Jio Plan: 60 ದಿನ ವ್ಯಾಲಿಡಿಟಿ, 50GB ಡೇಟಾ: ಜಿಯೋದಿಂದ ಅತ್ಯುತ್ತಮ ಫ್ರೀಡಂ ಪ್ಲಾನ್
ಇತ್ತೀಚಿಗಷ್ಟೆ ಜಿಯೋ ಫ್ರೀಡಂ ಪ್ಲಾನ್ನಲ್ಲಿ ಕೆಲವು ಯೋಜನೆಗಳನ್ನು ಬಿಡುಗಡೆ ಮಾಡಿದ್ದು, ಆ ಪೈಕಿ ಜಿಯೋ 447 ರೂ. ಪ್ಲಾನ್ ಬಜೆಟ್ ಬೆಲೆಯುಲ್ಲಿ ಹೆಚ್ಚು ಆಕರ್ಷಣೆ ಪಡೆದಿದೆ.
ಭಾರತೀಯ ಟಿಲಿಕಾಂ ಮಾರುಕಟ್ಟೆಯಲ್ಲಿ ರಿಲಯನ್ಸ್ (Reliance) ಒಡೆತನದ ಜಿಯೋ (Jio) ಅತಿ ಕಡಿಮೆ ಬೆಲೆಗೆ ಅತ್ಯುತ್ತಮ ಇಂಟರ್ನೆಟ್ ಸೇವೆ, ಆಫರ್ಗಳನ್ನು ಪರಿಚಯಿಸಿ ಅಲ್ಪ ಅವದಿಯಲ್ಲಿ ಸಾಕಷ್ಟು ಹೆಸರು ಮಾಡಿದೆ. ಕೊರೊನಾ ಕಾಲದಲ್ಲಂತು ವರ್ಕ್ ಫ್ರಂ ಹೋಮ್ ಸೇರಿದಂತೆ ತನ್ನ ಗ್ರಾಹಕರಿಗೆ ವಿಶೇಷ ಆಫರ್ ಗಳನ್ನು ನೀಡುತ್ತಿದೆ. ಇದೇ ಕಾರಣಕ್ಕೆ ಜಿಯೋ ಈಗಲೂ ನಂಬರ್ ಒನ್ ಸ್ಥಾನ ಪಡೆದುಕೊಂಡಿರವುದು.
ಏರ್ಟೆಲ್, ಬಿಎಸ್ಎನ್ಎಲ್, ವೋಡಾಫೋನ್- ಐಡಿಯಾಕ್ಕೆ ಹೋಲಿಸಿದರೆ ಜಿಯೋ ಟೆಲಿಕಾಂ ಕಂಪನಿಯ ಅಗ್ಗದ ರಿಚಾರ್ಜ್ ಪ್ಲಾನ್ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಅಲ್ಲದೆ ಸಾಕಷ್ಟು ಬೆನಿಫಿಟ್ ಗಳನ್ನು ಕೂಡ ನೀಡುತ್ತಿವೆ. ಅವುಗಳಲ್ಲಿ ಇತ್ತೀಚಿಗಷ್ಟೆ ಜಿಯೋ ಫ್ರೀಡಂ ಪ್ಲಾನ್ನಲ್ಲಿ ಕೆಲವು ಯೋಜನೆಗಳನ್ನು ಬಿಡುಗಡೆ ಮಾಡಿದ್ದು, ಆ ಪೈಕಿ ಜಿಯೋ 447 ರೂ. ಪ್ಲಾನ್ ಬಜೆಟ್ ಬೆಲೆಯುಲ್ಲಿ ಹೆಚ್ಚು ಆಕರ್ಷಣೆ ಪಡೆದಿದೆ.
ಜಿಯೋ 447 ರೂ. ಫ್ರೀಡಂ ಪ್ಲಾನ್ ಯೋಜನೆಯು 60 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಹೊಂದಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಒಟ್ಟು 50GB ಡೇಟಾ ಪ್ರಯೋಜನ ಸಿಗಲಿದ್ದು, ಯಾವುದೇ ದೈನಂದಿನ ಡೇಟಾ ಮಿತಿ ಪಡೆದಿಲ್ಲ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆ ಸೌಲಭ್ಯ ಸಹ ದೊರೆಯುತ್ತದೆ. ಅಲ್ಲದೇ ಪ್ರತಿದಿನ 100 ಎಸ್‌ಎಮ್‌ಎಸ್‌ಗಳ ಪ್ರಯೋಜನವು ಲಭ್ಯ. ಇನ್ನು ಹೆಚ್ಚುವರಿಯಾಗಿ ಜಿಯೋ ಆ್ಯಪ್ಸ್ ಬಳಕೆದಾರರಿಗೆ ಉಚಿತವಾಗಿ ಸಿಗುತ್ತದೆ.
ಇದರ ಜೊತೆಗೆ ಜಿಯೋ 597 ರೂ. ಫ್ರೀಡಂ ಪ್ಲಾನ್ ಯೋಜನೆಯು 90 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಒಟ್ಟು 90GB ಡೇಟಾ ಪ್ರಯೋಜನ ಸಿಗಲಿದ್ದು, ಯಾವುದೇ ದೈನಂದಿನ ಡೇಟಾ ಮಿತಿ ಪಡೆದಿಲ್ಲ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆ ಸೌಲಭ್ಯ ಸಹ ದೊರೆಯುತ್ತದೆ. ಅಲ್ಲದೇ ಪ್ರತಿದಿನ 100 ಎಸ್‌ಎಮ್‌ಎಸ್‌ಗಳ ಪ್ರಯೋಜನವು ಲಭ್ಯವಿರುತ್ತದೆ.
ಅಲ್ಲದೆ 247 ರೂ. ಫ್ರೀಡಂ ಪ್ಲಾನ್ ಯೋಜನೆಯು 30 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಈ ಅವಧಿಯಲ್ಲಿ ಬಳಕೆಅದರರಿಗೆ ಒಟ್ಟು 25GB ಡೇಟಾ ಪ್ರಯೋಜನ ಸಿಗಲಿದ್ದು, ಯಾವುದೇ ದೈನಂದಿನ ಡೇಟಾ ಮಿತಿ ಪಡೆದಿಲ್ಲ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆ ಸೌಲಭ್ಯ ಸಹ ದೊರೆಯುತ್ತದೆ. ಪ್ರತಿದಿನ 100 ಎಸ್‌ಎಮ್‌ಎಸ್ ಉಚಿತವಾಗಿ ನೀಡುತ್ತದೆ.
Poco F3 GT: ಇಂದು ಒಂದೇ ದಿನ ಭಾರತದಲ್ಲಿ ರಿಲೀಸ್ ಆಯ್ತು ಬರೋಬ್ಬರಿ 3 ಫೋನ್: ಯಾವುವು?, ಏನು ವಿಶೇಷತೆ?