Bajaj Chetak: ಹೊಸ ಲುಕ್​ನೊಂದಿಗೆ ಮತ್ತೆ ಬಂದ ಬಜಾಜ್ ಚೇತಕ್: ಮೈಲೇಜ್ ಬರೋಬ್ಬರಿ 95 ಕಿ.ಮೀ

bajaj chetak electric scooter price: ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಸದ್ಯ ಎರಡು ಮಾಡೆಲ್​ಗಳಲ್ಲಿ ಬುಕ್ಕಿಂಗ್​ಗೆ ಲಭ್ಯವಿದ್ದು, ಅದರಂತೆ ಗ್ರಾಹಕರು ಎಂಟ್ರಿ-ಲೆವೆಲ್ ಅರ್ಬನ್ ಮಾಡೆಲ್ ಮತ್ತು ಟಾಪ್-ಎಂಡ್ ಪ್ರೀಮಿಯಂ ಮಾಡೆಲ್​ಗಳಲ್ಲಿ ಬುಕ್ ಮಾಡಿಕೊಳ್ಳಬಹುದು.

Bajaj Chetak: ಹೊಸ ಲುಕ್​ನೊಂದಿಗೆ ಮತ್ತೆ ಬಂದ ಬಜಾಜ್ ಚೇತಕ್: ಮೈಲೇಜ್ ಬರೋಬ್ಬರಿ 95 ಕಿ.ಮೀ
bajaj chetak scooter
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 24, 2021 | 6:33 PM

Bajaj Chetak Electric Scooter: ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರುತ್ತಿದೆ. ಇದರ ನಡುವೆ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾಗುತ್ತಿದೆ. ಇದನ್ನೇ ಈಗ ದೇಶದ ಪ್ರಮುಖ ವಾಹನ ತಯಾರಿಕಾ ಕಂಪೆನಿಗಳು ಬಂಡವಾಳ ಮಾಡಿಕೊಳ್ಳಲು ಮುಂದಾಗಿದ್ದು, ಅದರಂತೆ ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತಿದೆ. ಇದೀಗ ಬಜಾಜ್ ಕಂಪೆನಿ ಕೂಡ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಹಲವು ನಗರಗಳಲ್ಲಿ ತನ್ನ ನೂತನ ಎಲೆಕ್ಟ್ರಿಕ್ ಸ್ಕೂಟರ್​ನ ಬುಕ್ಕಿಂಗ್ ಆರಂಭಿಸಿದೆ.

ಬಜಾಜ್ ಕಂಪೆನಿಯು ತನ್ನ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಿದ್ದ ಜನಪ್ರಿಯ ಬಜಾಜ್ ಚೇತಕ್​ನ್ನು ಎಲೆಕ್ಟ್ರಿಕ್ ಮಾಡೆಲ್​ನಲ್ಲಿ ಇತ್ತೀಚೆಗೆ ರಿ ಲಾಂಚ್ ಮಾಡಿತ್ತು. ಇದಾಗ್ಯೂ ಇ-ಸ್ಕೂಟರ್​ ಕೆಲ ನಗರಗಳಿಗೆ ಸೀಮಿತವಾಗಿತ್ತು. ಆದರೆ ಇದೀಗ ಕಂಪನಿಯು ಮೂರು ಹೊಸ ನಗರಗಳಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್​ನ ಬುಕ್ಕಿಂಗ್ ಆರಂಭಿಸಿದೆ. ಇವುಗಳಲ್ಲಿ ಮೈಸೂರು, ಮಂಗಳೂರು ಮತ್ತು ಔರಂಗಾಬಾದ್ ಸೇರಿವೆ. ಅಂದರೆ ನೀವು ಈ ಮೂರು ನಗರಗಳಲ್ಲಿದ್ದರೆ, ಬಜಾಜ್ ಇ-ಸ್ಕೂಟರ್ ಅನ್ನು ಕಂಪೆನಿಯ ಅಧಿಕೃತ ವೆಬ್​ಸೈಟ್ ಮೂಲಕ ಬುಕ್ ಮಾಡಬಹುದು.

ಭರ್ಜರಿ ಪೈಪೋಟಿ: ಬಜಾಜ್ ಆಟೋಮೊಬೈಲ್ಸ್ 2022 ರ ವೇಳೆಗೆ ಬಜಾಜ್ ಚೇತಕ್​ ಸ್ಕೂಟರ್​ನ ಡೆಲಿವರಿಯನ್ನು 22 ಭಾರತೀಯ ನಗರಗಳಿಗೆ ವಿಸ್ತರಿಸಲು ಯೋಜನೆ ರೂಪಿಸಿದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್​ನ್ನು ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ಬಿಡುಗಡೆ ಮಾಡಲಾಗುವುದು ತಿಳಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್​ಗಳಾದ ಟಿವಿಎಸ್ ಐಕ್ಯೂಬ್, ಅಥರ್ 450 ಎಕ್ಸ್ ಮತ್ತು ಓಲಾ ಇ-ಸ್ಕೂಟರ್ ಜೊತೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಭರ್ಜರಿ ಸ್ಪರ್ಧೆಯೊಡ್ಡುವ ನಿರೀಕ್ಷೆಯಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್​ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದರ ಬೆನ್ನಲ್ಲೇ ಬಜಾಜ್ ಕೂಡ ಪ್ರಮುಖ ನಗರಗಳಲ್ಲಿ ಬುಕ್ಕಿಂಗ್ ಆರಂಭಿಸುತ್ತಿರುವುದು ವಿಶೇಷ.

2 ಮಾಡೆಲ್​ಗಳಲ್ಲಿ ಲಭ್ಯ: ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಸದ್ಯ ಎರಡು ಮಾಡೆಲ್​ಗಳಲ್ಲಿ ಬುಕ್ಕಿಂಗ್​ಗೆ ಲಭ್ಯವಿದ್ದು, ಅದರಂತೆ ಗ್ರಾಹಕರು ಎಂಟ್ರಿ-ಲೆವೆಲ್ ಅರ್ಬನ್ ಮಾಡೆಲ್ ಮತ್ತು ಟಾಪ್-ಎಂಡ್ ಪ್ರೀಮಿಯಂ ಮಾಡೆಲ್​ಗಳಲ್ಲಿ ಬುಕ್ ಮಾಡಿಕೊಳ್ಳಬಹುದು.

ಬ್ಯಾಟರಿ ಮತ್ತು ಮೋಟರ್: ಈ ಇ-ಸ್ಕೂಟರ್ 3.8 ಕಿ.ವ್ಯಾಟ್ ಪವರ್ ಮತ್ತು 4.1 ಕಿ.ವ್ಯಾ ಗರಿಷ್ಠ ಎಲೆಕ್ಟ್ರಿಕ್ ಮೋಟರ್ ಹೊಂದಿರಲಿದೆ. ಸ್ಕೂಟರ್‌ನಲ್ಲಿ ನೀಡಲಾದ ವಿಶೇಷ ಆಟೋಮ್ಯಾಟಿಕ್ ಟ್ರಾನಿಮಿಷನ್ ಇದ್ದು, ಇದು ಹಿಂದಿನ ಚಕ್ರಗಳಿಗೆ ಹೆಚ್ಚಿನ ಪವರ್ ಒದಗಿಸಲಿದೆ. ಇನ್ನು ಈ ಸ್ಕೂಟರ್ 3kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ನೀಡಲಾಗಿದೆ.

ಬ್ಯಾಟರಿ ಪವರ್: ಬಜಾಜ್ ಚೇತಕ್​ ಇ-ಸ್ಕೂಟರ್​​ನ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಲು ಸುಮಾರು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಹಾಗೆಯೇ ವೇಗದ ಚಾರ್ಜಿಂಗ್ ಕೇವಲ ಒಂದು ಗಂಟೆಯಲ್ಲಿ 25 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು. ಇನ್ನು ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಅವಧಿಯು 70,000 ಕಿ.ಮೀ ಅಥವಾ 7 ವರ್ಷಗಳವರೆಗೆ ಇರಲಿದೆ. ಈ ಬ್ಯಾಟರಿಗಳ ಮೇಲೆ ಕಂಪನಿಯು 3 ವರ್ಷಗಳ ಅಥವಾ 50,000 ಕಿ.ಮೀ ವರೆಗೆ ಖಾತರಿ ನೀಡಲಿದೆ.

ಮೈಲೇಜ್ (ರೇಂಜ್): ಒಂದು ಬಾರಿ ಪೂರ್ಣ ಚಾರ್ಜಿಂಗ್ ಮಾಡಿದ ಬಳಿಕ ಇಕೊ ಸ್ಪೋರ್ಟ್​ ಮೋಡ್‌ನಲ್ಲಿ ಈ ಸ್ಕೂಟರ್​ 95 ಕಿ.ಮೀ ಮೈಲೇಜ್ ನೀಡಲಿದೆ. ಹಾಗೆಯೇ ಸ್ಪೋರ್ಟ್ ಮೋಡ್‌ನಲ್ಲಿ 85 ಕಿ.ಮೀ ವ್ಯಾಪ್ತಿಯನ್ನು ಕ್ರಮಿಸಬಹುದು.

ಬೆಲೆ ಮತ್ತು ಬುಕಿಂಗ್: ಬಜಾಜ್ ಚೇತಕ್ ಇ-ಸ್ಕೂಟರ್​ನ್ನು 2 ಸಾವಿರ ರೂ. ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಹಾಗೆಯೇ ಇದರ ಪುಣೆ ಎಕ್ಸ್​ ಶೋ ರೂಂ ಬೆಲೆ 1,42,998 ರೂ. (ಅರ್ಬನ್ ಮಾಡೆಲ್) ಮತ್ತು 1,44,987 ರೂ. (ಪ್ರೀಮಿಯಂ ಮಾಡೆಲ್).

ಇದನ್ನೂ ಓದಿ: MS Dhoni: ಧೋನಿ ಕೋಚ್ ಆಗಲಿದ್ದಾರೆ: ಮಾಜಿ ಕ್ರಿಕೆಟಿಗನ ಭವಿಷ್ಯ..!

ಇದನ್ನೂ ಓದಿ: India vs Sri Lanka T20 Schedule: ಟಿ20 ಕದನಕ್ಕೆ ಟೀಮ್ ಇಂಡಿಯಾ ಸಜ್ಜು: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

(Bajaj Chetak Electric Scooter Now Launched In 6 Cities)

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ