Ola Electric scooters: ಮೈಲೇಜ್ ಬರೋಬ್ಬರಿ 240 ಕಿ.ಮೀ: ಶೀಘ್ರದಲ್ಲೇ ರಸ್ತೆಗಿಳಿಯಲಿದೆ ಓಲಾ ಸ್ಕೂಟರ್..!
ಓಲಾ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂರು ಮಾಡೆಲ್ಗಳಲ್ಲಿ ಬಿಡುಗಡೆ ಮಾಡಲಿದೆ. ಈ ಮೂರು ಮಾಡೆಲ್ಗಳಿಗೆ ಓಲಾ ಎಸ್, ಎಸ್ 1 ಮತ್ತು ಓಲಾ ಎಸ್ 1 ಪ್ರೊ ಎಂದು ಹೆಸರಿಡಲಾಗಿದೆ.
ಓಲಾ ಕಂಪೆನಿಯು ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸುವ ತವಕದಲ್ಲಿದೆ. ಆನ್ಲೈನ್ ಟ್ಯಾಕ್ಸಿ ಸೇವೆಯ ಮೂಲಕ ಈಗಾಗಲೇ ಮನೆಮಾತಾಗಿರುವ ಓಲಾ ಇದೇ ಮೊದಲ ಬಾರಿ ತನ್ನದೇ ಬ್ರ್ಯಾಂಡ್ನ ಎಲೆಕ್ಟ್ರಿಕ್ ಸ್ಕೂಟರ್ನ್ನು ಪರಿಚಯಿಸಲು ಮುಂದಾಗಿದೆ. ಈಗಾಗಲೇ ಹೊಸ ಸ್ಕೂಟರ್ನ ಬುಕ್ಕಿಂಗ್ ಆರಂಭಗೊಂಡಿದ್ದು, 499 ರೂ. ಮುಂಗಡ ಹಣ ಪಾವತಿಸಿ ಕಾಯ್ದಿರಿಸಿಕೊಳ್ಳಬಹುದು.
ಸದ್ಯ ಆನ್ಲೈನ್ ಮೂಲಕ ಬುಕ್ಕಿಂಗ್ ಪ್ರಕ್ರಿಯೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಮಾರಾಟ ಮಳಿಗೆಗಳನ್ನು ತೆರೆಯಲ್ಲಿದ್ದೇವೆ ಎಂದು ಓಲಾ ಕಂಪೆನಿ ತಿಳಿಸಿದೆ. ಇನ್ನು ಬುಕ್ಕಿಂಗ್ ಮಾಡಲಾದ ಸ್ಕೂಟರ್ನ್ನು ಕೊರೋನಾ ಕಾರಣದಿಂದಾಗಿ ಮನೆ ಬಾಗಿಲಿಗೆ ತಲುಪಿಸುವುದಾಗಿ ಘೋಷಿಸಿದೆ. ಹಾಗೆಯೇ ಆಯ್ದ ನಗರಗಳಲ್ಲಿ ಫಾಸ್ಟ್ ಚಾರ್ಜಿಂಗ್ ಸೆಂಟರ್ಗಳನ್ನು ನಿರ್ಮಿಸಲಿದ್ದು, ಈಗಾಗಲೇ ನಿರ್ಮಾಣ ಪ್ರಕ್ರಿಯೆಗಳ ಸಿದ್ಧತೆಗಳು ಶುರುವಾಗಿದೆ. ಇದರಿಂದ ಓಲಾ ಸ್ಕೂಟರ್ನ್ನು ಚಾರ್ಜಿಂಗ್ ಸ್ಟೇಷನ್ ಮೂಲಕ ವೇಗವಾಗಿ ಚಾರ್ಜ್ ಮಾಡಿಕೊಳ್ಳಬಹುದು.
ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ನೀವು ಚಾರ್ಜಿಂಗ್ ಸ್ಟೇಷನ್‌ನಿಂದ ಚಾರ್ಜ್ ಮಾಡಿದರೆ ಶೂನ್ಯದಿಂದ ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು ಎರಡೂವರೆ ಗಂಟೆ ಸಮಯ ತೆಗೆದುಕೊಳ್ಳಲಿದೆ. ಹೈಪರ್ ಚಾರ್ಜಿಂಗ್ ಕೇಂದ್ರದಲ್ಲಿ,ಕೇವಲ 18 ನಿಮಿಷಗಳಲ್ಲಿ 50% ವರೆಗೆ ಚಾರ್ಜ್ ಮಾಡಬಹುದು. ಇನ್ನು ಮನೆಯಲ್ಲಿಯೇ ಸಂಪೂರ್ಣವಾಗಿ ಚಾರ್ಜ್ ಮಾಡಲು ಐದಾರು ಗಂಟೆ ತೆಗೆದುಕೊಳ್ಳಲಿದೆ.
ಓಲಾ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೂರು ಮಾಡೆಲ್ಗಳಲ್ಲಿ ಬಿಡುಗಡೆ ಮಾಡಲಿದೆ. ಈ ಮೂರು ಮಾಡೆಲ್ಗಳಿಗೆ ಓಲಾ ಎಸ್, ಎಸ್ 1 ಮತ್ತು ಓಲಾ ಎಸ್ 1 ಪ್ರೊ ಎಂದು ಹೆಸರಿಡಲಾಗಿದೆ. ಇವುಗಳು ಕ್ರಮವಾಗಿ 2kW, 4kW ಮತ್ತು 7kW ಮೋಟರ್‌ಗಳನ್ನು ಹೊಂದಿರಲಿವೆ. ಬೇಸ್ ಮಾಡೆಲ್ 45 ಕಿಲೋಮೀಟರ್ ವೇಗ ಹೊಂದಿದ್ದರೆ, ಎರಡನೆಯದು 70 ಕಿಲೋಮೀಟರ್ ವೇಗವನ್ನು ಹೊಂದಿರಲಿದೆ. ಹಾಗೆಯೇ 7kW ಮಾಡೆಲ್ನ್ನು 95 ಕಿ.ಮೀ ವೇಗದಲ್ಲಿ ಓಡಿಸಬಹುದು.
ಒಟ್ಟು 10 ಬಣ್ಣಗಳಲ್ಲಿ ಓಲಾ ಸ್ಕೂಟರ್ ಖರೀದಿಗೆ ಬುಕ್ಕಿಂಗ್ಗೆ ಲಭ್ಯವಿದ್ದು, ಗ್ರಾಹಕರು ಕೆಂಪು, ಪಿಂಕ್, ಹಳದಿ, ಸ್ವಿಲರ್, ಬಿಳಿ ಹಾಗೂ ನೀಲಿ ಬಣ್ಣಗಳಲ್ಲಿ ಖರೀದಿಸಬಹುದು. ಇನ್ನು ಈ ಸ್ಕೂಟರ್ನ ಮೈಲೇಜ್ ಅದರ ವೇಗಕ್ಕೆ ಅನುಗುಣವಾಗಿರಲಿದೆ. ಅಂದರೆ 20 ಕಿ.ಮೀ ವೇಗದಲ್ಲಿ ಚಲಾಯಿಸಿದರೆ ಬರೋಬ್ಬರಿ 240 ಕಿ.ಮೀ ರೇಂಜ್ (ಮೈಲೇಜ್) ಸಿಗಲಿದೆ ಎಂದು ಕಂಪೆನಿ ತಿಳಿಸಿದೆ. ಹಾಗೆಯೇ ಸಾಮಾನ್ಯ ವೇಗದಲ್ಲಿ 130-150 ಕಿಲೋಮೀಟರ್ ವ್ಯಾಪ್ತಿಯವರೆಗೆ ಚಲಿಸಬಹುದು. ಈ ಸ್ಕೂಟರ್ ಬೆಲೆಯು ಸುಮಾರು 1 ಲಕ್ಷ ರೂ.ನಿಂದ ಆರಂಭವಾಗಲಿದ್ದು, ಆ ಮಾಡೆಲ್ಗೆ ಅನುಗುಣವಾಗಿ ಬೆಲೆಯಲ್ಲಿ ವ್ಯತ್ಯಾಸಗಳು ಕಂಡು ಬರುತ್ತದೆ.
ಇದನ್ನೂ ಓದಿ: Rahul Dravid: ಇಡೀ ಪಂದ್ಯದ ಗತಿ ಬದಲಿಸಿದ ರಾಹುಲ್ ದ್ರಾವಿಡ್ ಅವರ ಆ ಒಂದು ನಿರ್ಧಾರ..!
ಇದನ್ನೂ ಓದಿ: Mary Kom: ಇದು ನಮ್ಮ ಸಂಸ್ಕೃತಿ: ಟೋಕಿಯೋ ಒಲಿಂಪಿಕ್ಸ್ಗೂ ಮುನ್ನ ಎಲ್ಲರ ಹೃದಯ ಗೆದ್ದ ಮೇರಿ ಕೋಮ್
(ola electric scooter mileage: Ola Electric scooters will be available in 10 colour options)