HD Kumaraswamy | ‘ಹಳ್ಳಿಗಳಲ್ಲಿ ಇತ್ತೀಚೆಗೆ ಒಂದು ಹೊಸ ಸ್ಟೈಲ್ ಶುರುವಾಗಿದೆ.. ಕೇಸರಿ ಟವಲ್ ಹಾಕಿಕೊಂಡು ಓಡಾಡೋದು’

ಹಳ್ಳಿಗಳಲ್ಲಿ ಇತ್ತೀಚೆಗೆ ಒಂದು ಹೊಸ ಸ್ಟೈಲ್ ಶುರುವಾಗಿದೆ. ಜನರು ಇದೀಗ ಕೇಸರಿ ಟವಲ್ ಹಾಕಿಕೊಂಡು ಓಡಾಡುತ್ತಾರೆ ಎಂದು ಜಿಲ್ಲೆಯ ತುರುವೇಕೆರೆ ತಾಲೂಕಿನ ಸೀಗೇಹಳ್ಳಿಯಲ್ಲಿ ಮಾಜಿ ಸಿಎಂ H.D.ಕುಮಾರಸ್ವಾಮಿ ಹೇಳಿದ್ದಾರೆ.

HD Kumaraswamy | ‘ಹಳ್ಳಿಗಳಲ್ಲಿ ಇತ್ತೀಚೆಗೆ ಒಂದು ಹೊಸ ಸ್ಟೈಲ್ ಶುರುವಾಗಿದೆ.. ಕೇಸರಿ ಟವಲ್ ಹಾಕಿಕೊಂಡು ಓಡಾಡೋದು’
ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ
Follow us
KUSHAL V
|

Updated on:Feb 22, 2021 | 7:27 PM

ತುಮಕೂರು: ಹಳ್ಳಿಗಳಲ್ಲಿ ಇತ್ತೀಚೆಗೆ ಒಂದು ಹೊಸ ಸ್ಟೈಲ್ ಶುರುವಾಗಿದೆ. ಜನರು ಇದೀಗ ಕೇಸರಿ ಟವಲ್ ಹಾಕಿಕೊಂಡು ಓಡಾಡುತ್ತಾರೆ ಎಂದು ಜಿಲ್ಲೆಯ ತುರುವೇಕೆರೆ ತಾಲೂಕಿನ ಸೀಗೇಹಳ್ಳಿಯಲ್ಲಿ ಮಾಜಿ ಸಿಎಂ H.D.ಕುಮಾರಸ್ವಾಮಿ ಹೇಳಿದ್ದಾರೆ. ದೇವರ ಮೇಲೆ ಭಕ್ತಿಯಿಂದ ಕೇಸರಿ ಟವಲ್ ಹಾಕಿಕೊಳ್ಳಿ, ತಪ್ಪಿಲ್ಲ. ಆದರೆ, ಬಿಜೆಪಿಯವರು ಕೊಡುವ ಹಣ ಹಂಚಿದರೆ ಒಳ್ಳೆಯದಾಗಲ್ಲ ಎಂದು ಕೇಸರಿ ಟವಲ್ ಹಾಕಿಕೊಂಡು ಚುನಾವಣೆಯಲ್ಲಿ ಹಣ ಹಂಚಿಕೆ ಮಾಡಿರುವವರ ಬಗ್ಗೆ ಕುಮಾರಸ್ವಾಮಿ ಮಾತನಾಡಿದರು. ಬಿಜೆಪಿಯವರು ಕೊಡುವ 2-3ಸಾವಿರ ಹಣ ಹಂಚಿಕೆಗೆ ಕೇಸರಿ ಟವಲ್ ಬಳಸಿದರೆ ದೇವರು ಒಳ್ಳೇದು ಮಾಡಲ್ಲ ಎಂದು ಸೀಗೇಹಳ್ಳಿಯಲ್ಲಿ ಮಾಜಿ ಸಿಎಂ H.D.ಕುಮಾರಸ್ವಾಮಿ ಹೇಳಿದರು.

‘ಸಮ್ಮಿಶ್ರ ಸರ್ಕಾರದಲ್ಲಿ ನಾನು ಹಣ ಮಾಡಲಿಕ್ಕೆ ಹೋಗಿಲ್ಲ’ ಮೈತ್ರಿ ಸರ್ಕಾರದಲ್ಲಿ ಕೆಲಸ ಮಾಡಲು ನೆಮ್ಮದಿ ಇರಲಿಲ್ಲ. ಒಂದು ದಿನ ನೆಮ್ಮದಿಯಿಂದ ಕೆಲಸ ಮಾಡುವುದಕ್ಕೆ ಆಗಿಲ್ಲ ಎಂದು ಸೀಗೇಹಳ್ಳಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. ಸಮ್ಮಿಶ್ರ ಸರ್ಕಾರದಲ್ಲಿ ನಾನು ಹಣ ಮಾಡಲಿಕ್ಕೆ ಹೋಗಿಲ್ಲ. ದೇವರು ಕೊಟ್ಟಿದ್ದ ಅಧಿಕಾರವನ್ನು ದೇವರಿಗೆ ಕೊಟ್ಟಿದ್ದೇನೆ ಎಂದು ಕುಮಾರಸ್ವಾಮಿ ಮತ್ತೆ ಮೈತ್ರಿ ಸರ್ಕಾರದ ಅನುಭವ ಬಿಚ್ಚಿಟ್ಟರು.

‘ಮೋದಿಯವರು ಹಾಗೇ ಹೇಳಿದ್ದಾರೆಂದರೆ ತಮಾಷೆ ಮಾತಲ್ಲ’ ರಾಜ್ಯಸಭೆಯಲ್ಲಿ ದೇವೇಗೌಡರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ರು. ರೈತರಿಗೆ ಜೀವನ ಮುಡುಪಿಟ್ಟವರಿದ್ರೆ ಅದು ದೇವೇಗೌಡರು. ಮೋದಿಯವರು ಹಾಗೇ ಹೇಳಿದ್ದಾರೆಂದರೆ ತಮಾಷೆ ಮಾತಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ತುಮಕೂರು ಜಿಲ್ಲೆಗೆ ನೀರು ತರುವ ಪ್ರಮುಖ ರೂವಾರಿ HDD. ದೇವೇಗೌಡ, ಹೆಚ್​.ಡಿ.ರೇವಣ್ಣ ಬಗ್ಗೆ ಅಪಪ್ರಚಾರ ಮಾಡಿದ್ದರು. HDD ಹೋರಾಟದಿಂದಲೇ ಹೇಮಾವತಿ ಡ್ಯಾಂ ನಿರ್ಮಾಣವಾಯ್ತು. ಜಲಾಶಯ ಇಲ್ಲದಿದ್ದರೆ ತುಮಕೂರಿಗೆ ಹೇಗೆ ನೀರು ಬರುತ್ತಿತ್ತು? ಕ್ರಿಯೆ ಇಲ್ಲದ ರಾಜಕಾರಣಿಗಳು HDD ವಿರುದ್ಧ ಮಾತಾಡ್ತಾರೆ. ಹೇಮಾವತಿ ನಾಲೆ ಸ್ವಚ್ಛಗೊಳಿಸಲು ₹200 ಕೋಟಿ ನೀಡಿದೆ ಎಂದು ಸೀಗೇಹಳ್ಳಿಯಲ್ಲಿ ಮಾಜಿ ಸಿಎಂ H.D.ಕುಮಾರಸ್ವಾಮಿ ಹೇಳಿದರು.

ಕುರುಬ ಸಮಾಜದ ಬಂಧುಗಳು 2A ಮೀಸಲಾತಿ ಬಿಟ್ಟು ST ಕೇಳ್ತಿದ್ದಾರೆ. 15% ಮೀಸಲಾತಿ ದೊಡ್ಡದಾ ಅಥವಾ  3% ದೊಡ್ಡದಾ? 15 ರೂಪಾಯಿ ದೊಡ್ಡದಾ ಅಥವಾ 3 ರೂಪಾಯಿ ದೊಡ್ಡದಾ ಎಂಬುದರ ಬಗ್ಗೆ ನನಗೆ ಅರ್ಥವಾಗ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. 15% ನಲ್ಲಿ ಕುರುಬ ಸಮಾಜಕ್ಕೆ ಸಿಂಹಪಾಲು ಇದೆ ಎಂದು ಹೇಳಿದರು.

ನಿನ್ನೆ ಪಂಚಮಸಾಲಿ ಸಮುದಾಯ ಕೂಡ ಹೋರಾಟ ಮಾಡಿದ್ದಾರೆ. ಮೊನ್ನೆ ನಮ್ಮ ಸಮುದಾಯದ ಸ್ವಾಮೀಜಿಗಳು ಕೂಡ ಮೀಸಲಾತಿ ಮಾಡಲು ಸಭೆ ನಡೆಸಿದ್ದಾರೆ. ಮೀಸಲಾತಿಗಾಗಿ ಧಾರ್ಮಿಕ ಗುರುಗಳನ್ನು ನಡೆಸುವ ಕೆಲಸ ಮಾಡಬಾರದು. ಸರ್ಕಾರ ಎಲ್ಲಾದರ ಬಗ್ಗೆ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

‘ಇಂದು ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ’ ಇಂದು ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಅಧಿಕಾರಿಗಳು ₹20 ಲಕ್ಷ, 30 ಲಕ್ಷ ನೀಡಿ ಬರುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ. ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ ಎಂದರು.

ಇದನ್ನೂ ಓದಿ: ವಾಜಪೇಯಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲೇ ಇಲ್ಲ ಎಂದಿದ್ದರು! ಇಂಥವರಿಂದ ನಮಗೆ ದೇಶಪ್ರೇಮದ ಬಗ್ಗೆ ಪಾಠ ಸರಿಯಲ್ಲ- ಬಿ.ಕೆ.ಹರಿಪ್ರಸಾದ್

Published On - 7:15 pm, Mon, 22 February 21

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು