NSE Nifty Glitches: ತಾಂತ್ರಿಕ ಸಮಸ್ಯೆಯಿಂದ ನಿಫ್ಟಿ ವಹಿವಾಟು ಸ್ಥಗಿತ

ತಾಂತ್ರಿಕ ಸಮಸ್ಯೆಯಿಂದ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕ ಎನ್ ಎಸ್ ಇ ನಿಫ್ಟಿ ಫೆಬ್ರವರಿ 24ರ ಬುಧವಾರ ಬೆಳಗ್ಗೆ 10 ಗಂಟೆಯಿಂದಲೇ ಎಲ್ಲ ಸೆಗ್ಮೆಂಟ್ ನಲ್ಲೂ ವಹಿವಾಟು ನಿಲ್ಲಿಸಿದೆ. 

NSE Nifty Glitches: ತಾಂತ್ರಿಕ ಸಮಸ್ಯೆಯಿಂದ ನಿಫ್ಟಿ ವಹಿವಾಟು ಸ್ಥಗಿತ
ಸಾಂದರ್ಭಿಕ ಚಿತ್ರ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Feb 24, 2021 | 2:01 PM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಎನ್​ಎಸ್​ಇ (National Stock Exchange – NSE) ಫೆಬ್ರವರಿ 24ರ ಬೆಳಗ್ಗೆ 10.08ರ ಸುಮಾರಿಗೆ ಅಡ್​ಡೇಟ್ ಆಗುವುದು ನಿಂತಿತ್ತು. ಈ ಬಗ್ಗೆ ಸಿಎನ್​ಬಿಸಿ ಟಿವಿ18 ವರದಿ ಮಾಡಿತು. ಆ ನಂತರ 11.40ರಲ್ಲಿ ಫ್ಯೂಚರ್ ಅಂಡ್ ಆಪ್ಷನ್ಸ್ ಹಾಗೂ 11.43ರಲ್ಲಿ ಕ್ಯಾಶ್ ಮಾರುಕಟ್ಟೆಯನ್ನು ಸ್ಥಗಿತಗೊಳಿಸಲಾಯಿತು. ಶೀಘ್ರದಲ್ಲೇ ಸಮಸ್ಯೆ ನಿವಾರಣೆ ಮಾಡುವುದಾಗಿ ಎನ್​ಎಸ್​ಇ ಟ್ವೀಟ್ ಮಾಡಿತು. ಎನ್ಎಸ್​ಇ ಎರಡು ಟೆಲಿಕಾಂ ಸೇವೆಯನ್ನು ಪಡೆಯುತ್ತದೆ. ಎರಡರಲ್ಲೂ ಸಮಸ್ಯೆ ಎದುರಾಗಿದ್ದರಿಂದ ಇಂತಹ ಸ್ಥಿತಿ ಏರ್ಪಟ್ಟಿತು ಎಂದು ತಿಳಿಸಿರುವುದಾಗಿ ಎನ್​ಎಸ್​ಇ ಮತ್ತೊಂದು ಟ್ವೀಟ್ ಮಾಡಿದೆ.

ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನ ನಗದು, ಫ್ಯೂಚರ್ಸ್ ಅಂಡ್ ಆಪ್ಷನ್ಸ್ ಸೇರಿ ಎಲ್ಲ ಸೆಗ್ಮೆಂಟ್​ಗಳ ವಹಿವಾಟನ್ನು ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಬುಧವಾರ ಸ್ಥಗಿತಗೊಳಿಸಿದರೆ, ಬಿಎಸ್​ಇ ಸೆನ್ಸೆಕ್ಸ್ ವ್ಯವಹಾರ ಮುಂದುವರಿಸಿದೆ.

‘ಎನ್​ಎಸ್​ಇ ನಿಫ್ಟಿ, ಬ್ಯಾಂಕ್ ನಿಫ್ಟಿ, ನಗದು ದರಗಳು ಬೆಳಗ್ಗೆಯಿಂದಲೇ ಅಪ್​ಡೇಟ್ ಆಗುತ್ತಿಲ್ಲ. ಇದು ಈ ಎಕ್ಸ್​ಚೇಂಜ್​ನ ಸಮಸ್ಯೆ ಮತ್ತು ನಮಗೆ ಪರ್ಯಾಯಗಳು ಇಲ್ಲ’ ಎಂದು ಷೇರು ದಲ್ಲಾಳಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ.

ಫ್ಯೂಚರ್ಸ್ ಮಾರ್ಕೆಟ್ ದರಕ್ಕೆ ನಗದು ಮಾರುಕಟ್ಟೆಯ ದರವು ರೆಫರೆನ್ಸ್ ಇದ್ದಂತೆ. ಎನ್​ಎಸ್​ಇಯಲ್ಲಿ ಈ ರೀತಿಯ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷವೂ ಇಂಥ ಸಮಸ್ಯೆ ಹಲವು ಬಾರಿ ಆಗಿದೆ. ಈ ಸಮಸ್ಯೆಗೆ ಎಕ್ಸ್ ಚೇಂಜ್​ಗೆ ಸೆಬಿ ದಂಡ ವಿಧಿಸಿತ್ತು. ತಾಂತ್ರಿಕ ಸಮಸ್ಯೆಯಿಂದ ಉಂಟಾಗುವ ಸಮಸ್ಯೆಗೆ ಪರಿಹಾರ ನೀಡುವ ನೀತಿಯೊಂದನ್ನು ರೂಪಿಸುವುದಕ್ಕೆ ಸೆಬಿ ಯೋಚನೆ ಮಾಡುತ್ತಿದೆ.

ಇದನ್ನೂ ಓದಿ: Stock Market: ಷೇರು ಮಾರುಕಟ್ಟೆ ಬೆಳವಣಿಗೆಯಿಂದ ಜನ ಸಾಮಾನ್ಯರಿಗೇನು ಲಾಭ?

ಇದನ್ನೂ ಓದಿ: Market Bloodbath: ಷೇರುಪೇಟೆ ಕುಸಿತ; ಕರಗಿತು ಹೂಡಿಕೆದಾರರ 3.7 ಲಕ್ಷ ಕೋಟಿ ಸಂಪತ್ತು

Published On - 1:53 pm, Wed, 24 February 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್