AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Finn Allen: ವಿರಾಟ್ ಕೊಹ್ಲಿ ಹೆಸರಿನೊಂದಿಗೆ ಅಬ್ಬರಿಸಲು ಅಣಿಯಾದ ಅಲೆನ್..!

2021 ರ ಐಪಿಎಲ್ ವೇಳೆ ಆರ್​ಸಿಬಿ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಜೋಶ್ ಫಿಲಿಪ್ ಟೂರ್ನಿಯಿಂದ ಹೊರಗುಳಿದಿದ್ದರು. ಅವರ ಬದಲಿ ಆಟಗಾರನಾಗಿ ಕಿವೀಸ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಅಲೆನ್​ಗೆ ಅವಕಾಶ ನೀಡಲಾಗಿತ್ತು.

Finn Allen: ವಿರಾಟ್ ಕೊಹ್ಲಿ ಹೆಸರಿನೊಂದಿಗೆ ಅಬ್ಬರಿಸಲು ಅಣಿಯಾದ ಅಲೆನ್..!
Finn Allen
TV9 Web
| Updated By: ಝಾಹಿರ್ ಯೂಸುಫ್|

Updated on:Jul 24, 2021 | 5:11 PM

Share

ಫಿನ್​ ಅಲೆನ್…ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಈ ಹೆಸರು ಚಿರಪರಿಚಿತ. ಆರ್​ಸಿಬಿ ಪರ ಒಂದೇ ಒಂದು ಪಂದ್ಯವಾಡದಿದ್ದರೂ ಅಲೆನ್ ವಿದೇಶಿ ಲೀಗ್​ನಲ್ಲಿ ಅಬ್ಬರಿಸುವ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅದರಲ್ಲೂ ಸ್ಪೋಟಕ ದಾಂಡಿಗನನ್ನು ಆರ್​ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿಸಬೇಕೆಂಬ ಮಾತುಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. 22 ವರ್ಷದ ಫಿನ್ ಅಲೆನ್ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಬರ್ಮಿಂಗ್​ಹ್ಯಾಮ್ ಫೀನಿಕ್ಸ್ ತಂಡ ಭಾಗವಾಗಿರುವ ಅಲೆನ್ ಇತ್ತೀಚೆಗೆ ತಂಡದ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಈ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೀಗೆ ವೈರಲ್ ಆಗಲು ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಯಕ ವಿರಾಟ್ ಕೊಹ್ಲಿ .

ಬರ್ಮಿಂಗ್​ಹ್ಯಾಮ್ ಫೀನಿಕ್ಸ್ ತಂಡದ ಜೆರ್ಸಿಯಲ್ಲಿ ಬ್ಯಾಟ್ ಹಿಡಿದು ಫಿನ್ ಅಲೆನ್ ಪೋಸ್ ನೀಡಿದ್ದರು. ಆದರೆ ಎಲ್ಲರ ಗಮನ ಸೆಳೆದಿದ್ದು ಅವರ ಬ್ಯಾಟ್ ಎಂಬುದು ವಿಶೇಷ. ಹೌದು, ತಮ್ಮ ಬ್ಯಾಟ್​ನ ಕೆಳಭಾಗದಲ್ಲಿ ಅಲೆನ್ ವಿರಾಟ್ ಕೊಹ್ಲಿ ಎಂದು ಬರೆದುಕೊಂಡಿದ್ದರು. ಇದನ್ನು ಗುರುತಿಸಿ ಅಭಿಮಾನಿಗಳು ಇದೀಗ ನ್ಯೂಜಿಲೆಂಡ್ ಕ್ರಿಕೆಟಿಗ ಫೋಟೋವನ್ನು ವೈರಲ್ ಮಾಡಿದ್ದಾರೆ.

View this post on Instagram

A post shared by Finn Allen (@finnallen32)

ಮೇಲ್ನೋಟಕ್ಕೆ ಅಲೆನ್ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಅಭಿಮಾನಿ ಎಂದು ತೋರುತ್ತದೆ. ಅಥವಾ ಈ ಬ್ಯಾಟ್​ನ್ನು ವಿರಾಟ್ ಕೊಹ್ಲಿ ಆರ್​ಸಿಬಿ ಯುವ ಆಟಗಾರನಿಗೆ ಉಡುಗೊರೆಯಾಗಿ ನೀಡಿರಬಹುದು. ಹೀಗಾಗಿಯೇ ತಮ್ಮ ಬ್ಯಾಟ್ ಮೇಲೆ ರನ್ ಮೆಷಿನ್ ಖ್ಯಾತಿಯ ಕಿಂಗ್ ಕೊಹ್ಲಿ ಹೆಸರು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿ ಹೆಸರಿನ ಬ್ಯಾಟ್​ನೊಂದಿಗೆ ದಿ ಹಂಡ್ರೆಡ್ ಲೀಗ್​ನಲ್ಲಿ ಅಬ್ಬರಿಸಲು ಅಣಿಯಾಗಿದ್ದಾರೆ.

2021 ರ ಐಪಿಎಲ್ ವೇಳೆ ಆರ್​ಸಿಬಿ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಜೋಶ್ ಫಿಲಿಪ್ ಟೂರ್ನಿಯಿಂದ ಹೊರಗುಳಿದಿದ್ದರು. ಅವರ ಬದಲಿ ಆಟಗಾರನಾಗಿ ಕಿವೀಸ್ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಅಲೆನ್​ಗೆ ಅವಕಾಶ ನೀಡಲಾಗಿತ್ತು. ಆಕ್ರಮಣಕಾರಿ ಆಟದೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಸಂಚಲನ ಸೃಷ್ಟಿಸಿರುವ ಅಲೆನ್ 12 ಫಸ್ಟ್ ಕ್ಲಾಸ್ ಪಂದ್ಯಗಳಿಂದ 343 ರನ್ ಗಳನ್ನು ಕಲೆ ಹಾಕಿದ್ದಾರೆ. ಇನ್ನು 20 ಲಿಸ್ಟ್ ಪಂದ್ಯಗಳನ್ನು ಆಡಿದ್ದು, 501 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಒಂದು ಶತಕ ಕೂಡ ಸೇರಿದೆ. ಇನ್ನು ಟಿ ಟ್ವೆಂಟಿ ಫಾರ್ಮೆಟ್ ನಲ್ಲಿ 13 ಪಂದ್ಯಗಳನ್ನು ಆಡಿದ್ದು, ಬರೋಬ್ಬರಿ 537 ಕಲೆಹಾಕಿದ್ದಾರೆ. ಇದೀಗ ದಿ ಹಂಡ್ರೆಡ್ ಲೀಗ್​ನಲ್ಲಿ ಮಿಂಚುವ ಮೂಲಕ ಯುಎಇನಲ್ಲಿ ಆರ್​ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿಯುವ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ: MS Dhoni: ಧೋನಿ ಕೋಚ್ ಆಗಲಿದ್ದಾರೆ: ಮಾಜಿ ಕ್ರಿಕೆಟಿಗನ ಭವಿಷ್ಯ..!

ಇದನ್ನೂ ಓದಿ: India vs Sri Lanka T20 Schedule: ಟಿ20 ಕದನಕ್ಕೆ ಟೀಮ್ ಇಂಡಿಯಾ ಸಜ್ಜು: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

(Rcb Finn Allen spotted having Virat Kohli’s name on his bat)

Published On - 5:10 pm, Sat, 24 July 21