503 service unavailable: ಜಾಗತಿಕ ಮಟ್ಟದಲ್ಲೇ ಇಂಟರ್ನೆಟ್ ಸಮಸ್ಯೆ; ಬಿಬಿಸಿ, ಅಮೆಜಾನ್ ಹೀಗೆ ನಾನಾ ವೆಬ್ಸೈಟ್ಗಳು ಸಿಕ್ತಿಲ್ಲ
ಜಾಗತಿಕ ಮಟ್ಟದಲ್ಲಿ ಇ ಕಾಮರ್ಸ್ ಸೈಟ್ಗಳು, ಸುದ್ದಿ ಮಾಧ್ಯಮಗಳ ವೆಬ್ಸೈಟ್ಗಳಲ್ಲಿ ಮಂಗಳವಾರ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತು. ಏನು ಸಮಸ್ಯೆ, ಯಾವುದರಿಂದ ಆಗಿದ್ದು ಎಂಬುದರ ವಿವರ ಇಲ್ಲಿದೆ.
ಸೋಷಿಯಲ್ ಮೀಡಿಯಾ, ಸರ್ಕಾರ ಮತ್ತು ಸುದ್ದಿ ವೆಬ್ಸೈಟ್ಗಳಲ್ಲಿ ಜಾಗತಿಕ ಮಟ್ಟದಲ್ಲಿ ಮಂಗಳವಾರ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದಕ್ಕೆ ಕಾರಣ ಎಂದು ಕೆಲವು ವರದಿಗಳು ಅಮೆರಿಕ ಮೂಲದ ಕ್ಲೌಡ್ ಕಂಪ್ಯೂಟಿಂಗ್ ಸರ್ವೀಸ್ ಒದಗಿಸುವ ‘ಫಾಸ್ಟ್ಲಿ’ ಕಡೆಗೆ ಬೊಟ್ಟು ಮಾಡಿವೆ. ಈ ಸಮಸ್ಯೆಯಿಂದಲೇ ವೆಬ್ಸೈಟ್ಗಳ ಮೇಲೆ ಪರಿಣಾಮ ಆಗಿದೆ ಎಂಬ ಬಗ್ಗೆ ರಾಯಿಟರ್ಸ್ ಸುದ್ದಿ ಸಂಸ್ಥೆಯಿಂದ ತಕ್ಷಣವೇ ಯಾವುದೇ ಖಾತ್ರಿ ಬಂದಿಲ್ಲ. ಫಾಸ್ಟ್ಲಿ ಈ ಬಗ್ಗೆ ಮಾತನಾಡಿ, ಪರ್ಫಾರ್ಮೆನ್ಸ್ ಮೇಲೆ ಪರಿಣಾಮ ಬೀರುವ ನಮ್ಮ ಸಿಡಿಎಸ್ ಸರ್ವೀಸಸ್ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದೆ.
ಫಾಸ್ಟ್ಲಿ ಕವರೇಜ್ ವಿಷಯಗಳು ಹಲವು ಕೆಳಹಂತದ ಪರ್ಫಾರ್ಮೆನ್ಸ್ ಎದುರಿಸುತ್ತಿರುವುದಾಗಿ ಹೇಳಲಾಗಿದೆ. ಪ್ರತ್ಯೇಕವಾಗಿ ಅಮೆಜಾನ್.ಕಾಮ್ ಇಂಕ್ ರೀಟೇಲ್ ವೆಬ್ಸೈಟ್ ಕೂಡ ಡೌನ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕಂಪೆನಿ ಲಭ್ಯವಾಗಿಲ್ಲ. 21,000 Reddit ಬಳಕೆದಾರರು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಜತೆಗೆ ಸಮಸ್ಯೆ ಎದುರಿಸುತ್ತಿರುವುದಾಗಿ ಹೇಳಿದ್ದಾರೆ. 2000ಕ್ಕೂ ಹೆಚ್ಚು ಬಳಕೆದಾರರು ಅಮೆಜಾನ್ನಲ್ಲಿ ಸಮಸ್ಯೆ ಇರುವುದಾಗಿ ಹೇಳಿದ್ದಾರೆ ಎಂದು ಡೌನ್ಡಿಟೆಕ್ಟರ್ಸ್ ವೆಬ್ಸೈಟ್ ತಿಳಿಸಿದೆ.
ಬಿಬಿಸಿ, ಫೈನಾನ್ಷಿಯಲ್ ಟೈಮ್ಸ್, ಗಾರ್ಡಿಯನ್, ದ ನ್ಯೂ ಯಾರ್ಕ್ ಟೈಮ್ಸ್ ಮತ್ತು ಬ್ಲೂಮ್ ಬರ್ಗ್ ನ್ಯೂಸ್ ಕೂಡ ತಾಂತ್ರಿಕ ದೋಷದ ಸಮಸ್ಯೆಯನ್ನು ಎದುರಿಸಿದೆ ಎಂದು ತಿಳಿದುಬಂದಿದೆ. 503 service unavailable ಎಂದು ಸಂದೇಶವನ್ನು ತೋರಿಸಿದೆ. ಹೀಗಂದರೆ, ಮನವಿಯನ್ನು ನಿರ್ವಹಿಸುವುದಕ್ಕೆ ಸರ್ವರ್ ಸಿದ್ಧವಿಲ್ಲ ಎಂದರ್ಥ. ಹೀಗೆ ಆಗುವುದಕ್ಕೆ ಸಾಮಾನ್ಯ ಕಾರಣಗಳು ಏನೆಂದರೆ, ನಿರ್ವಹಣೆಗಾಗಿ ಅಥವಾ ಓವರ್ಲೋಡ್ನಿಂದ ಸರ್ವರ್ ಡೌನ್ ಆಗಿರುತ್ತದೆ.
ಇದನ್ನೂ ಓದಿ: NSE Nifty Glitches: ತಾಂತ್ರಿಕ ಸಮಸ್ಯೆಯಿಂದ ನಿಫ್ಟಿ ವಹಿವಾಟು ಸ್ಥಗಿತ
(Global internet outage on Tuesday. Biggest websites down. Here is the reason behind issue)
Published On - 5:03 pm, Tue, 8 June 21