Samsung Galaxy M12 Launch, Price, Specification: ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಭಾರತದಲ್ಲಿ 9,999 ರೂ.ಗೆ ಮಾರಾಟ

ಸ್ಯಾಮ್ಸಂಗ್​ನಿಂದ ಗ್ಯಾಲಕ್ಸಿ M12 ಮೊಬೈಲ್​​ಫೋನ್ ಭಾರತದಲ್ಲಿ ಬಿಡುಗಡೆ ಆಗುತ್ತಿದೆ. ದರ, ತಾಂತ್ರಿಕ ವೈಶಿಷ್ಟ್ಯ, ಮಾರಾಟದ ದಿನಾಂಕ ಮತ್ತಿತರ ಮಾಹಿತಿಗಳು ಇಲ್ಲಿವೆ. 6000 mAh ಬ್ಯಾಟರಿ ಸಾಮರ್ಥ್ಯದ ಫೋನ್ ಇದು.

Samsung Galaxy M12 Launch, Price, Specification: ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ12 ಭಾರತದಲ್ಲಿ 9,999 ರೂ.ಗೆ ಮಾರಾಟ
ಸ್ಯಾಮ್​ಸಂಗ್ (ಸಂಗ್ರಹ ಚಿತ್ರ)
Follow us
Srinivas Mata
| Updated By: guruganesh bhat

Updated on: Mar 11, 2021 | 2:51 PM

ಭಾರತದಲ್ಲಿ ಸ್ಯಾಮ್ಸಂಗ್​ ಗ್ಯಾಲಕ್ಸಿ M12 ಬಿಡುಗಡೆYaಗಿದೆ. ಕಂಪೆನಿಯಿಂದ ಈ ಸ್ಮಾರ್ಟ್ ಫೋನ್ ಅನ್ನು ಮಧ್ಯಮ ರೇಂಜ್ ಸೆಗ್ಮೆಂಟ್​ನಲ್ಲಿ ಪರಿಚಯಿಸಲಾಗಿದೆ. ವಾಟರ್​​ಡ್ರಾಪ್ ನಾಚ್ ಹೌಸಿಂಗ್ ಮುಂಭಾಗದ ಕ್ಯಾಮೆರಾ ಮತ್ತು ರೇರ್ ಪ್ಯಾನೆಲ್​ನಲ್ಲಿ ಕ್ವಾಡ್ ಕ್ಯಾಮೆರಾ ಸೆಟ್ ಅಪ್ ಇರಲಿದೆ. ಈ ಸಲಕರಣೆಯಲ್ಲಿ 8Nm ಪ್ರೊಸೆಸರ್ ಇದೆ. ಸ್ಯಾಮ್ಸಂಗ್ ಗ್ಯಾಲಕ್ಸಿ M12 ಬೆಲೆ ರೂ. 9,999ರಿಂದ ಶುರುವಾಗುತ್ತದೆ. ಈ ಫೋನ್​​ನ ಮೊದಲ ಮಾರಾಟ ಮಾರ್ಚ್ 18ನೇ ತಾರೀಕಿನ ಮಧ್ಯಾಹ್ನ 12 ಗಂಟೆಯಿಂದ ಅಮೆಜಾನ್ ಇಂಡಿಯಾ ವೆಬ್​ಸೈಟ್​ನಲ್ಲಿ ಶುರುವಾಗುತ್ತದೆ. ಇನ್ನು ಅಮೆಜಾನ್ ಪ್ರೈಮ್ ಸದಸ್ಯರು 24 ಗಂಟೆ ಮುಂಚಿತವಾಗಿಯೇ ಈ ಮಾರಾಟದ ವೇಳೆ ಖರೀದಿ ಮಾಡಬಹುದು. ಕಪ್ಪು, ನೀಲಿ ಹಾಗೂ ಬಿಳಿ ಹೀಗೆ ಮೂರು ಬಣ್ಣಗಳಲ್ಲಿ ಫೋನ್ ಲಭ್ಯ ಇದೆ.

ಈ ಫೋನ್ ಅನ್ನು ಅಮೆಜಾನ್ ಇಂಡಿಯಾ, ಸ್ಯಾಮ್ಸಂಗ್ ಅಧಿಕೃತ ವೆಬ್​ಸೈಟ್ ಮತ್ತು ಕಂಪೆನಿಯ ಅಧಿಕೃತ ಡೀಲರ್​ಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಸ್ಯಾಮ್ಸಂಗ್ ಎಂ12 ಖರೀದಿಸುವ ಅತಿ ಮುಖ್ಯವಾದ ಕಾರಣ ಏನೆಂದರೆ, ಇದರ ಬ್ಯಾಟರಿ ಸಾಮರ್ಥ್ಯ. 6000 mAh ಬ್ಯಾಟರಿ ಹೊಂದಿದೆ ಇದರ ಜತೆಗೆ 15ವ್ಯಾಟ್ ಚಾರ್ಜರ್ ಬರುತ್ತದೆ. ಇನ್ನು 6.5 ಇಂಚಿನ ಡಿಸ್​ಪ್ಲೇ ಬರಲಿದ್ದು, 90 hz ರಿಫ್ರೆಷ್ ದರ ಇದೆ.

ರೇರ್ ಪ್ಯಾನೆಲ್ ಹೌಸಸ್​​ನಲ್ಲಿ ಪ್ರಾಥಮಿಕ ಲೆನ್ಸ್ 48 MP ಮಾಡ್ಯುಲ್ ಆಗಿದೆ. ಈ ಫೋನ್​ನಲ್ಲಿ 8 ಎಂಪಿ ಅಲ್ಟ್ರಾವೈಡ್ ಲೆನ್ಸ್, 5MP ಡೆಪ್ತ್ ಸೆನ್ಸರ್ ಮತ್ತು 2 MP ಮ್ಯಾಕ್ರೋ ಸೆನ್ಸರ್ ಒಳಗೊಂಡಿದೆ. ಗ್ಯಾಲಕ್ಸಿ M12 ಮೊಬೈಲ್ ಫೋನ್ 8MP ಫ್ರಂಟ್ ಫೇಸಿಂಗ್ ಸೆನ್ಸರ್ ಹೊಂದಿದೆ. ಈ ಮೊಬೈಲ್ ಫೋನ್ ಎಕ್ಸಿನೊಸ್ 850 ಪ್ರೊಸೆಸರ್ 8nm ಚಿಪ್​ಸೆಟ್ ಹೊಂದಿದೆ.

ಇದನ್ನೂ ಓದಿ: Redmi Note 10 ಸೀರಿಸ್​ ಮೊಬೈಲ್​ಗೆ 103 MP ಕ್ಯಾಮೆರಾ! ಕೈಗೆಟುಕುವ ದರ