MS Dhoni: ಧೋನಿ ಕೋಚ್ ಆಗಲಿದ್ದಾರೆ: ಮಾಜಿ ಕ್ರಿಕೆಟಿಗನ ಭವಿಷ್ಯ..!
ಸೆಪ್ಟೆಂಬರ್ 19 ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಐಪಿಎಲ್ ಪುನರಾರಂಭಗೊಳ್ಳಲಿದೆ. ನಾಲ್ಕು ಪ್ಲೇ-ಆಫ್‌ಗಳು ಸೇರಿದಂತೆ ಉಳಿದ 31 ಪಂದ್ಯಗಳನ್ನು 3 ಮೈದಾನದಲ್ಲಿ ಆಡಲಾಗುತ್ತದೆ. ಇನ್ನು ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಟಿ20 ವಿಶ್ವಕಪ್ ಯುಎಇಯಲ್ಲಿಯೇ ಪ್ರಾರಂಭವಾಗಲಿದೆ.
ಟೀಮ್ ಇಂಡಿಯಾ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಚರ್ಚೆಗಳು ಮುಂದುವರೆದಿದೆ. ಈ ಬಾರಿ ಐಪಿಎಲ್ ಮೂಲಕ ಎಂಎಸ್ಡಿ ವೃತ್ತಿಜೀವನಕ್ಕೆ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಸಿಎಸ್ಕೆ ತಂಡದ ಸ್ಟಾರ್ ಆಟಗಾರ ಸುರೇಶ್ ರೈನಾ ಕೂಡ ಈ ಬಾರಿ ನಾವು ಧೋನಿಗಾಗಿ ಕಪ್ ಗೆಲ್ಲಲಿದ್ದೇವೆ ಎಂದಿದ್ದಾರೆ. ಹೀಗಾಗಿ ಐಪಿಎಲ್ ಸೀಸನ್ 14 ಮೂಲಕ 40 ವರ್ಷದ ಮಾಹೀ ವಿದಾಯ ಹೇಳಲಿದ್ದಾರೆ ಎಂದೇ ಹೇಳಲಾಗುತ್ತಿದೆ. ಇತ್ತ ನಿವೃತ್ತಿ ಬಳಿಕ ಮಹೇಂದ್ರ ಸಿಂಗ್ ಕೋಚ್ ಆಗಿ ಮರಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ ಪಾಕಿಸ್ತಾನ್ ತಂಡ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ.
ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಬಳಿಕ ಕಾಮೆಂಟರಿ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಖಂಡಿತವಾಗಿಯೂ ಅವರು ಕೋಚ್ ಆಗಲಿದ್ದಾರೆ. ಅಲ್ಲದೆ ನಿವೃತ್ತಿ ಬೆನ್ನಲ್ಲೇ ಅವರು ಕೋಚಿಂಗ್ ಕೆಲಸಗಳನ್ನು ಆರಂಭಿಸಲಿದ್ದಾರೆ ಎಂದು ಕನೇರಿಯಾ ಅಭಿಪ್ರಾಯಪಟ್ಟಿದ್ದಾರೆ. ದಾನಿಶ್ ಕನೇರಿಯಾ ಅವರ ಈ ಹೇಳಿಕೆ ಇದೀಗ ಮಹತ್ವ ಪಡೆದುಕೊಂಡಿದೆ. ಏಕೆಂದರೆ ಈ ಹಿಂದೆ ಕೂಡ ಐಪಿಎಲ್ಗೆ ವಿದಾಯ ಹೇಳಿದರೂ ಸಿಎಸ್ಕೆ ಪರ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಇತ್ತೀಚೆಗಷ್ಟೇ ಸಿಎಸ್ಕೆ ಫ್ರಾಂಚೈಸಿ ಕೂಡ ಧೋನಿ ಮುಂದಿನ ಎರಡು ವರ್ಷಗಳ ಕಾಲ ತಮ್ಮ ತಂಡಕ್ಕೆ ಸೇವೆ ಸಲ್ಲಿಸಲಿದ್ದಾರೆ ಎಂದಿದ್ದರು. ಇದೀಗ ಧೋನಿಯ ನಿವೃತ್ತಿ ಚರ್ಚೆಯೊಂದಿಗೆ ಕೋಚ್ ಆಗಲಿದ್ದಾರೆ ಎಂಬ ಹೇಳಿಕೆಯು ಮಹತ್ವ ಪಡೆದುಕೊಂಡಿದ್ದು, ಹೀಗಾಗಿ ಬ್ಯಾಟ್-ಪ್ಯಾಡ್ಗೆ ಗುಡ್ ಬೈ ಹೇಳಿದರೂ ಮಾಹೀ ಕೋಚ್ ಆಗಿ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದೇ ಹೇಳಲಾಗುತ್ತಿದೆ.
ಪಾಕಿಸ್ತಾನ ಪರ 61 ಟೆಸ್ಟ್ ಪಂದ್ಯಗಳನ್ನಾಡಿರುವ ದಾನಿಶ್ ಕನೇರಿಯಾ ಒಟ್ಟು 261 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹಾಗೆಯೇ 19 ಏಕದಿನ ಪಂದ್ಯಗಳಿಂದ 15 ವಿಕೆಟ್ ಪಡೆದಿದ್ದರು. 2009 ರಲ್ಲಿ ಇಂಗ್ಲಿಷ್ ಕೌಂಟಿ ಚಾಂಪಿಯನ್‌ಶಿಪ್ ಪ್ರೊ ಲೀಗ್ ಪಂದ್ಯಗಳಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಇಂಗ್ಲಿಷ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ( ಇಸಿಬಿ ) 2012 ರಲ್ಲಿ ಅವರಿಗೆ ಕ್ರಿಕೆಟ್ನಲ್ಲಿ ಜೀವಾವಧಿ ನಿಷೇಧ ಹೇರಿತ್ತು. ಈ ನಿಷೇಧವನ್ನು ಎತ್ತಿ ಹಿಡಿದ ಪಾಕ್ ಕ್ರಿಕೆಟ್ ಮಂಡಳಿ ಕೂಡ ಕನೇರಿಯಾ ಅವರನ್ನು ಬ್ಯಾನ್ ಮಾಡಿತ್ತು.
ಧೋನಿ ವಿದಾಯ: ಎಂಎಸ್ ಧೋನಿ 2020 ರ ಆಗಸ್ಟ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. 2019 ರ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಕೊನೆಯ ಬಾರಿ ಧೋನಿ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ಧೋನಿ ರನೌಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ದರು. ಇದಾಗ್ಯೂ ಐಪಿಎಲ್‌ನಲ್ಲಿ ತಮ್ಮ ನಾಯಕತ್ವದ ಪ್ರಾವೀಣ್ಯತೆಯನ್ನು ಧೋನಿ ತೋರಿಸಿದ್ದಾರೆ. ಈ ಬಾರಿ ಐಪಿಎಲ್ನ ಮೊದಲಾರ್ಧದಲ್ಲಿ ಸಿಎಸ್ಕೆ ತಂಡವು ಅಂಕ ಪಟ್ಟಿಯಲ್ಲಿ 2ನೇ ಸ್ಥಾನವನ್ನು ಅಲಂಕರಿಸಿಕೊಂಡಿದೆ.
ಐಪಿಎಲ್ ಪುನರಾರಂಭ: ಸೆಪ್ಟೆಂಬರ್ 19 ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಐಪಿಎಲ್ ಪುನರಾರಂಭಗೊಳ್ಳಲಿದೆ. ನಾಲ್ಕು ಪ್ಲೇ-ಆಫ್‌ಗಳು ಸೇರಿದಂತೆ ಉಳಿದ 31 ಪಂದ್ಯಗಳನ್ನು 3 ಮೈದಾನದಲ್ಲಿ ಆಡಲಾಗುತ್ತದೆ. ಇನ್ನು ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಟಿ20 ವಿಶ್ವಕಪ್ ಯುಎಇಯಲ್ಲಿಯೇ ಪ್ರಾರಂಭವಾಗಲಿದೆ.
ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!
ಇದನ್ನೂ ಓದಿ: Ola Electric scooters: ಮೈಲೇಜ್ ಬರೋಬ್ಬರಿ 240 ಕಿ.ಮೀ: ಶೀಘ್ರದಲ್ಲೇ ರಸ್ತೆಗಿಳಿಯಲಿದೆ ಓಲಾ ಸ್ಕೂಟರ್..!