AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

iPhone 12: ಐಫೋನ್ 12 ಮೇಲೆ ಭರ್ಜರಿ ಆಫರ್: 12 ಸಾವಿರ ರೂ. ಕಡಿಮೆಗೆ ಖರೀದಿಸಬಹುದು

Flipkart Big Saving Days: ಈ ಫೋನ್​ನಲ್ಲಿ ಕಂಪೆನಿಯು Li-Ion 2815 mAh ಸಾಮರ್ಥ್ಯದ ಬ್ಯಾಟರಿ ನೀಡಿದ್ದು, ಇದು 20W ಫಾಸ್ಟ್​ ಚಾರ್ಜಿಂಗ್​ನ್ನು ಸಪೋರ್ಟ್ ಮಾಡಲಿದೆ. ಅಂದರೆ ಅರ್ಧಗಂಟೆಯಲ್ಲಿ ಶೇ.50 ರಷ್ಟು ಚಾರ್ಜ್​ ಮಾಡಿಕೊಳ್ಳಬಹುದು.

iPhone 12: ಐಫೋನ್ 12 ಮೇಲೆ ಭರ್ಜರಿ ಆಫರ್: 12 ಸಾವಿರ ರೂ. ಕಡಿಮೆಗೆ ಖರೀದಿಸಬಹುದು
iPhone 12
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 26, 2021 | 4:35 PM

ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ ಶುರುವಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಸೇಲ್​ನಲ್ಲಿ ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿ ನೀಡಲಾಗುತ್ತಿದೆ. ಈ ಆಫರ್​ ಮೂಲಕ ನೀವು ಅತ್ಯುತ್ತಮ ಸ್ಮಾರ್ಟ್​ಫೋನ್ ಖರೀದಿಸಲು ಬಯಸಿದರೆ, ಆ್ಯಪಲ್ ಐಫೋನ್ 12 ಉತ್ತಮ ಆಯ್ಕೆ. ಏಕೆಂದರೆ ಈ ಫೋನ್​ ಮೇಲೆ 12,000 ರೂ.ಗಳ ರಿಯಾಯಿತಿ (ಡಿಸ್ಕೌಂಟ್) ನೀಡಲಾಗಿದೆ. ಭಾರತದಲ್ಲಿ ಐಫೋನ್ 12 ಮೇಲೆ ಇದೇ ಮೊದಲ ಬಾರಿ ಇಷ್ಟೊಂದು ಮೊತ್ತದ ಡಿಸ್ಕೌಂಟ್ ನೀಡಲಾಗಿದ್ದು, ಜುಲೈ 29 ರೊಳಗೆ ಈ ಆಫರ್ ಮೂಲಕ ಐಫೋನ್ ಖರೀದಿಸುವ ಅವಕಾಶ ಗ್ರಾಹಕರ ಮುಂದಿದೆ.

ಐಫೋನ್ 12 ವೈಶಿಷ್ಟ್ಯಗಳೇನು..?

ಡಿಸ್​ಪ್ಲೇ: ಈ ಸ್ಮಾರ್ಟ್​ಫೋನ್​ನಲ್ಲಿ 6.10-ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್​ಪ್ಲೇ ನೀಡಲಾಗಿದ್ದು, ಇದು 1170×2532 ಪಿಕ್ಸೆಲ್‌ ರೆಸಲ್ಯೂಶನ್ ಹೊಂದಿರಲಿದೆ.

ಕ್ಯಾಮೆರಾ: ಐಫೋನ್ 12ನಲ್ಲಿ ಒಟ್ಟು 3 ಕ್ಯಾಮೆರಾಗಳನ್ನು ನೀಡಲಾಗಿದೆ. ಹಿಂಭಾಗದಲ್ಲಿ 12 ಮೆಗಾ ಪಿಕ್ಸೆಲ್ (f/1.6) + 12-ಮೆಗಾ ಪಿಕ್ಸೆಲ್ (f/2.4) ಎರಡು ಕ್ಯಾಮೆರಾ ಇದ್ದರೆ, ಸೆಲ್ಫಿಗಾಗಿ ಮುಂಭಾಗದಲ್ಲಿ 12 ಮೆಗಾ ಪಿಕ್ಸೆಲ್​ನ ಕ್ಯಾಮೆರಾ ನೀಡಲಾಗಿದೆ. ನೈಟ್ ಮೋಡ್, ಡೀಪ್ ಫ್ಯೂಷನ್, ಸ್ಮಾರ್ಟ್ ಎಚ್​ಡಿ ಆರ್ 3 ಮತ್ತು 4 ಕೆ ಡಾಲ್ಬಿ ವಿಷನ್ ಎಚ್​ಡಿ ಆರ್ ರೆಕಾರ್ಡಿಂಗ್ ವೈಶಿಷ್ಟ್ಯಗಳು ಇದರಲ್ಲಿದೆ. ಹಾಗೆಯೇ ಹಿಂಬದಿಯ ಕ್ಯಾಮೆರಾ ಮೂಲಕ 4 ಕೆ ಎಚ್‌ಡಿಆರ್ ವೀಡಿಯೊವನ್ನು ಶೂಟ್ ಮಾಡಬಹುದು.

ಪ್ರೊಸೆಸರ್: ಇದರಲ್ಲಿ ಆ್ಯಪಲ್ A14 ಬಯೋನಿಕ್ ಪ್ರೊಸೆಸರ್ ನೀಡಲಾಗಿದ್ದು, iOS 14 ಅಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯ ನಿರ್ವಹಿಸಲಿದೆ.

ಸ್ಟೊರೇಜ್: ಐಫೋನ್ 12 ಎರಡು ಸ್ಟೊರೇಜ್ ಆಯ್ಕೆ ನೀಡಲಾಗಿದ್ದು, ಅದರಂತೆ 64 ಜಿಬಿ ಮತ್ತು 128 ಜಿಬಿ ಸ್ಟೊರೇಜ್​ ಫೋನ್​ಗಳನ್ನು ಖರೀದಿಸಬಹುದು.

ಬ್ಯಾಟರಿ: ಈ ಫೋನ್​ನಲ್ಲಿ ಕಂಪೆನಿಯು Li-Ion 2815 mAh ಸಾಮರ್ಥ್ಯದ ಬ್ಯಾಟರಿ ನೀಡಿದ್ದು, ಇದು 20W ಫಾಸ್ಟ್​ ಚಾರ್ಜಿಂಗ್​ನ್ನು ಸಪೋರ್ಟ್ ಮಾಡಲಿದೆ. ಅಂದರೆ ಅರ್ಧಗಂಟೆಯಲ್ಲಿ ಶೇ.50 ರಷ್ಟು ಚಾರ್ಜ್​ ಮಾಡಿಕೊಳ್ಳಬಹುದು. ಇನ್ನು ಐಫೋನ್ 12 ಮ್ಯಾಗ್‌ಸೇಫ್ ವೈರ್‌ಲೆಸ್ ಚಾರ್ಜಿಂಗ್ ವೈಶಿಷ್ಟ್ಯವನ್ನು ಹೊಂದಿದ್ದು, ಮ್ಯಾಗ್‌ಸೇಫ್‌ನೊಂದಿಗೆ ಚಾರ್ಜ್ ಮಾಡಲು ಬಯಸಿದರೆ, ನೀವು ಅದನ್ನು ಪ್ರತ್ಯೇಕವಾಗಿ ಖರೀದಿಸಬೇಕು.

ಬೆಲೆ: ಆ್ಯಪಲ್‌ ಐಫೋನ್ 12 ರ 64 ಜಿಬಿ ಸ್ಮಾರ್ಟ್​ಫೋನ್​ ಮೇಲೆ ಫ್ಲಿಪ್‌ಕಾರ್ಟ್​ನಲ್ಲಿ 12 ಸಾವಿರ ರೂ. ಡಿಸ್ಕೌಂಟ್ ನೀಡಲಾಗಿದೆ. ಅದರಂತೆ ಈ ಸ್ಮಾರ್ಟ್​ಫೋನ್​ನ್ನು 67,999 ರೂ.ನಲ್ಲಿ ಖರೀದಿಸಬಹುದು. ಇದರ ಮೂಲ ಬೆಲೆ 79,990 ರೂ. ಆಗಿದ್ದು, ಜುಲೈ 29ರವರೆಗೆ ರಿಯಾಯಿತಿ ದರಲ್ಲಿ ಖರೀದಿಗೆ ಲಭ್ಯವಿರಲಿದೆ. ಇನ್ನು ಐಸಿಸಿ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವವರಿಗೆ 750 ರೂ.ಗಳ ಕ್ಯಾಶ್‌ಬ್ಯಾಕ್ ಕೂಡ ಸಿಗಲಿದೆ.

ಇದನ್ನೂ ಓದಿ: Royal Enfield: ಎಲೆಕ್ಟ್ರಿಕ್ ಬುಲೆಟ್: ಸೌಂಡ್ ಮಾಡದೆ ರಸ್ತೆಗಿಳಿಯಲಿದೆಯಾ ರಾಯಲ್ ಎನ್​ಫೀಲ್ಡ್​?

ಇದನ್ನೂ ಓದಿ: IPL 2021: ಐಪಿಎಲ್​ ಆರಂಭಕ್ಕೂ ಮುನ್ನವೇ CSK ತಂಡದ ಬಿಗ್​ ಪ್ಲ್ಯಾನ್..!

(Flipkart Big Saving Days, iPhone 12 available at lowest price ever in india)

ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಭಾರತದ ಷರತ್ತುಗಳನ್ನು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ: ಯದುವೀರ್
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮೈಸೂರು ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಸಂಸದ ಯದುವೀರ್ ಮಹತ್ವದ ಮಾಹಿತಿ
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಮಳೆಗಾಲವನ್ನು ನೆನಪಿಸಿಕೊಳ್ಳಲೂ ಸಾಯಿ ಲೇಔಟ್ ಜನ ತಯಾರಿಲ್ಲ!
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ಸೋಫಿಯಾ ಮಾವನ ಮನೆ ಮೇಲೆ ದಾಳಿ ನಡೆಸುವ ಮನಸ್ಥಿತಿ ಕನ್ನಡಿಗರು ಕ್ಷಮಿಸಲಾರರು
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್
ನೆಚ್ಚಿನ ನಾಯಕಿಯ ಯಶಸ್ಸಿಗೆ ಹರಕೆ ತೀರಿಸಿದ ಡ್ರೋನ್ ಪ್ರತಾಪ್
ಹೊಂಡದಂತಾದ ಸುಲ್ತಾನಪುರ, ಮನೆ ಮತ್ತು ಗುಡಿಗಳು ಜಲಾವೃತ
ಹೊಂಡದಂತಾದ ಸುಲ್ತಾನಪುರ, ಮನೆ ಮತ್ತು ಗುಡಿಗಳು ಜಲಾವೃತ