Poco F3 GT: ಇಂದು ಒಂದೇ ದಿನ ಭಾರತದಲ್ಲಿ ರಿಲೀಸ್ ಆಯ್ತು ಬರೋಬ್ಬರಿ 3 ಫೋನ್: ಯಾವುವು?, ಏನು ವಿಶೇಷತೆ?
ಇಂದು ಬಿಡುಗಡೆ ಆಗಿರುವ ಪೋಕೋ ಎಫ್3 ಜಿಟಿ, ಗ್ಯಾಲಕ್ಸಿ ಎ22 5ಜಿ ಮತ್ತು ನೋಕಿಯಾ 110 4ಜಿ ಫೋನುಗಳ ವಿಶೇಷತೆ ಏನು ಎಂಬುದನ್ನು ನೋಡೋಣ…
ಭಾರತದ ಮೊಬೈಲ್ ಮಾರುಕಟ್ಟೆ ಸ್ಮಾರ್ಟ್‌ಫೋನ್ (Smartphone) ಕಂಪೆನಿಗಳ ನೆಚ್ಚಿನ ತಾಣವಾಗಿದೆ. ಇದಕ್ಕಾಗಿಯೆ ಕಡಿಮೆ ಬೆಲೆಗೆ ಆಕರ್ಷಕ ಫೀಚರ್ಗಳುಳ್ಳ ಫೋನನ್ನು ವಿದೇಶಿ ಕಂಪೆನಿಗಳು ಭಾರತದಲ್ಲಿ ಬಿಡುಗಡೆ ಮಾಡುತ್ತವೆ. ಹೆಚ್ಚಾಗಿ ದಿನಕ್ಕೊಂದರಂತೆ ಸ್ಮಾರ್ಟ್ಫೋನ್ಗಳು ಭಾರತರದಲ್ಲಿ ಅನಾವರಣಗೊಳ್ಳುತ್ತದೆ. ಆದರೆ, ಇಂದು ಒಂದೇ ದಿನ ಶುಕ್ರವಾರ ಭಾರತದಲ್ಲಿ ಬರೋಬ್ಬರಿ 3 ಮೊಬೈಲ್ಗಳು ಲಾಂಚ್ ಆಗಿವೆ. ಮೊದಲನೆಯದಾಗಿ ಸ್ಯಾಮ್‌ಸಂಗ್ ಕಂಪೆನಿಯ ಗ್ಯಾಲಕ್ಸಿ ಎ 22 5ಜಿ (Galaxy A22 5G), ನಂತರ ಪೋಕೋ ಎಫ್3 ಜಿಟಿ (Poco F3 GT) ಹಾಗೂ ನೋಕಿಯಾದ 110 4ಜಿ (Nokia 110 4G) ಫೋನುಗಳು ಇಂದು ಬಿಡುಗಡೆ ಆಗಿದೆ. ಹಾಗಾದ್ರೆ ಇಂದು ಬಿಡುಗಡೆ ಆಗಿರುವ ಈ 3 ಫೋನುಗಳ ವಿಶೇಷತೆ ಏನು ಎಂಬುದನ್ನು ನೋಡೋಣ…
ಸ್ಯಾಮ್‌ಸಂಗ್ ಗ್ಯಾಲಕ್ಸಿ A22 5G: ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ A22 5G ಸ್ಮಾರ್ಟ್‌ಫೋನ್ 6.6 ಇಂಚಿನ ಫುಲ್-ಹೆಚ್‌ಡಿ + ಇನ್ಫಿನಿಟಿ-ವಿ ಡಿಸ್‌ಪ್ಲೇ ಹೊಂದಿದೆ. ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್ ಸಾಮರ್ಥ್ಯ ಪಡೆದುಕೊಂಡಿದ್ದು, 6GB RAM + 128GB ಮತ್ತು 8GB RAM + 128GB ಇಂಟರ್ ಸ್ಟೋರೇಜ್ ಸಾಮರ್ಥ್ಯದ ಎರಡು ವೇರಿಯೆಂಟ್ ನೀಡಲಾಗಿದೆ. ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 15W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 6GB RAM + 128GB ಶೇಖರಣಾ ರೂಪಾಂತರಕ್ಕೆ 19,999ರೂ. ಬೆಲೆ ಮತ್ತು 8GB RAM+ 128GB ಸ್ಟೋರೇಜ್ ಆವೃತ್ತಿಯ ಬೆಲೆ 21,999 ರೂ. ಆಗಿದೆ.
ಪೋಕೋ F3 GT: ಗೇಮಿಂಗ್ ಫೀಚರ್ಸ್ ಒಳಗೊಂಡಿರುವ ಪೋಕೋ F3 GT ಸ್ಮಾರ್ಟ್‌ಫೋನ್ 6.67-ಇಂಚಿನ ಟರ್ಬೊ ಅಮೋಲೆಡ್ 10-ಬಿಟ್ ಡಿಸ್ಪ್ಲೇಯನ್ನು ಹೊಂದಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 1200 SoC ಪ್ರೊಸೆಸರ್ ಬಲ ಪಡೆದುಕೊಂಡಿದ್ದು, ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ. ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಅನ್ನು ಒಳಗೊಂಡಿದೆ. 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. 5,065mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 67W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಕೇವಲ 15 ನಿಮಿಷಗಳಲ್ಲಿ ಫೋನ್ ಅರ್ಧದಾರಿಯಲ್ಲೇ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ. 6GB RAM + 128GB ಸ್ಟೋರೇಜ್ ಆಯ್ಕೆಗೆ 26,999 ರೂ, ಹಾಗೂ 8GB RAM+ 128GB ಸ್ಟೋರೇಜ್ ಆಯ್ಕೆಗೆ 28,999,ರೂ ಬೆಲೆಯನ್ನು ಹೊಂದಿದೆ. ಇನ್ನು 8GB RAM + 256GB ಸಂಗ್ರಹದ ಬೆಲೆ 30,999 ರೂ. ಹೊಂದಿದೆ. ಜುಲೈ 26 ರಂದು ಮಧ್ಯಾಹ್ನ 12 ಗಂಟೆಗೆ ಮಾರಾಟ ಪ್ರಾರಂಭವಾಗಲಿದೆ.
ನೋಕಿಯಾ 110 4G: ಆಕರ್ಷಕವಾದ ವಿನ್ಯಾಸವನ್ನು ಒಳಗೊಂಡಿರುವ ನೋಕಿಯಾ 110 4G ಫೋನ್ ಭಾರತದಲ್ಲಿ ಕೇವಲ 2,799 ರೂ. ಗೆ ಲಭ್ಯವಾಗುತ್ತಿದೆ. ಇದು 1.8-ಇಂಚಿನ QVGA ಕಲರ್ ಡಿಸ್‌ಪ್ಲೇ ಹೊಂದಿದೆ. ಇದು ಯುನಿಸಾಕ್ T107 SoC ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ. ಈ ಫೀಚರ್‌ಫೋನ್ 128MB RAM ಮತ್ತು 48MB ಇಂಟರ್ ಸ್ಟೋರೇಜ್ ಆಯ್ಕೆ ಹೊಂದಿದೆ. 0.8 ಮೆಗಾಪಿಕ್ಸೆಲ್ ಕ್ಯೂವಿಜಿಎ ಹಿಂಬದಿಯ ಕ್ಯಾಮೆರಾ ಕೂಡ ಇದೆ. ಹೆಚ್‌ಡಿ ವಾಯ್ಸ್ ಕಾಲಿಂಗ್ ಬೆಂಬಲವನ್ನು ಹೊಂದಿದೆ. ಇನ್ನು ಈ ಫೀಚರ್ ಫೋನ್ ತೆಗೆಯಬಹುದಾದ 1,020mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ, ಇದು 13 ದಿನಗಳ ಸ್ಟ್ಯಾಂಡ್‌ಬೈ ಸಮಯ, 16 ಗಂಟೆಗಳ ಸಂಗೀತ ಪ್ಲೇಬ್ಯಾಕ್ ಮತ್ತು 5 ಗಂಟೆಗಳ 4 ಜಿ ಟಾಕ್‌ಟೈಮ್ ವರೆಗೆ ಇರುತ್ತದೆ ಎಂದು ಕಂಪೆನಿ ತಿಳಿಸಿದೆ.
Internet Outage: ಅಮೆಜಾನ್, ಝೊಮ್ಯಾಟೋ ಸೇರಿದಂತೆ ಹಲವು ಪ್ರಮುಖ ವೆಬ್ಸೈಟ್ಗಳಲ್ಲಿ ಇಂಟರ್ನೆಟ್ ಸಮಸ್ಯೆ
Nokia 110 4G: ಕೇವಲ 2799 ರೂ. ಗೆ ಆಕರ್ಷಕ 4G ಫೋನ್ ಬಿಡುಗಡೆ ಮಾಡಿದ ನೋಕಿಯಾ: ಏನು ವಿಶೇಷತೆ?
Published On - 8:32 pm, Fri, 23 July 21