OPPO A93s: ಕಡಿಮೆ ಬೆಲೆಯ ಅತ್ಯುತ್ತಮ 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಒಪ್ಪೊ
oppo a93s 5g specifications: OPPO A93s 5G ಸದ್ಯ ಏಕೈಕ ಸ್ಟೊರೇಜ್ ಆಯ್ಕೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ. ಅದರಂತೆ 8 ಜಿಬಿ ರ್ಯಾಮ್ ಹಾಗೂ 256 ಜಿಬಿ ಇನ್ಬಿಲ್ಟ್ ಸ್ಟೊರೇಜ್ ಇದರಲ್ಲಿ ನೀಡಲಾಗಿದೆ. ಇನ್ನು ಮೈಕ್ರೊ ಎಸ್ಡಿ ಕಾರ್ಡ್ ಮೂಲಕ ಬಳಕೆದಾರರು ಸ್ಟೊರೇಜ್ನ್ನು ಹೆಚ್ಚಿಸಬಹುದು.
ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಒಪ್ಪೊ ಕಂಪೆನಿಯ OPPO A93s-5G ಸ್ಮಾರ್ಟ್‌ಫೋನ್ ಕೊನೆಗೂ ಬಿಡುಗಡೆಯಾಗಿದೆ. ಕಂಪೆನಿಯು ತನ್ನ 5ಜಿ ಸ್ಮಾರ್ಟ್ಫೋನ್ನ್ನು ಚೀನಾ ಮಾರುಕಟ್ಟೆಗೆ ಪರಿಚಯಿಸಿದ್ದು, ಶೀಘ್ರದಲ್ಲೇ ಭಾರತ ಸೇರಿದಂತೆ ವಿಶ್ವದ ವಿವಿಧೆಡೆ ಖರೀದಿಗೆ ಲಭ್ಯವಿರಲಿದೆ. ಈ ಸ್ಮಾರ್ಟ್ಫೋನ್ನಲ್ಲಿ 8ಜಿಬಿ ರ್ಯಾಮ್ ನೀಡುತ್ತಿರುವ ವಿಷಯ ಈ ಹಿಂದೆಯೇ ಲೀಕ್ ಆಗಿತ್ತು. ಅದರ ಜೊತೆ 5ಜಿ ಮೊಬೈಲ್ ಆಗಿದ್ದರಿಂದ ಟೆಕ್ ಕ್ಷೇತ್ರದಲ್ಲಿ OPPO A93s 5G ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿದ್ದಂತೆ ಮತ್ತೊಮ್ಮೆ ಒಪ್ಪೊ ಮೊಬೈಲ್ ಪ್ರಿಯರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
OPPO A93s 5G ಸ್ಮಾರ್ಟ್ಫೋನ್ನ ವಿಶೇಷತೆಗಳೇನು?
ಡಿಸ್ಪ್ಲೇ: ಈ ಸ್ಮಾರ್ಟ್ಫೋನ್ನಲ್ಲಿ 6.5-ಇಂಚಿನ ಪಂಚ್-ಹೋಲ್ ಡಿಸ್ಪ್ಲೇ ಅನ್ನು ನೀಡಲಾಗಿದೆ. ಇದು ಪೂರ್ಣ-ಹೆಚ್ಡಿ + (1080 x 2400 ಪಿಕ್ಸೆಲ್‌ಗಳು) ರೆಸಲ್ಯೂಶನ್ ಮತ್ತು 90Hz ಅನ್ನು ಬೆಂಬಲಿಸುತ್ತದೆ.
ಕ್ಯಾಮೆರಾ: OPPO A93s 5G ಮೊಬೈಲ್ನಲ್ಲಿ ಒಟ್ಟು 4 ಕ್ಯಾಮೆರಾಗಳನ್ನು ನೀಡಲಾಗಿದೆ. ಹಿಂಭಾಗದಲ್ಲಿ 48 ಮೆಗಾಪಿಕ್ಸೆಲ್ ಪ್ರೈಮರಿ ಲೆನ್ಸ್, 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಅನ್ನು ಒಳಗೊಂಡಿದೆ. ಹಾಗೆಯೇ ಸೆಲ್ಫಿಗಾಗಿ ಮುಂಭಾಗದಲ್ಲಿ 8 ಮೆಗಾ ಪಿಕ್ಸೆಲ್ನ ಕ್ಯಾಮೆರಾ ನೀಡಲಾಗಿದೆ.
ಪ್ರೊಸೆಸರ್: ಇದರಲ್ಲಿ ಒಕ್ಟಾಕೋರ್ ಪ್ರೊಸೆಸರ್ ನೀಡಲಾಗಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 700 ಚಿಪ್‌ಸೆಟ್ ಮತ್ತು ಅಂಡ್ರಾಯ್ಡ್ 11 ಅಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯ ನಿರ್ವಹಿಸಲಿದೆ.
ಸ್ಟೊರೇಜ್: OPPO A93s 5G ಸದ್ಯ ಏಕೈಕ ಸ್ಟೊರೇಜ್ ಆಯ್ಕೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ. ಅದರಂತೆ 8 ಜಿಬಿ ರ್ಯಾಮ್ ಹಾಗೂ 256 ಜಿಬಿ ಇನ್ಬಿಲ್ಟ್ ಸ್ಟೊರೇಜ್ ಇದರಲ್ಲಿ ನೀಡಲಾಗಿದೆ. ಇನ್ನು ಮೈಕ್ರೊ ಎಸ್ಡಿ ಕಾರ್ಡ್ ಮೂಲಕ ಬಳಕೆದಾರರು ಸ್ಟೊರೇಜ್ನ್ನು ಹೆಚ್ಚಿಸಬಹುದು.
ಬ್ಯಾಟರಿ: ಒಪ್ಪೊ ಕಂಪೆನಿಯು ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ನೀಡಿದ್ದು, ಇದು 18W ಫಾಸ್ಟ್ ಚಾರ್ಜಿಂಗ್ನ್ನು ಸಪೋರ್ಟ್ ಮಾಡಲಿದೆ.
ಇನ್ನಿತರ ವೈಶಿಷ್ಟ್ಯ: ಈ ಹೊಸ ಸ್ಮಾರ್ಟ್‌ಫೋನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್ಲಾಕ್ ವೈಶಿಷ್ಟ್ಯವನ್ನು ಸಹ ಹೊಂದಿದೆ.
ಬೆಲೆ: ಸದ್ಯ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ OPPO A93s-5G ಸ್ಮಾರ್ಟ್‌ಫೋನ್ ಬೆಲೆ 1999 ಸಿಎನ್‌ವೈ. ಅಂದರೆ ಭಾರತದಲ್ಲಿ ಈ ಮೊಬೈಲ್ 23 ಸಾವಿರ ಅಸುಪಾಸಿನಲ್ಲಿ ಖರೀದಿಗೆ ಲಭ್ಯವಿರಲಿದೆ.
ಇದನ್ನೂ ಓದಿ: Royal Enfield: ಎಲೆಕ್ಟ್ರಿಕ್ ಬುಲೆಟ್: ಸೌಂಡ್ ಮಾಡದೆ ರಸ್ತೆಗಿಳಿಯಲಿದೆಯಾ ರಾಯಲ್ ಎನ್ಫೀಲ್ಡ್?
ಇದನ್ನೂ ಓದಿ: IPL 2021: ಐಪಿಎಲ್ ಆರಂಭಕ್ಕೂ ಮುನ್ನವೇ CSK ತಂಡದ ಬಿಗ್ ಪ್ಲ್ಯಾನ್..!
(OPPO A93s 5G Smartphone launched )