AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samsung Galaxy S21 Offer: ಸ್ಯಾಮ್ಸಂಗ್​ನಿಂದ ಗ್ಯಾಲಕ್ಸಿ S21 ಸಿರೀಸ್​ ಮೇಲೆ 10,000 ರೂಪಾಯಿ ಕ್ಯಾಶ್​ಬ್ಯಾಕ್

ಸ್ಯಾಮ್ಸಂಗ್ S21 ಸಿರೀಸ್​ ಮೇಲೆ 10,000 ರೂಪಾಯಿ ಕ್ಯಾಶ್​ಬ್ಯಾಕ್ ಆಫರ್ ಇದೆ. ಜೂನ್ 30, 2021ರ ತನಕ ಈ ಆಫರ್ ಇರಲಿದ್ದು, ಮೊಬೈಲ್ ಫೋನ್ ಖರೀದಿ ಮಾಡಬೇಕು ಅಂದುಕೊಳ್ಳುವವರು ಈ ಅವಕಾಶ ಬಳಸಿಕೊಳ್ಳಬಹುದು.

Samsung Galaxy S21 Offer: ಸ್ಯಾಮ್ಸಂಗ್​ನಿಂದ ಗ್ಯಾಲಕ್ಸಿ S21 ಸಿರೀಸ್​ ಮೇಲೆ 10,000 ರೂಪಾಯಿ ಕ್ಯಾಶ್​ಬ್ಯಾಕ್
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jun 07, 2021 | 5:05 PM

Share

ಸ್ಯಾಮ್ಸಂಗ್​ನಿಂದ ಗ್ಯಾಲಕ್ಸಿ S21 ಸಿರೀಸ್​ ಮೇಲೆ ಅತ್ಯುತ್ತಮ ರಿಯಾಯಿತಿ ನೀಡುತ್ತಿದೆ. ಒಂದು ವೇಳೆ ನೀವು ಸ್ಯಾಮ್ಸಂಗ್​ ಗ್ಯಾಲಕ್ಸಿ S21 ಖರೀದಿ ಮಾಡಬೇಕು ಎಂದಿದ್ದಲ್ಲಿ 10,000 ರೂಪಾಯಿ ಕ್ಯಾಶ್​ಬ್ಯಾಕ್ ತಕ್ಷಣ ದೊರೆಯುತ್ತದೆ. ಈ ಮೂಲಕ 128GB ಸಂಗ್ರಹ ಸಾಮರ್ಥ್ಯದ ಫೋನ್ ರೂ. 71,999ಕ್ಕೆ ದೊರೆಯುತ್ತದೆ ಮತ್ತು 256GB ಸಾಮರ್ಥ್ಯದ್ದು ರೂ. 75,999ಕ್ಕೆ ಸಿಗುತ್ತದೆ. ಅಂದ ಹಾಗೆ ಈ ಫೋನ್ ಭಾರತದಲ್ಲಿ ಬಿಡುಗಡೆ ಆಗಿದ್ದು 81,999 ರೂಪಾಯಿಗೆ. ಸ್ಯಾಮ್ಸಂಗ್​ನಿಂದ ಗ್ಯಾಲಕ್ಸಿ S21 ಸಿರೀಸ್ ಖರೀದಿ ಮೇಲೆ ಸ್ಯಾಮ್ಸಂಗ್​ನಿಂದ ಹಲವು ಆಫರ್​ಗಳನ್ನು ನೀಡಲಾಗುತ್ತಿದೆ. ಗ್ಯಾಲಕ್ಸಿ S21 ಅಲ್ಟ್ರಾ, ಗ್ಯಾಲಕ್ಸಿ S21+ ಅಥವಾ ಗ್ಯಾಲಕ್ಸಿ S21 ಜತೆಗೆ ರೂ. 15,990 ಮೌಲ್ಯದ ಬಡ್ಸ್ 990 ರೂಪಾಯಿಗೆ ಅಥವಾ 10,000 ರೂಪಾಯಿ ಮೌಲ್ಯದ ಗಿಫ್ಟ್ ವೋಚರ್ ದೊರೆಯುತ್ತದೆ.

ಆದರೆ, ಗ್ಯಾಲಕ್ಸಿ ಬಡ್ ಪ್ರೋ ಕ್ಲೇಮ್ ಮಾಡಬೇಕು ಎಂದಾದಲ್ಲಿ ಸ್ಯಾಮ್ಸಂಗ್​ನಿಂದ ಗ್ಯಾಲಕ್ಸಿ S21 ಸಿರೀಸ್ ಫೋನ್ ಖರೀದಿ ಮಾಡಬೇಕು. ಸ್ಯಾಮ್ಸಂಗ್ ಶಾಪ್​ನಲ್ಲಿ ನೋಂದಣಿ ಆಗಿ, ವೋಚರ್ ಕ್ಲೇಮ್ ಮಾಡಬೇಕು. ಆಗ ಬಡ್ಸ್ ಪ್ರೋ ಅನ್ನು 990 ರೂಪಾಯಿಗೆ ಖರೀದಿಸುವುದಕ್ಕೆ ಅವಕಾಶ ಮಾಡಿಕೊಡಲಿದೆ. ಇದರ ಜತೆಗೆ ಸ್ಯಾಮ್ಸಂಗ್​ನಿಂದ ಗ್ಯಾಲಕ್ಸಿ S21 ಅಲ್ಟ್ರಾ, ಗ್ಯಾಲಕ್ಸಿ S21 ಖರೀದಿದಾರರಿಗೆ ಕ್ರಮವಾಗಿ ರೂ. 10,000 ಮತ್ತು ರೂ. 5000 ತನಕ ಬೋನಸ್ ಸಿಗುತ್ತದೆ. ಇನ್ನು ಗ್ರಾಹಕರು ಈ ಸಾಧನವನ್ನು ಎಚ್​ಡಿಎಫ್​ಸಿ ಡೆಬಿಟ್ ಕಾರ್ಡ್ ಬಳಸಿ ಮತ್ತು ಕ್ರೆಡಿಟ್​ ಕಾರ್ಡ್​ನೊಂದಿಗೆ ಇಎಂಐನಲ್ಲಿ ಕೊಳ್ಳಲು ಬಯಸಿದಲ್ಲಿ ಆಗ ಕ್ರಮವಾಗಿ ರೂ. 10,000 ಮತ್ತು ರೂ. 5,000 ಕ್ಯಾಶ್​ಬ್ಯಾಕ್ ದೊರೆಯುತ್ತದೆ.

ತಕ್ಷಣದಿಂದಲೇ ಈ ಆಫರ್ ಅನ್ವಯ ಆಗುತ್ತದೆ ಎಂದು ಸ್ಯಾಮ್ಸಂಗ್ ಖಾತ್ರಿಪಡಿಸಿದೆ. ಈ ಆಫರ್ ಜೂನ್ 30, 2021ರ ತನಕ ಇರುತ್ತದೆ. ಸ್ಯಾಮ್ಸಂಗ್ ಶಾಪ್, ಸ್ಯಾಮ್ಸಂಗ್ ಎಕ್ಸ್​ಕ್ಲೂಸಿವ್ ಸ್ಟೋರ್ಸ್, ಪ್ರಮುಖ ರೀಟೇಲ್ ಸ್ಟೋರ್ಸ್ ಮತ್ತು ಇ- ಕಾಮರ್ಸ್ ಪೋರ್ಟಲ್​ಗಳಲ್ಲಿ ಈ ಆಫರ್​ಗಳು ಸಿಗಲಿವೆ. ಗ್ಯಾಲಕ್ಸಿ S21 ಅಲ್ಟ್ರಾ 6.8 ಇಂಚಿದ್ದು, ಕ್ವಾಡ್ ಎಚ್​ಡಿ+ AMOLED ಡಿಸ್​ಪ್ಲೇ ಜತೆಗೆ 120 Hz ರಿಫ್ರೆಷ್ ರೇಟ್ ಇದೆ. ಗ್ಯಾಲಕ್ಸಿ S21 ಫೋನ್ 6.2 ಇಂಚು ಎಫ್​ಎಚ್​ಡಿ+ ಡೈನಮಿಕ್ AMOLED 120 Hz ಡಿಸ್​ಪ್ಲೇ ಇದೆ.

ಇದನ್ನೂ ಓದಿ: Samsung Galaxy M12 Launch, Price, Specification: ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಭಾರತದಲ್ಲಿ 9,999 ರೂ.ಗೆ ಮಾರಾಟ 

(Samsung announced Galaxy S21 series cashback offer of Rs 10,000, which will be available till June 30, 2021)

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ