ಅಭಿನಯ ಶಾರದೆ ಜಯಂತಿ ಕೊನೇ ದಿನಗಳ ಬಗ್ಗೆ ಪುತ್ರ ಕೃಷ್ಣ ಕುಮಾರ್ ತೆರೆದಿಟ್ಟ ವಿವರ
ಅನಾರೋಗ್ಯದಿಂದ ಹಿರಿಯ ನಟಿ ಜಯಂತಿ ಅವರು ಮೃತರಾಗಿರುವುದು ನೋವಿನ ಸಂಗತಿ. ‘ಅಮ್ಮ ಫೈಟರ್ ಆಗಿದ್ದರು. ಇಷ್ಟು ವರ್ಷ ಫೈಟ್ ಮಾಡಿಕೊಂಡು ಬಂದಿದ್ದ ಅವರಿಗೆ ಈಗ ಸಾಕು ಎನಿಸಿರಬಹುದು’ ಎಂದು ತಾಯಿಯ ಕೊನೇ ದಿನಗಳ ಬಗ್ಗೆ ಪುತ್ರ ಕೃಷ್ಣ ಕುಮಾರ್ ಮಾತನಾಡಿದ್ದಾರೆ.
ಹಿರಿಯ ನಟಿ ಜಯಂತಿ ಇನ್ನಿಲ್ಲ ಎಂಬ ಸುದ್ದಿ ಸೋಮವಾರ (ಜು.26) ಮುಂಜಾನೆಯೇ ಕೇಳಿಬಂತು. ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿದ್ರಿಸುತ್ತಿರುವಾಗಲೇ ಅಭಿನಯ ಶಾರದೆ ಜಯಂತಿ ಅವರು ಚಿರನಿದ್ರೆಗೆ ಜಾರಿದರು. ಅವರ ಬಗ್ಗೆ ಪುತ್ರ ಕೃಷ್ಣ ಕುಮಾರ್ ಕೆಲವು ಮಾತುಗಳನ್ನು ಹಂಚಿಕೊಂಡಿದ್ದಾರೆ. ‘ಅಮ್ಮ ಯಾವಾಗಲೂ ಜನರ ಜೊತೆ ಬೆರೆಯುತ್ತಿದ್ದರು. ಅದು ಅವರಿಗೆ ಹೆಚ್ಚು ಖುಷಿ ನೀಡುತ್ತಿತ್ತು. ಫ್ಯಾಮಿಲಿ ಎಂದರೆ ಅವರಿಗೆ ಕೇವಲ ರಕ್ತ ಸಂಬಂಧ ಮಾತ್ರ ಅಲ್ಲ. ಇಡೀ ಚಿತ್ರರಂಗವೇ ಅವರ ಕುಟುಂಬವಾಗಿತ್ತು. ಎಲ್ಲರ ಬಗ್ಗೆ ಪ್ರೀತಿ ಇತ್ತು’ ಎಂದಿದ್ದಾರೆ ಕೃಷ್ಣ ಕುಮಾರ್.
‘ಇತ್ತೀಚೆಗೆ ಪ್ರತಿದಿನ ಹಳೇ ಹಾಡುಗಳನ್ನು ಕೇಳುತ್ತಿದ್ದರು. ತಮ್ಮ ಚಿತ್ರರಂಗದ ಸ್ನೇಹಿತರ ಹಾಡುಗಳನ್ನು ನೋಡುತ್ತ ಕಾಲ ಕಳೆಯುತ್ತಿದ್ದರು. ಸರೋಜಾದೇವಿ, ಭಾರತಿ ವಿಷ್ಣುವರ್ಧನ್, ಶ್ರೀನಾಥ್, ಶ್ರುತಿ, ತಾರಾ, ಗಿರಿಜಾ ಲೋಕೇಶ್ ಮುಂತಾದವರು ತುಂಬ ಹತ್ತಿರದವರಾಗಿದ್ದರು. ಅವರ ಜೊತೆ ಆಗಾಗ ಫೋನ್ನಲ್ಲಿ ಮಾತನಾಡುತ್ತಿದ್ದರು’ ಎಂದು ತಾಯಿಯ ಕೊನೇ ದಿನಗಳ ಬಗ್ಗೆ ಕೃಷ್ಣ ಕುಮಾರ್ ಮಾತನಾಡಿದ್ದಾರೆ.
ಇದನ್ನೂ ಓದಿ:
‘ಒನಕೆ ಓಬವ್ವ ಅಂದ್ರೆ ನೆನಪಾಗೋದೇ ಜಯಂತಿ’; ಅಭಿನಯ ಶಾರದೆಗೆ ಸ್ಯಾಂಡಲ್ವುಡ್ ಶ್ರದ್ಧಾಂಜಲಿ
Jayanthi Photos: ಕಮಲಾಕುಮಾರಿಯಿಂದ ಅಭಿನಯ ಶಾರದೆಯಾಗುವ ತನಕ ಜಯಂತಿ ನಡೆದುಬಂದ ಹಾದಿ

ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ

ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ

ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು

ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
