Royal Enfield: ಎಲೆಕ್ಟ್ರಿಕ್ ಬುಲೆಟ್: ಸೌಂಡ್ ಮಾಡದೆ ರಸ್ತೆಗಿಳಿಯಲಿದೆಯಾ ರಾಯಲ್ ಎನ್​ಫೀಲ್ಡ್​?

ಬಜಾಜ್, ಸುಜುಕಿ ಸೇರಿದಂತೆ ದೇಶದ ಪ್ರಮುಖ ಕಂಪೆನಿಗಳು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡಿದೆ. ಈಗಾಗಲೇ ಹಲವು ಕಂಪೆನಿಗಳು ನೂತನ ಎಲೆಕ್ಟ್ರಿಕ್ ಸ್ಕೂಟರ್​ಗಳನ್ನು ಬಿಡುಗಡೆ ಮಾಡುತ್ತಿದೆ. ದೇಶದಲ್ಲಿ ಇಂಧನ ಬೆಲೆ ಏರಿಕೆಯಿಂದಾಗಿ ಜನರು ಕೂಡ ಎಲೆಕ್ಟ್ರಿಕ್ ವಾಹನಗಳತ್ತ ಆಸಕ್ತಿ ಹೊಂದಿದೆ. ಹೀಗಾಗಿಯೇ ಹಲವು ಕಂಪೆನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ಉತ್ತೇಜಿಸಲು ಮುಂದಾಗಿವೆ.

Royal Enfield: ಎಲೆಕ್ಟ್ರಿಕ್ ಬುಲೆಟ್: ಸೌಂಡ್ ಮಾಡದೆ ರಸ್ತೆಗಿಳಿಯಲಿದೆಯಾ ರಾಯಲ್ ಎನ್​ಫೀಲ್ಡ್​?
PC: ElectricVehicleWeb.in
Follow us
TV9 Web
| Updated By: ಝಾಹಿರ್ ಯೂಸುಫ್

Updated on:Jul 25, 2021 | 10:22 PM

ರಾಯಲ್ ಎನ್​ಫೀಲ್ಡ್ ಕೂಡ ಎಲೆಕ್ಟ್ರಿಕ್ ಬೈಕ್ ಆಗಲಿದೆಯಾ..? ಇಂತಹದೊಂದು ಪ್ರಶ್ನೆಗೆ ಕಾರಣವಾಗಿದ್ದು ಐಷರ್ ಮೋಟಾರ್ಸ್​ನ ಹೊಸ ಯೋಜನೆ. ಹೌದು, ಐಷರ್ ಮೋಟರ್ಸ್​ ಅಧೀನದಲ್ಲಿರುವ ರಾಯಲ್ ಎನ್‌ಫೀಲ್ಡ್ ಪ್ರಸ್ತುತ ದೇಶದಲ್ಲಿ ಕ್ಲಾಸಿಕ್, ಬುಲೆಟ್, ಹಿಮಾಲಯನ್, ಇಂಟರ್‌ಸೆಪ್ಟರ್ ಐಎನ್‌ಟಿ 650, ಕಾಂಟಿನೆಂಟಲ್ ಜಿಟಿ 650 ಮತ್ತು ಉಲ್ಕೆ 350 ಸೇರಿದಂತೆ ಹಲವು ಮಾಡೆಲ್​ಗಳ ಬೈಕ್​ಗಳನ್ನು ರಸ್ತೆಗಿಳಿಸಿದೆ. ಇದೀಗ ಇದೇ ಕಂಪೆನಿ ಎಲೆಕ್ಟ್ರಿಕ್ ವಾಹನ ನಿರ್ಮಾಣದತ್ತ ಬಂಡವಾಳ ಹೂಡಲು ಸಜ್ಜಾಗಿದೆ. ಹೀಗಾಗಿಯೇ ಮುಂದಿನ ದಿನಗಳಲ್ಲಿ ಬುಲೆಟ್ ಕೂಡ ಎಲೆಕ್ಟ್ರಿಕ್ ಬೈಕ್ ಆಗಲಿದೆಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಈ ಬಗ್ಗೆ ಮಾತನಾಡಿರುವ ಐಷರ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಸಿದ್ದಾರ್ಥ್ ಲಾಲ್, ಐಷರ್ ಮೋಟಾರ್ಸ್ ಎಲೆಕ್ಟ್ರಿಕ್ ವೆಹಿಕಲ್ ವಿಭಾಗದತ್ತ ಗಮನ ಹರಿಸಲು ನಿರ್ಧರಿಸಿದೆ. ಭವಿಷ್ಯದ ದೃಷ್ಟಿಯಲ್ಲಿ ಕಂಪೆನಿಯು ಹೆಚ್ಚಿನ ಎಲೆಕ್ಟ್ರಿಕ್ ವಾಹನ ಉತ್ಪನ್ನಗಳ ಬಗ್ಗೆ ಕೆಲಸ ಮಾಡುತ್ತಿದೆ ಎಂದಿದ್ದಾರೆ. ಇದರ ಬೆನ್ನಲ್ಲೇ ಎಲೆಕ್ಟ್ರಿಕ್ ಬುಲೆಟ್ ಬೈಕ್​ಗಳ ಫೋಟೋಗಳು ವೈರಲ್ ಆಗಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ರಾಯಲ್ ಎನ್​ಫೀಲ್ಡ್​ ಎಲೆಕ್ಟ್ರಿಕ್ ಮಾಡೆಲ್​ನಲ್ಲಿ ರಸ್ತೆಗಿಳಿಯಲಿದೆ ಎಂದೇ ಹೇಳಲಾಗುತ್ತಿದೆ.

ಕಂಪೆನಿಯು ಜಾಗತಿಕ ಮಾರುಕಟ್ಟೆಗಳಿಗೆ ಪೂರ್ಣ ಪ್ರಮಾಣದ ಪ್ರೀಮಿಯಂ ಎಲೆಕ್ಟ್ರಿಕ್ ವಾಹನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದು, ಭವಿಷ್ಯದಲ್ಲಿ ಐಷರ್ ಕಂಪೆನಿಯು ಎಲೆಕ್ಟ್ರಿಕ್ ಬೈಕ್​ಗಳ ನಿರ್ಮಾಣದತ್ತ ಯೋಜನೆ ರೂಪಿಸಲಿದೆ. ಐಷರ್ ಮೋಟಾರ್ಸ್ ಪರಿಸರ, ಸಾಮಾಜಿಕ ಮತ್ತು ಆಡಳಿತ (ಇಎಸ್​​ಜಿ) ದೃಷ್ಟಿಯನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದು, ಎಲೆಕ್ಟ್ರಿಕ್ ವಾಹನಗಳು ಕೂಡ ಅದರ ಒಂದು ಭಾಗವಾಗಿದೆ ಎಂದು ಲಾಲ್ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಇತ್ತ ಬಜಾಜ್, ಸುಜುಕಿ ಸೇರಿದಂತೆ ದೇಶದ ಪ್ರಮುಖ ಕಂಪೆನಿಗಳು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡಿದೆ. ಈಗಾಗಲೇ ಹಲವು ಕಂಪೆನಿಗಳು ನೂತನ ಎಲೆಕ್ಟ್ರಿಕ್ ಸ್ಕೂಟರ್​ಗಳನ್ನು ಬಿಡುಗಡೆ ಮಾಡುತ್ತಿದೆ. ದೇಶದಲ್ಲಿ ಇಂಧನ ಬೆಲೆ ಏರಿಕೆಯಿಂದಾಗಿ ಜನರು ಕೂಡ ಎಲೆಕ್ಟ್ರಿಕ್ ವಾಹನಗಳತ್ತ ಆಸಕ್ತಿ ಹೊಂದಿದೆ. ಹೀಗಾಗಿಯೇ ಹಲವು ಕಂಪೆನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ಉತ್ತೇಜಿಸಲು ಮುಂದಾಗಿವೆ.

ಅದರಲ್ಲೂ ಓಲಾ ಕಂಪೆನಿಯು ತನ್ನ ನೂತನ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಭಾರತದಲ್ಲಿ ಸಂಚಲನ ಸೃಷ್ಟಿಸಿದ್ದು, ಈಗಾಗಲೇ 1 ಲಕ್ಷಕ್ಕೂ ಅಧಿಕ ಮಂದಿ ನೂತನ ಸ್ಕೂಟರ್​ಗಾಗಿ ಬುಕ್ಕಿಂಗ್ ಮಾಡಿದ್ದಾರೆ. ಅತ್ತ ಬಜಾಜ್ ಹಾಗೂ ಅಥರ್ ಕಂಪೆನಿ ಕೂಡ ತನ್ನ ಎಲೆಕ್ಟ್ರಿಕ್ ಸ್ಕೂಟರ್​ಗಳ ಬುಕ್ಕಿಂಗ್​ ಅನ್ನು ಮತ್ತಷ್ಟು ಸರಳಗೊಳಿಸಲು ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. ಇದರ ಬೆನ್ನಲ್ಲೇ ಐಷರ್ ಕಂಪೆನಿ ಕೂಡ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯತ್ತ ಒಲವು ತೋರಿದೆ. ಹೀಗಾಗಿಯೇ ಮುಂದಿನ ದಿನಗಳಲ್ಲಿ ಐಷರ್ ಮೋರ್ಟರ್ಸ್​ ಬಿಡುಗಡೆ ಮಾಡಲಿರುವ ಬೈಕ್​ಗಳು ಎಲೆಕ್ಟ್ರಿಕ್ ಬೈಕ್​ಗಳಾಗಿರಲಿವೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.​

PC: ElectricVehicleWeb.in

ಇದನ್ನೂ ಓದಿ: IPL 2021: ಐಪಿಎಲ್​ ಆರಂಭಕ್ಕೂ ಮುನ್ನವೇ CSK ತಂಡದ ಬಿಗ್​ ಪ್ಲ್ಯಾನ್..!

ಇದನ್ನೂ ಓದಿ: ದ್ರಾವಿಡ್ ಗರಡಿ ಹುಡುಗರು ಎಡವಿದೆಲ್ಲಿ: ಭಾರತದ ಸೋಲಿಗೆ ಇದುವೇ ಪ್ರಮುಖ ಕಾರಣ..!

Published On - 5:34 pm, Sun, 25 July 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ