Market Bloodbath: ಷೇರುಪೇಟೆ ಕುಸಿತ; ಕರಗಿತು ಹೂಡಿಕೆದಾರರ 3.7 ಲಕ್ಷ ಕೋಟಿ ಸಂಪತ್ತು

ದೇಶದ ವಿವಿಧ ಭಾಗಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿ, ಎರಡನೇ ಅಲೆಯ ಆತಂಕದಲ್ಲಿ ಹೂಡಿಕೆದಾರರು ಇದ್ದಾರೆ. ಆ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ 1,145 ಪಾಯಿಂಟ್ ಅಥವಾ 2.25 ಪರ್ಸೆಂಟ್ ಕೆಳಗಿಳಿಯಿತು.

Market Bloodbath: ಷೇರುಪೇಟೆ ಕುಸಿತ; ಕರಗಿತು ಹೂಡಿಕೆದಾರರ 3.7 ಲಕ್ಷ ಕೋಟಿ ಸಂಪತ್ತು
ಷೇರು ಮಾರುಕಟ್ಟೆ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: Feb 22, 2021 | 7:54 PM

ಮುಂಬೈ: ಭಾರತದ ಷೇರು ಮಾರ್ಕೆಟ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಬಿಎಸ್​ಇ ಲಿಸ್ಟೆಡ್ ಷೇರುಗಳು 3.72 ಲಕ್ಷ ಕೋಟಿ ರೂಪಾಯಿ ನಷ್ಟ ಕಂಡಿದ್ದು, ಹೂಡಿಕೆದಾರರ 3.7 ಲಕ್ಷ ಕೋಟಿ ರೂಪಾಯಿಯಷ್ಟು ಸಂಪತ್ತು ಕೊಚ್ಚಿ ಹೋಗಿದೆ.

ದೇಶದ ವಿವಿಧ ಭಾಗಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿ, ಎರಡನೇ ಅಲೆಯ ಆತಂಕದಲ್ಲಿ ಹೂಡಿಕೆದಾರರು ಇದ್ದಾರೆ. ಆ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ 1,145 ಪಾಯಿಂಟ್ ಅಥವಾ 2.25 ಪರ್ಸೆಂಟ್ ಕೆಳಗಿಳಿದು, 49,744.32 ಪಾಯಿಂಟ್ ನಲ್ಲಿ ವ್ಯವಹಾರ ಮುಗಿಸಿದೆ.

ನಿಫ್ಟಿ 306 ಪಾಯಿಂಟ್ ಅಥವಾ 2.04 ಪರ್ಸೆಂಟ್ ಇಳಿಕೆಯಾಗಿ, 14,675.70 ಪಾಯಿಂಟ್​ನೊಂದಿಗೆ ವಹಿವಾಟು ಮುಗಿಸಿದೆ. ಒಟ್ಟಾರೆಯಾಗಿ ಬಿಎಸ್​ಇ ಲಿಸ್ಟೆಡ್ ಕಂಪೆನಿಗಳ ಮಾರುಕಟ್ಟೆ ಬಂಡವಾಳ 203.98 ಲಕ್ಷ ಕೋಟಿ ರೂಪಾಯಿಯಿಂದ 200.26 ಲಕ್ಷ ಕೋಟಿಗೆ ಇಳಿದಿದ್ದು, ಹೂಡಿಕೆದಾರರು 3.7 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.

ಡಿಸೆಂಬರ್ 21, 2020ರಂದು 1407 ಪಾಯಿಂಟ್ ಕುಸಿತ ಕಂಡಿತ್ತು ಸೆನ್ಸೆಕ್ಸ್. ಆ ನಂತರ ಒಂದು ದಿನದಲ್ಲಿ ಕಾಣುತ್ತಿರುವ ಅತಿ ದೊಡ್ಡ ಇಳಿಕೆ ಇದಾಗಿದೆ. 2015ರಿಂದ ಈಚೆಗೆ 18 ಬಾರಿ ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಪಾಯಿಂಟ್ ಕುಸಿದಿದೆ. ಅದರಲ್ಲೂ 1979ರ ನಂತರ ಒಂದೇ ದಿನದಲ್ಲಿ ಮಾರ್ಕೆಟ್ ಅತಿ ಹೆಚ್ಚು ನಷ್ಟ ಕಂಡಿದ್ದು ಮಾರ್ಚ್ 23, 2020ರಲ್ಲಿ.

ದಿನಾಂಕ ಕುಸಿತ
23/3/2020 3,934.72
12/3/2020 2,919.26
16/3/2020 2713.41
4/5/2020 2002.27
9/3/2020 1941.67
18/3/2020 1709.58
24/8/2015 1624.51
28/2/2020 1448.37
21/1/2008 1408.35
21/12/2020 1406.73

ಸೋಮವಾರ ನಿಫ್ಟಿಯಲ್ಲಿ ಇಳಿಕೆ ಕಂಡ ಟಾಪ್ 5 ಕಂಪೆನಿಗಳು

ಮಹೀಂದ್ರಾ ಅಂಡ್ ಮಹೀಂದ್ರಾ – ಶೇ 4.79

ಡಾ. ರೆಡ್ಡೀಸ್ ಲ್ಯಾಬ್ಸ್ – ಶೇ 4.53

ಟೆಕ್ ಮಹೀಂದ್ರಾ – ಶೇ 4.35

ಐಟಿಸಿ – ಶೇ 4.12

ಇಂಡಸ್ ಇಂಡ್ ಬ್ಯಾಂಕ್ – ಶೇ 4.03

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್