AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samsung galaxy: 6000mAh ಬ್ಯಾಟರಿ, 5 ಕ್ಯಾಮೆರಾ: ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್​ ಮೇಲೆ ಭಾರೀ ಡಿಸ್ಕೌಂಟ್..!

samsung galaxy m12 specifications: ಸ್ಯಾಮ್ಸಂಗ್ ಗ್ಯಾಲಕ್ಸಿ M12 ಸ್ಮಾರ್ಟ್​ಫೋನ್​ನಲ್ಲಿ ಒಟ್ಟು 6 ಕ್ಯಾಮೆರಾಗಳನ್ನು ನೀಡಿರುವುದು ವಿಶೇಷ. ಹಿಂಬದಿಯಲ್ಲಿ 48 ಮೆಗಾ ಪಿಕ್ಸೆಲ್ ಮೊದಲ ಕ್ಯಾಮೆರಾ ನೀಡಲಾಗಿದೆ. ಇನ್ನು ಎರಡನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಅನ್ನು ಹೊಂದಿರಲಿದೆ.

Samsung galaxy: 6000mAh ಬ್ಯಾಟರಿ, 5 ಕ್ಯಾಮೆರಾ: ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್​ ಮೇಲೆ ಭಾರೀ ಡಿಸ್ಕೌಂಟ್..!
Samsung galaxy M12
TV9 Web
| Updated By: ಝಾಹಿರ್ ಯೂಸುಫ್|

Updated on: Jul 24, 2021 | 8:05 PM

Share

ದಕ್ಷಿಣ ಕೊರಿಯಾದ ಜನಪ್ರಿಯ ಕಂಪನಿ ಸ್ಯಾಮ್‌ಸಂಗ್ ತನ್ನ ಬಜೆಟ್ ಸ್ಮಾರ್ಟ್‌ಫೋನ್ ಮೇಲೆ ಡಿಸ್ಕೌಂಟ್ ಘೋಷಿಸಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 12 ಸ್ಮಾರ್ಟ್‌ಫೋನ್ (samsung galaxy m12) ಆಫರ್ ನೀಡಿದ್ದು, ಕಂಪೆನಿಯ ಅಧಿಕೃತ ವೆಬ್​ಸೈಟ್ ಮೂಲಕ ಅಗ್ಗದ ದರದಲ್ಲಿ ಮೊಬೈಲ್​ನ್ನು ತಮ್ಮದಾಗಿಸಿಕೊಳ್ಳಬಹುದು. ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಈ ಫೋನ್‌ ಮೇಲೆ ಒಂದು ಸಾವಿರ ರೂಪಾಯಿಗಳ ರಿಯಾಯಿತಿ ನೀಡಲಾಗುತ್ತಿದೆ. ಫೋನ್‌ನ 4 ಜಿಬಿ ರ್ಯಾಮ್ ಮತ್ತು 64 ಜಿಬಿ ಇನ್​ಬಿಲ್ಟ್ ಸ್ಟೊರೇಜ್ ಹೊಂದಿದ್ದು, ಇದರ ಬೆಲೆ ಕೇವಲ 9,999 ರೂ. ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳೊಂದಿಗೆ ನೀವು ಈ ಫೋನ್‌ ಖರೀದಿಸಿದರೆ, ನಿಮಗೆ ರಿಯಾಯಿತಿ ಸಿಗಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 12 ನ (samsung galaxy m12) ವಿಶೇಷತೆಗಳು: ಡಿಸ್​ಪ್ಲೇ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 12 ಸ್ಮಾರ್ಟ್​ಫೋನ್​ 6.5 ಇಂಚಿನ ಎಚ್‌ಡಿ + ಡಿಸ್​ಪ್ಲೇ ಹೊಂದಿದ್ದು, ಇದು 720×1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರಲಿದೆ.

ಸಿಮ್ ಸಪೋರ್ಟ್: ಡ್ಯುಯಲ್ ಸಿಮ್ ಬೆಂಬಲವನ್ನು ಹೊಂದಿರುವ ಈ ಫೋನ್ ಆಂಡ್ರಾಯ್ಡ್ ಓಎಸ್ ಆಧಾರಿತ ಒನ್ ಯುಐ ಕೋರ್ ಅನ್ನು ಆಧರಿಸಿದೆ. ಫೋನ್‌ನಲ್ಲಿ ಟಿಎಫ್‌ಟಿ ಇನ್ಫಿನಿಟಿ-ವಿ ಡಿಸ್ಪ್ಲೇ ನೀಡಲಾಗಿದೆ.

ಪ್ರೊಸೆಸರ್: ಈ ಫೋನ್ ಅಕ್ಟಾಕೋರ್ ((4×2.0 GHz Cortex-A55 & 4×2.0 GHz Cortex-A55)) ಪ್ರೊಸೆಸರ್ ಹೊಂದಿದ್ದು, ಅದರ ಜೊತೆಗೆ ಎಕ್ಸಿನೋಸ್ 850 ಚಿಪ್​ಸೆಟ್ ಇದರಲ್ಲಿದೆ.

ಸ್ಟೊರೇಜ್: 4GB RAM ಮತ್ತು 64GB ಸ್ಟೋರೇಜ್ ಮತ್ತು 6GB RAM ಮತ್ತು 128GB ಸ್ಟೋರೇಜ್ ಆಯ್ಕೆಯಲ್ಲಿ ಈ ಸ್ಮಾರ್ಟ್​ಫೋನ್ ಖರೀದಿಗೆ ಲಭ್ಯವಿದೆ. ಹಾಗೆಯೇ ಮೈಕ್ರೊ ಎಸ್ಡಿ ಕಾರ್ಡ್ ನೆರವಿನಿಂದ ಸ್ಟೊರೇಜ್​ನ್ನು 1 ಟಿಬಿವರೆಗೆ ಹೆಚ್ಚಿಸಬಹುದು.

ಕ್ಯಾಮೆರಾ: ಸ್ಯಾಮ್ಸಂಗ್ ಗ್ಯಾಲಕ್ಸಿ M12 ಸ್ಮಾರ್ಟ್​ಫೋನ್​ನಲ್ಲಿ ಒಟ್ಟು 5 ಕ್ಯಾಮೆರಾಗಳನ್ನು ನೀಡಿರುವುದು ವಿಶೇಷ. ಹಿಂಬದಿಯಲ್ಲಿ 48 ಮೆಗಾ ಪಿಕ್ಸೆಲ್ ಮೊದಲ ಕ್ಯಾಮೆರಾ ನೀಡಲಾಗಿದೆ. ಇನ್ನು ಎರಡನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಅನ್ನು ಹೊಂದಿರಲಿದೆ. ಹಾಗೆಯೇ ಮೂರನೇ ಮತ್ತು ನಾಲ್ಕನೇ ಕ್ಯಾಮೆರಾಗಳು 2 ಮೆಗಾ ಪಿಕ್ಸೆಲ್​ ಅನ್ನು ಹೊಂದಿದ್ದು, ಇದರಲ್ಲಿ ಡೆಪ್ತ್ ಸೆನ್ಸಾರ್, ಮ್ಯಾಕ್ರೋ ಲೆನ್ಸ್ ಅನ್ನು ಅಳವಡಿಸಲಾಗಿದೆ. ಹಾಗೆಯೇ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾ ಪಿಕ್ಸೆಲ್​ನ ಫ್ರಂಟ್ ಕ್ಯಾಮೆರಾವನ್ನು ನೀಡಲಾಗಿದೆ.

ಬ್ಯಾಟರಿ ಮತ್ತು ಇತರ ವೈಶಿಷ್ಟ್ಯಗಳು: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 12 ನಲ್ಲಿ 6000 ಎಮ್‌ಎಹೆಚ್ ಸಾಮರ್ಥ್ಯದ ಪವರ್​ ಬ್ಯಾಟರಿಯನ್ನು ನೀಡಲಾಗಿದೆ. ಇದು 4 ಜಿ ನೆಟ್‌ವರ್ಕ್‌ನಲ್ಲಿ 58 ಗಂಟೆಗಳ ಬ್ಯಾಕಪ್ ನೀಡುತ್ತದೆ. ಪವರ್ ಬಟನ್‌ನಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್, 4 ಜಿ ಎಲ್‌ಟಿಇ, ವೈ-ಫೈ, ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಫೋನ್‌ನಲ್ಲಿ ನೀಡಲಾಗಿದೆ.

ಇದನ್ನೂ ಓದಿ: MS Dhoni: ಧೋನಿ ಕೋಚ್ ಆಗಲಿದ್ದಾರೆ: ಮಾಜಿ ಕ್ರಿಕೆಟಿಗನ ಭವಿಷ್ಯ..!

ಇದನ್ನೂ ಓದಿ: India vs Sri Lanka T20 Schedule: ಟಿ20 ಕದನಕ್ಕೆ ಟೀಮ್ ಇಂಡಿಯಾ ಸಜ್ಜು: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ