Internet Outage: ಅಮೆಜಾನ್, ಝೊಮ್ಯಾಟೋ ಸೇರಿದಂತೆ ಹಲವು ಪ್ರಮುಖ ವೆಬ್​ಸೈಟ್​ಗಳಲ್ಲಿ ಇಂಟರ್​ನೆಟ್ ಸಮಸ್ಯೆ

ಜುಲೈ 22ನೇ ತಾರೀಕು ಗುರುವಾರ ಜಾಗತಿಕ ಮಟ್ಟದಲ್ಲಿ ಇಂಟರ್​ನೆಟ್​ ಸಮಸ್ಯೆ ತಲೆದೋರಿದ್ದು, ಅದಕ್ಕೆ ನಿರ್ದಿಷ್ಟ ಕಾರಣ ಏನು ಎಂಬ ಅಂಶವು ತಿಳಿದುಬಂದಿಲ್ಲ.

Internet Outage: ಅಮೆಜಾನ್, ಝೊಮ್ಯಾಟೋ ಸೇರಿದಂತೆ ಹಲವು ಪ್ರಮುಖ ವೆಬ್​ಸೈಟ್​ಗಳಲ್ಲಿ ಇಂಟರ್​ನೆಟ್ ಸಮಸ್ಯೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jul 22, 2021 | 11:58 PM

ಡಿಜಿಟಲ್ ಪ್ಲಾಟ್​ಫಾರ್ಮ್​ಗಳಾದ ಅಮೆಜಾನ್, ಝೊಮ್ಯಾಟೋ, Myntra ಮತ್ತಿತರ ಡಿಜಿಟಲ್ ಪ್ಲಾಟ್​ಫಾರ್ಮ್​ಗಳಲ್ಲಿ ಜುಲೈ 22ನೇ ತಾರೀಕಿನ ಗುರುವಾರ ತಾತ್ಕಾಲಿಕವಾಗಿ ತಡೆ ಆಗಿದ್ದು, ತಾಂತ್ರಿಕ ಸಮಸ್ಯೆ ಎದುರಾಗಿದೆ. ಇವುಗಳ ಕಂಟೆಂಟ್ ವಿತರಣೆ ಜಾಲವು Akamaiಗೆ ಜೋಡಣೆ ಆಗಿವೆ. ಜೂನ್​ ನಂತರದಲ್ಲಿ ಇದು ಎರಡನೇ ಬಾರಿಗೆ ವಿಶ್ವದಾದ್ಯಂತ ಹೀಗೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಕೊನೆಯದಾಗಿ ಜೂನ್​ 8ನೇ ತಾರೀಕಿನಂದು ಈ ರೀತಿ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಡೆಲ್ಟಾ ಏರ್​ಲೈನ್ಸ್, ಅಮೆಜಾನ್, Myntra, ಫುಡ್ ಡೆಲಿವರಿ ಆ್ಯಪ್​ ಝೊಮ್ಯಾಟೋ, ಪೇಮೆಂಟ್ ಆ್ಯಪ್ ಪೇಟಿಎಂ, ಒಟಿಟಿ ಪ್ಲಾಟ್​ಫಾರ್ಮ್​ ಡಿಸ್ನಿ+ ಹಾಟ್​ಸ್ಟಾರ್, ಗೇಮ್ಸ್​ಗಳಾದ ಕಾಲ್ ಆಫ್ ಡ್ಯೂಟಿ, ಅದರ ಜತೆಗೆ ಬ್ಯಾಂಕ್ ಹೋಸ್ಟ್​ ಪುಟಗಳು ಸಹ ಲೋಡ್​ ಆಗುತ್ತಿರಲಿಲ್ಲ. ಈ ಬಗ್ಗೆ ಟ್ರ್ಯಾಕಿಂಗ್ ವೆಬ್​ಸೈಟ್​ ಡೌನ್​ ಡಿಟೆಕ್ಟರ್ ವರದಿ ಮಾಡಿದೆ. Akamaiಗೆ ನಂಟು ಹೊಂದಿಕೊಂಡಂತಿರುವ PlayStation Network ಮತ್ತು Steam ಸಹ ಡೌನ್ ಆಗಿತ್ತು.

ಆಪಲ್​ನ ಸಿಸ್ಟಮ್ ಸ್ಟೇಟಸ್ ಪೇಜ್ ಪ್ರಕಾರ, ಐಕ್ಲೌಡ್ ಬ್ಯಾಕ್​ಅಪ್, ಐಕ್ಲೌಡ್ ಮೇಲ್, ಐಕ್ಲೌಡ್ ಸ್ಟೋರೇಜ್ ಅಪ್​ಗ್ರೇಡ್ಸ್​ ಮತ್ತು ಫೋಟೋಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಕಾಣಿಸಿಕೊಂಡಿತು. ಆದರೆ ಈ ಸಮಸ್ಯೆ ಕಾಣಿಸಿಕೊಂಡಿದ್ದು Akamai ಸೇವೆ ವ್ಯತ್ಯಯದ ಪರಿಣಾಮದಿಂದ ಹೌದೋ ಅಲ್ಲವೋ ಎಂಬುದು ಗೊತ್ತಾಗಿಲ್ಲ. ಆ್ಯಪ್ ಡೌನ್ ಆಗಿರುವ ಬಗ್ಗೆ ಝೊಮ್ಯಾಟೋದಿಂದ ಟ್ವಿಟ್ಟರ್​ನಲ್ಲಿ ಮಾಹಿತಿ ನೀಡಲಾಗಿದೆ. Akamai ತಾಂತ್ರಿಕ ಸಮಸ್ಯೆಯಿಂದ ನಮ್ಮ ಆ್ಯಪ್ ಡೌನ್ ಆಗಿದೆ. ನಮ್ಮ ತಂಡವು ಎಲ್ಲ ಆರ್ಡರ್ ಆಗಿದೆ ಮತ್ತು ಶೀಘ್ರವಾಗಿ ಡೆಲಿವರಿ ಆಗಿದೆ ಎಂಬುದನ್ನು ಖಾತ್ರಿ ಪಡಿಸಲಾಗುತ್ತಿದೆ ಎಂದಿದೆ.

Akamai ಎಂದು ಇಂಟರ್​ನೆಟ್ ಮೂಲಸೌಕರ್ಯ ಕಂಪೆನಿ. ಇದು ಸಮಸ್ಯೆಯ ಕೇಂದ್ರಬಿಂದುವಾಗಿದೆ. ಇದು ಸೇವೆಯಲ್ಲಿ ವ್ಯತ್ಯಯವನ್ನು ಅನುಭವಿಸುತ್ತಿರುವುದಾಗಿ ಟ್ವೀಟ್ ಮಾಡಿದೆ. ಅದು ಟ್ವೀಟ್ ಮಾಡಿರುವಂತೆ, Akamai ಸೇವೆ ವ್ಯತ್ಯಯವನ್ನು ಅನುಭವಿಸಿದೆ. ನಾವು ಈ ಸಮಸ್ಯೆಗೆ ಕಾರಣ ಏನು ಎಂಬ ವಿಚಾರಣೆ ನಡೆಸುತ್ತಿದ್ದೇವೆ. 30 ನಿಮಿಷದಲ್ಲಿ ಅಪ್​ಡೇಟ್​ ನೀಡತ್ತೇವೆ ಎಂದು ಹೇಳಿಕೊಂಡಿದೆ. ಹಲವು ಬಳಕೆದಾರರು ಸಮಸ್ಯೆ ಬಗ್ಗೆ ವರದಿ ಮಾಡಿದ್ದಾರೆ. Error 503 ಅಥವಾ Service Unavailabe- DNS failure ಅಂತ ಬಂದಿದೆ.

ಏನಿದು Error 503? Error 503 ಇದನ್ನು ಅರ್ಥ ಮಾಡಿಕೊಳ್ಳಬೇಕು ಅಂದರೆ ವೆಬ್​ಸೈಟ್​ ಹೇಗೆ ಕೆಲಸ ಮಾಡುತ್ತದೆ ಅಂತ ತಿಳಿಯಬೇಕು. ವೆಬ್​ಸೈಟ್​ ತನ್ನಷ್ಟಕ್ಕೆ ಕೋಡ್​ಗಳು ಮತ್ತು ಪುಟಗಳ ಸಂಗ್ರಹ. ಈ ಕೋಡ್​ಗಳು ಫಾರ್ಮಾಟಿಂಗ್ ಮತ್ತು ಪೇಜ್​ ಲೇಔಟ್​ನಲ್ಲಿ ಕಂಟೆಂಟ್ ಡಿಸ್​ಪ್ಲೇ ಸಹಾಯ ಮಾಡುತ್ತವೆ. ನಿಜವಾದ ವರ್ಕ್​ಹಾರ್ಸ್​ ಬಂದು ವೆಬ್​ಸರ್ವರ್​. ಇದನ್ನು ಇನ್ನೊಂದು ಕಂಪ್ಯೂಟರ್​ ರೀತಿ ಅಂದುಕೊಳ್ಳಿ. ಕೆಲವು ನಿರ್ದಿಷ್ಟ ಪುಟವನ್ನು ತೋರಿಸಲು ಸಿದ್ಧವಾಗಿರುತ್ತದೆ. ಯಾವಾಗ ಪುಟವನ್ನು ನೇವಿಗೇಟ್​ ಮಾಡಲು ಬ್ರೌಸರ್​ ಬಳಸುತ್ತೀರೀ ಆಗ ವೆಬ್​ ಸರ್ವರ್​ ಆ ಮನವಿಯ ನಿರ್ವಹಣೆ ಮಾಡುತ್ತದೆ ಮತ್ತು ಡೇಟಾ ಬೇಸ್​ನಿಂದ ಆ ಮಾಹಿತಿಯನ್ನು ಹೊರತೆಗೆಯುತ್ತದೆ. ಅದಾದ ಮೇಲೆ ಆಯಾ ವೆಬ್​ ಪೇಜ್​ನಲ್ಲಿ ತೋರಿಸುತ್ತದೆ. ಯಾವಾಗ ಮನವಿ ಹ್ಯಾಂಡಲ್ ಮಾಡಲು ಆಗುವುದಿಲ್ಲವೋ ಆಗ Error 503 ಕಾಣಿಸುತ್ತದೆ.

ಇದನ್ನೂ ಓದಿ: 503 service unavailable: ಜಾಗತಿಕ ಮಟ್ಟದಲ್ಲೇ ಇಂಟರ್​ನೆಟ್ ಸಮಸ್ಯೆ; ಬಿಬಿಸಿ, ಅಮೆಜಾನ್ ಹೀಗೆ ನಾನಾ ವೆಬ್​ಸೈಟ್​ಗಳು ಸಿಕ್ತಿಲ್ಲ

Published On - 11:57 pm, Thu, 22 July 21