಿಕಾರಿಪುರ: ಬಿಎಸ್ ಯಡಿಯೂರಪ್ಪ ರಾಜೀನಾಮೆ ಹಿನ್ನೆಲೆ ಅಂಗಡಿ ಮುಂಗಟ್ಟು ಬಂದ್; ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

Published on: Jul 26, 2021 05:15 PM