AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nokia 110 4G: ಕೇವಲ 2799 ರೂ. ಗೆ ಆಕರ್ಷಕ 4G ಫೋನ್ ಬಿಡುಗಡೆ ಮಾಡಿದ ನೋಕಿಯಾ: ಏನು ವಿಶೇಷತೆ?

ಆಕರ್ಷಕವಾದ ವಿನ್ಯಾಸವನ್ನು ಒಳಗೊಂಡಿರುವ ನೋಕಿಯಾ 110 4G ಫೋನ್ ಬಳಕೆಗೆ ಸುಲಭವಾಗುವಂತೆ ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟರ್ ಅನ್ನು ಹೊಂದಿದೆ. ಈ ಫೋನ್‌ ಭಾರತದಲ್ಲಿ ಕೇವಲ 2,799 ರೂ. ಗೆ ಲಭ್ಯವಾಗುತ್ತಿದೆ.

Nokia 110 4G: ಕೇವಲ 2799 ರೂ. ಗೆ ಆಕರ್ಷಕ 4G ಫೋನ್ ಬಿಡುಗಡೆ ಮಾಡಿದ ನೋಕಿಯಾ: ಏನು ವಿಶೇಷತೆ?
Nokia 110 4G
TV9 Web
| Updated By: Vinay Bhat|

Updated on: Jul 23, 2021 | 7:30 PM

Share

ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಸ್ಮಾರ್ಟ್​ಫೋನ್​ಗಳಿಗಿಂತ ಫೀಚರ್​ ಫೋನುಗಳಿಂದಲೇ ಹೆಚ್ಚು ಪ್ರಸಿದ್ಧ ಪಡೆದಿರುವ ಕಂಪೆನಿ ನೋಕಿಯಾ (Nokia). ಒಂದು ಕಾಲದಲ್ಲಿ ಎವರ್‌ಗ್ರೀನ್‌ ಬ್ರಾಂಡ್‌ ಆಗಿದ್ದ ನೋಕಿಯಾ ಬಳಿಕ ಚೀನಿ ಸ್ಮಾರ್ಟ್​ಫೋನ್ ಬ್ರ್ಯಾಂಡ್​ಗಳ ಹೊಡೆತಕ್ಕೆ ಸಿಲುಕಿತು. ಇದರ ನಡುವೆಯೇ ನೋಕಿಯಾ ಹೊಸ ಹೊಸ ಮೊಬೈಲ್​ಗಳನ್ನು ಬಿಡುಗಡೆ ಮಾಡುತ್ತಿವೆ. ಸದ್ಯ ಇದೀಗ ಭಾರತದ ಮಾರುಕಟ್ಟೆಯಲ್ಲಿ ನೋಕಿಯಾ 110 (Nokia 110 4G) ಫೀಚರ್ ಫೋನ್‌ ಬಿಡುಗಡೆಯಾಗಿದೆ. ವಿಶೇಷ ಎಂದರೆ ಇದು 4G ಫೋನ್ ಆಗಿದೆ.

ಆಕರ್ಷಕವಾದ ವಿನ್ಯಾಸವನ್ನು ಒಳಗೊಂಡಿರುವ ನೋಕಿಯಾ 110 4G ಫೋನ್ ಬಳಕೆಗೆ ಸುಲಭವಾಗುವಂತೆ ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟರ್ ಅನ್ನು ಹೊಂದಿದೆ. ಈ ಫೋನ್‌ ಭಾರತದಲ್ಲಿ ಕೇವಲ 2,799 ರೂ. ಗೆ ಲಭ್ಯವಾಗುತ್ತಿದೆ. ಹಳದಿ, ಆಕ್ವಾ ಮತ್ತು ಕಪ್ಪು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಇದೇ ಜುಲೈ 24 ರಿಂದ ನೋಕಿಯಾ.ಕಾಮ್ ಮತ್ತು ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಖರೀದಿಗೆ ಸಿಗುತ್ತದೆ.

ಏನು ವಿಶೇಷತೆ?:

ನೋಕಿಯಾ 110 4G ಫೀಚರ್‌ ಫೋನ್‌ 1.8-ಇಂಚಿನ QVGA ಕಲರ್‌ ಡಿಸ್‌ಪ್ಲೇ ಹೊಂದಿದೆ. ಇದು ಯುನಿಸಾಕ್ T107 SoC ಪ್ರೊಸೆಸರ್‌ ನಿಂದ ನಿಯಂತ್ರಿಸಲ್ಪಡುತ್ತದೆ. ಈ ಫೀಚರ್‌ಫೋನ್‌ 128MB RAM ಮತ್ತು 48MB ಇಂಟರ್‌ ಸ್ಟೋರೇಜ್‌ ಆಯ್ಕೆ ಹೊಂದಿದೆ. ಇದಲ್ಲದೆ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್‌ಗೆ ಮೂಲಕ 32GB ವರೆಗೆ ವಿಸ್ತರಿಸಬಹುದಾಗಿದೆ.

0.8 ಮೆಗಾಪಿಕ್ಸೆಲ್ ಕ್ಯೂವಿಜಿಎ ​​ಹಿಂಬದಿಯ ಕ್ಯಾಮೆರಾ ಕೂಡ ಇದೆ. ಹೆಚ್‌ಡಿ ವಾಯ್ಸ್ ಕಾಲಿಂಗ್ ಬೆಂಬಲವನ್ನು ಹೊಂದಿದೆ. ಇನ್ನು ಈ ಫೀಚರ್‌ ಫೋನ್ ತೆಗೆಯಬಹುದಾದ 1,020mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ, ಇದು 13 ದಿನಗಳ ಸ್ಟ್ಯಾಂಡ್‌ಬೈ ಸಮಯ, 16 ಗಂಟೆಗಳ ಸಂಗೀತ ಪ್ಲೇಬ್ಯಾಕ್ ಮತ್ತು 5 ಗಂಟೆಗಳ 4 ಜಿ ಟಾಕ್‌ಟೈಮ್ ವರೆಗೆ ಇರುತ್ತದೆ ಎಂದು ಕಂಪೆನಿ ತಿಳಿಸಿದೆ.

ಅಲ್ಲದೆ ಇದರಲ್ಲಿ ನಿಮ್ಮ ಹೆಡ್‌ಫೋನ್‌ಗಳನ್ನು ಸಂಪರ್ಕಿಸದೆ ನೀವು ಎಫ್‌ಎಂ ರೇಡಿಯೊವನ್ನು ಪ್ರವೇಶಿಸಬಹುದು. ನೋಕಿಯಾ 110 4 ಜಿ ವಿಡಿಯೋ ಪ್ಲೇಯರ್, ಎಂಪಿ 3 ಪ್ಲೇಯರ್ ಅನ್ನು ಹೊಂದಿದೆ ಮತ್ತು 3-ಇನ್ -1 ಸ್ಪೀಕರ್‌ಗಳನ್ನು ಸಹ ಸಂಯೋಜಿಸುತ್ತದೆ. ಇನ್ನೂ ರಿಫ್ರೆಶ್ಡ್ ಯುಐ ಅನ್ನು ಹೊಂದಿದ್ದು, ನ್ಯಾವಿಗೇಷನ್ ಸುಲಭಗೊಳಿಸಲು ಜೂಮ್ ಮಾಡಿದ ಮೆನುಗಳ ಆಯ್ಕೆಯನ್ನು ಹೊಂದಿದೆ.

Internet Outage: ಅಮೆಜಾನ್, ಝೊಮ್ಯಾಟೋ ಸೇರಿದಂತೆ ಹಲವು ಪ್ರಮುಖ ವೆಬ್​ಸೈಟ್​ಗಳಲ್ಲಿ ಇಂಟರ್​ನೆಟ್ ಸಮಸ್ಯೆ

iPhone 13: ಬಹುನಿರೀಕ್ಷಿತ ಐಫೋನ್ 13 ನಲ್ಲಿರುವ ಸ್ಟೋರೆಜ್ ಆಯ್ಕೆ ಕೇಳಿದ್ರೆ ನೀವು ಶಾಕ್ ಆಗ್ತೀರಾ..!