Apple Spring Event: ಆಪಲ್ ಕಂಪೆನಿಯಿಂದ ಮಾರ್ಚ್ 23ಕ್ಕೆ ಹೊಸ ಉತ್ಪನ್ನಗಳ ಬಿಡುಗಡೆ ನಿರೀಕ್ಷೆ
ಮಾರ್ಚ್ 23ನೇ ತಾರೀಕಿನಂದು ಆಪಲ್ ಕಂಪೆನಿಯಿಂದ ನಾಲ್ಕು ಹೊಸ ಉತ್ಪನ್ನಗಳು ಬಿಡುಗಡೆ ಆಗುವ ನಿರೀಕ್ಷೆ ಇದೆ. ಕೋವಿಡ್ 19 ಕಾರಣಕ್ಕೆ ಕಳೆದ ವರ್ಷ ಈ ಕಾರ್ಯಕ್ರಮ ನಡೆದಿರಲಿಲ್ಲ. ಆದರೆ ಈ ವರ್ಷ ನಡೆಯಬಹುದು ಎನ್ನಲಾಗಿದೆ.
ಆಪಲ್ ಕಂಪೆನಿಯಿಂದ ಮಾರ್ಚ್ 23, 2021ರಂದು ವಿಶೇಷ ಕಾರ್ಯಕ್ರಮ ಆಯೋಜಿಸುವ ನಿರೀಕ್ಷೆ ಇದ್ದು, ಕಂಪೆನಿಯಿಂದ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಇವುಗಳಲ್ಲಿ 2021ರ ಐಪ್ಯಾಡ್ ಪ್ರೋ ಮಾಡೆಲ್ಗಳು, ಏರ್ಟ್ಯಾಗ್ಗಳು, ಹೊಸ ಆಪಲ್ ಟಿವಿ ಸ್ಟ್ರೀಮಿಂಗ್ ಬಾಕ್ಸ್ ಮತ್ತು ಏರ್‌ಪಾಡ್ಸ್ 3 (ಇದು ಅಧಿಕೃತವಾದ ಹೆಸರಲ್ಲ) ಒಳಗೊಂಡಿರಲಿವೆ ಎನ್ನಲಾಗುತ್ತಿದೆ. ಈ ವಿಚಾರದಲ್ಲಿ ಆಪಲ್ ಕಂಪೆನಿಯು ರಹಸ್ಯ ಕಾಯ್ದುಕೊಂಡಿದೆ. ಆದರೆ ಆಪಲ್ ಕಂಪೆನಿಯ ಹೊಸ ಉತ್ಪನ್ನಗಳ ಬಗ್ಗೆ ಮಾಹಿತಿ ಕಲೆ ಹಾಕುವವರು ಟ್ವಿಟ್ಟರ್ನಲ್ಲಿ ಈ ಬಗ್ಗೆ ತಿಳಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಆಪಲ್ ಕಂಪೆನಿಯು ಪ್ರತಿ ವರ್ಷದ ಮಾರ್ಚ್ ತಿಂಗಳಲ್ಲಿ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದೆ. ಕೋವಿಡ್- 19 ಕಾರಣಕ್ಕೆ ಕಳೆದ ವರ್ಷ ಈ ಕಾರ್ಯಕ್ರಮ ನಡೆದಿರಲಿಲ್ಲ. ಆದರೆ ಈ ವರ್ಷ ಕಂಪೆನಿಯಿಂದ ಕಾರ್ಯಕ್ರಮ ನಡೆಯಲಿದೆ ಎಂಬ ನಂಬಲಾಗುತ್ತಿದೆ.
ಈ ಕಾರ್ಯಕ್ರಮವು ಮಾರ್ಚ್ 23ನೇ ತಾರೀಕು ನಡೆಯುವ ಬಗ್ಗೆ ಜಾನ್ ಪ್ರೊಸೆರ್ ತಮ್ಮ ಟ್ವಿಟ್ಟರ್ನಲ್ಲಿ 23 ಎಂದು ಪೋಸ್ಟ್ ಮಾಡುವ ಮೂಲಕ ಸೂಚನೆಯನ್ನು ಕೊಟ್ಟಿದ್ದಾರೆ. ಇನ್ನು ನಂಬಲರ್ಹ ಮೂಲಗಳ ಮಾಹಿತಿಯ ಪ್ರಕಾರ, ನಾಲ್ಕು ಉತ್ಪನ್ನಗಳು ಬಿಡುಗಡೆ ಆಗಬಹುದು. ಅದರಲ್ಲಿ ಏರ್ಟ್ಯಾಗ್ಸ್, ಮುಂದಿನ ತಲೆಮಾರಿನ ಏರ್‌ಪಾಡ್ಸ್, 2021ರ ಐಪ್ಯಾಡ್ ಪ್ರೋ ಮಾಡೆಲ್ಗಳು, ಹೊಸ ಆಪಲ್ ಟಿವಿ ಸ್ಟ್ರೀಮಿಂಗ್ ಬಾಕ್ಸ್ ಬಿಡುಗಡೆ ಆಗುವ ಬಗ್ಗೆ ಪ್ರೊಸೆರ್ ತಿಳಿಸಿದ್ದಾರೆ.
ಐಪ್ಯಾಡ್ ಪ್ರೋ 2021 ಮಾಡೆಲ್ಗಳು ಕಳೆದ ತಿಂಗಳು ಈ ಬಗ್ಗೆ ವದಂತಿ ಇತ್ತು. ಆದರೆ ಹೆಚ್ಚಿನ ಮಾಹಿತಿಯು ಹೊರಬಂದಿಲ್ಲ. ಇನ್ನು ಏರ್ಟ್ಯಾಗ್ಸ್ ಬಗ್ಗೆ ಮಾಹಿತಿ ನೀಡಲಾಗಿದೆ. ಇದು ಬ್ಲ್ಯೂಟೂಥ್ ಟ್ರ್ಯಾಕರ್ ಹಾಗೂ ಜತೆಗೆ ವಾಟರ್ಪ್ರೂಫ್ ರಚನೆ ಇರಬಹುದು ಮತ್ತು ಮ್ಯಾಗ್ನೆಟಿಕ್ ಚಾರ್ಜಿಂಗ್ ಇರಲಿದೆ ಎನ್ನಲಾಗಿದೆ. ಈ ಉತ್ಪನ್ನದ ಜತೆಗೆ ನಾಣ್ಯದ ರೂಪದ ಬೇರ್ಪಡಿಸಬಹುದಾದ ಬ್ಯಾಟರಿ ಬರುವ ನಿರೀಕ್ಷೆ ಇದೆ. ಏರ್ಟ್ಯಾಗ್ಸ್ ಬಗ್ಗೆ ಕಂಪೆನಿ ಏನನ್ನೂ ಹೇಳಿಲ್ಲ. ಆದರೆ ಈಚಿನ ಐಒಎಸ್ನಲ್ಲಿ ಸೂಚನೆ ಇದೆ. ಐಪ್ಯಾಡ್ ಪ್ರೋ 2021 ಮಾಡೆಲ್ಗಳು ಮತ್ತು ಇನ್ನೊಂದು ಕಡೆ ಮಿನಿ- ಎಲ್ಇಡಿ ಡಿಸ್ಪ್ಲೇ ಜತೆಗೆ 5ಜಿ ಎಂಎಂ ವೇವ್ ಸಪೋರ್ಟ್ ಜತೆಗೆ ಹೊಸ ಆಪಲ್ ಚಿಪ್ ಬರಲಿದೆ ಎಂಬ ನಿರೀಕ್ಷೆಯನ್ನು ಇರಿಸಿಕೊಳ್ಳಲಾಗಿದೆ.
ಮುಂದಿನ ತಲೆಮಾರಿನ ಏರ್ಪಾಡ್ಗಳು ಕೂಡ ಕಂಪೆನಿಯಿಂದ ಬಿಡುಗಡೆ ಆಗುವ ನಿರೀಕ್ಷೆ ಇದೆ. ಅದು ಏರ್‌ಪಾಡ್ಸ್ ಪ್ರೋ ಸಿಸ್ಟಮ್ ಇನ್ ಪ್ಯಾಕೇಜ್ (ಎಸ್ಐಪಿ) ತಂತ್ರಜ್ಞಾನ ಹೊಂದಿರಬಹುದು. ಅದು ಸದ್ಯದ ಸರ್ಫೇಸ್ ಮೌಂಟ್ ತಂತ್ರಜ್ಞಾನಕ್ಕೆ ಬದಲಿಯಾಗಿರುತ್ತದೆ. ಆದರೆ ಏರ್‌ಪಾಡ್ಸ್ ಪ್ರೋ ರಚನೆ ಹಾಗೇ ಇರುತ್ತದೆ. ಆಪಲ್ ಟಿವಿ ಸ್ಟ್ರೀಮಿಂಗ್ ಬಾಕ್ಸ್ ಮೂರು ವರ್ಷದ ಹಿಂದೆ ಉತ್ಪಾದಿಸಲು ಆರಂಭಿಸಲಾಯಿತು. ಈಗ ಮುಂಬರುವ ಉತ್ಪನ್ನವು ಮೇಲ್ದರ್ಜೆಗೆ ಏರಿದ ವೈಶಿಷ್ಟ್ಯ ಹಾಗೂ ಚಿಪ್, ಹಲವು ಸ್ಟೋರೇಜ್ಗಳೊಂದಿಗೆ ಬರಬಹುದು.
ಇದನ್ನೂ ಓದಿ: ಉಳ್ಳವರು.. ಆಪಲ್ ಏರ್ಪಾಡ್ಸ್ಗಾಗಿ ಚಿನ್ನದ ಕಿವಿಯೋಲೆ ಮಾಡಿಸುವರಯ್ಯಾ!