Viral Video: ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗೆ ಎಚ್ಚರಿಕೆ ನೀಡಿದ ಪೊಲಾರ್ಡ್
West Indies vs Australia 3rd ODI: ಈ ಹಿಂದೆ ಕಪಿಲ್ ದೇವ್ ಕೂಡ ಮಂಕಡಿಂಗ್ ರನೌಟ್ ಮಾಡಿ ಗಮನ ಸೆಳೆದಿದ್ದರು. 1991-92 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಏಕದಿನ ಪಂದ್ಯದ ವೇಳೆ ನಾನ್ಸ್ಟ್ರೈಕರ್ ತುದಿಯಲ್ಲಿದ್ದ ಪೀಟರ್ ಕರ್ಸ್ಟೆನ್ ಬೌಲ್ ಮಾಡುವ ಮುನ್ನ ಕ್ರೀಸ್ ಬಿಡುತ್ತಿದ್ದರು.
ಕ್ರಿಕೆಟ್ ಅಂಗಳದಲ್ಲಿ ಮಂಕಡಿಂಗ್ ರನೌಟ್ ಸದಾ ಸುದ್ದಿಯಲ್ಲಿರುತ್ತೆ. ಈ ಹಿಂದೆ ರವಿಚಂದ್ರನ್ ಅಶ್ವಿನ್ ಶ್ರೀಲಂಕಾ ವಿರುದ್ದ ಹಾಗೂ ಐಪಿಎಲ್ನಲ್ಲಿ ಮಂಕಡಿಂಗ್ ರನೌಟ್ ಮಾಡಿ ಗಮನ ಸೆಳೆದಿದ್ದರು. ಅಶ್ವಿನ್ ಅವರ ನಡೆಗೆ ಪರ-ವಿರೋಧಗಳು ವ್ಯಕ್ತವಾಗಿದ್ದವು. ಆದರೆ ಕ್ರಿಕೆಟ್ ನಿಯಮಗಳ ಪ್ರಕಾರ ಮಂಕಡಿಂಗ್ ರನೌಟ್ ಮೂಲಕ ಬ್ಯಾಟ್ಸ್ಮನ್ನ್ನು ವಜಾಗೊಳಿಸಬಹುದು. ಆದರೆ ಅದಕ್ಕೂ ಮುನ್ನ ಬ್ಯಾಟ್ಸ್ಮನ್ಗಳಿಗೆ ಎಚ್ಚರಿಕೆ ನೀಡುವುದು ಕ್ರೀಡಾ ಸ್ಪೂರ್ತಿ ಎಂದು ಪರಿಗಣಿಸಲಾಗುತ್ತದೆ. ಇದೀಗ ಮತ್ತೊಮ್ಮೆ ಮಂಕಡಿಂಗ್ ಎಚ್ಚರಿಕೆ ಸುದ್ದಿಯಲ್ಲಿದೆ. ಆಸ್ಟ್ರೇಲಿಯಾ ವಿರುದ್ದದ 3ನೇ ಏಕದಿನ ಪಂದ್ಯದ ವೇಳೆ ವೆಸ್ಟ್ ಇಂಡೀಸ್ ನಾಯಕ ಕೀರನ್ ಪೊಲಾರ್ಡ್ ಅವರಿಗೆ ಮಂಕಡಿಂಗ್ ರನೌಟ್ ಮಾಡುವ ಅವಕಾಶ ಲಭಿಸಿತ್ತು.
ಸಾಮಾನ್ಯವಾಗಿ ಮಧ್ಯಮ ವೇಗದಲ್ಲಿ ಬೌಲಿಂಗ್ ಮಾಡುವ ಪೊಲಾರ್ಡ್ ಈ ಪಂದ್ಯದಲ್ಲಿ ಆಫ್ ಸ್ಪಿನ್ನರ್ ಆಗಿ ಚೆಂಡೆಸೆದಿದ್ದರು. ಹೀಗೆ ಚೆಂಡೆಸೆಯುವ ಮುನ್ನವೇ ಆಸೀಸ್ ಬ್ಯಾಟ್ಸ್‌ಮನ್ ಮಾಥ್ಯೂ ವೇಡ್ ಕ್ರೀಸ್ ಬಿಟ್ಟಿದ್ದರು. ಇದನ್ನು ಗಮನಿಸಿದ ಪೊಲಾರ್ಡ್ ಚೆಂಡೆಸದಿರಲಿಲ್ಲ. ತಕ್ಷಣವೇ ಎಚ್ಚೆತ್ತುಕೊಂಡ ವೇಡ್ ಎಡಗಾಲನ್ನು ಹಿಂದಕ್ಕಿಟ್ಟು ಕ್ರೀಸ್ ಸೇರಿಕೊಂಡರು. ಅತ್ತ ಔಟ್ ಮಾಡುವ ಅವಕಾಶ ಹೊಂದಿದ್ದರೂ ಪೊಲಾರ್ಡ್ ವೇಡ್ಗೆ ಎಚ್ಚರಿಕೆ ನೀಡಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Very kind of Pollard lol pic.twitter.com/KbfsME2ZCS
— Did Australia win? (@Pacebouncy) July 26, 2021
2019ರ ಐಪಿಎಲ್ನಲ್ಲಿ ಅಶ್ವಿನ್ ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್‌ನನ್ನು ಮಂಕಡಿಂಗ್ ಮಾಡಿ ಔಟ್ ಮಾಡಿದ್ದರು. ಈ ಬಗ್ಗೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದ್ದವು. ಇದಾಗ್ಯೂ ಅಂದು ಈ ಅಶ್ವಿನ್ ನಡೆ ಬಗ್ಗೆ ಪ್ರತಿಕ್ರಿಯಿಸಿದ್ದ ಲೆಜೆಂಡ್ ಕಪಿಲ್ ದೇವ್ ಬೆಂಬಲ ವ್ಯಕ್ತಪಡಿಸಿದ್ದರು. ಬೌಲರ್ ಚೆಂಡೆಸೆಯುವ ಮೊದಲೇ ಬ್ಯಾಟ್ಸ್‌ಮನ್ ಕ್ರೀಸ್ ಬಿಟ್ಟರೆ ರನೌಟ್ ಮಾಡುವುದು ನನ್ನ ಪ್ರಕಾರ ತಪ್ಪಲ್ಲ ಎಂದಿದ್ದರು.
ಏಕೆಂದರೆ ಐಸಿಸಿ ನಿಯಮ 42.15 ರ ಪ್ರಕಾರ ಚೆಂಡನ್ನು ಎಸೆಯುವ ಮುನ್ನ ನಾನ್ ಸ್ಟ್ರೈಕ್ನಲ್ಲಿರುವ ಬ್ಯಾಟ್ಸ್‌ಮನ್ ಕ್ರೀಸ್ ಬಿಟ್ಟರೆ ಬೌಲರ್ಗೆ ರನೌಟ್ ಮಾಡುವ ಅವಕಾಶವಿದೆ. ಕ್ರಿಕೆಟ್ ನಿಯಮವೇ ಹೀಗಿರುವಾಗ ಇಲ್ಲಿ ಕ್ರೀಡಾ ಸ್ಪೂರ್ತಿ ಎಲ್ಲಿ ಬರುತ್ತೆ. ಹೀಗೆ ಮೊದಲೇ ಕ್ರೀಸ್ ಬಿಟ್ಟು ಲಾಭ ಪಡೆಯುತ್ತಿರುವುದು ಬ್ಯಾಟ್ಸ್‌ಮನ್ ಅಲ್ಲವೇ? ಅವರಿಗೆ ಕ್ರೀಡಾ ಸ್ಪೂರ್ತಿ ಅನ್ವಯವಾಗುದಿಲ್ಲವೇ ಎಂದು ಕಪಿಲ್ ದೇವ್ ಪ್ರಶ್ನಿಸಿದ್ದರು.
ಅಷ್ಟೇ ಅಲ್ಲದೆ ಈ ಹಿಂದೆ ಕಪಿಲ್ ದೇವ್ ಕೂಡ ಮಂಕಡಿಂಗ್ ರನೌಟ್ ಮಾಡಿ ಗಮನ ಸೆಳೆದಿದ್ದರು. 1991-92 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಏಕದಿನ ಪಂದ್ಯದ ವೇಳೆ ನಾನ್ಸ್ಟ್ರೈಕರ್ ತುದಿಯಲ್ಲಿದ್ದ ಪೀಟರ್ ಕರ್ಸ್ಟೆನ್ ಬೌಲ್ ಮಾಡುವ ಮುನ್ನ ಕ್ರೀಸ್ ಬಿಡುತ್ತಿದ್ದರು. ಈ ವೇಳೆ ಒಂದೆರಡು ಬಾರಿ ಕಪಿಲ್ ದೇವ್ ಎಚ್ಚರಿಕೆ ನೀಡಿದ್ದರು. ಆದರೆ ಅದೇ ತಪ್ಪನ್ನು ಮರಕಳಿಸಿದ್ದ ಪೀಟರ್ನ್ನು ಮಂಕಡಿಂಗ್ ರನೌಟ್ ಮಾಡಿ ಕಪಿಲ್ ದೇವ್ ಪೆವಿಲಿಯನ್ಗೆ ಕಳುಹಿಸಿದ್ದರು.
ಇದನ್ನೂ ಓದಿ: Viral Story: ಟ್ರಾಫಿಕ್ ಪೊಲೀಸ್ ಮನೆಯಲ್ಲಿ ಚಿನ್ನದ ಟಾಯ್ಲೆಟ್
ಇದನ್ನೂ ಓದಿ: ಈವರೆಗೆ ಟೀಮ್ ಇಂಡಿಯಾ ಪರ ಎಷ್ಟು ಮಂದಿ ಆಡಿದ್ದಾರೆ ಗೊತ್ತಾ?
(Kieron Pollard warns Australian player on the field, video goes viral)
Published On - 6:51 pm, Tue, 27 July 21