LICಯ ವಿಶೇಷ ಯೋಜನೆ: 200 ರೂ. ಹೂಡಿಕೆ ಮಾಡಿ, 28 ಲಕ್ಷ ರೂ. ಪಡೆಯಿರಿ

ನೀವು 2 ಲಕ್ಷ ರೂ ವಿಮಾ ಮೊತ್ತದ ಪಾಲಿಸಿಯನ್ನು ತೆಗೆದುಕೊಂಡರೆ, ಮೊದಲ ಐದು ವರ್ಷಗಳಲ್ಲಿ ವಿಮಾ ಮೊತ್ತದ ವ್ಯಾಪ್ತಿ 2 ಲಕ್ಷ, 6 ರಿಂದ 10 ವರ್ಷಗಳವರೆಗೆ 2.50 ಲಕ್ಷ, 11 ರಿಂದ 15 ವರ್ಷಗಳವರೆಗೆ 3 ಲಕ್ಷ ಮತ್ತು 16 ರಿಂದ 20 ರವರೆಗೆ ವರ್ಷಗಳ ವ್ಯಾಪ್ತಿ 4 ಲಕ್ಷ ರೂ. ಆಗಿರುತ್ತದೆ.

LICಯ ವಿಶೇಷ ಯೋಜನೆ: 200 ರೂ. ಹೂಡಿಕೆ ಮಾಡಿ, 28 ಲಕ್ಷ ರೂ. ಪಡೆಯಿರಿ
LIC
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jul 31, 2021 | 5:57 PM

ನೀವು ಲೈಫ್ ಇನ್ಶುರೆನ್ಸ್ ಕಾರ್ಪೊರೇಶನ್ (LIC)ನ ಯಾವುದಾದರೂ ಪಾಲಿಸಿಯಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಜೀವನ್ ಪ್ರಗತಿ ಸ್ಕೀಮ್ (Jeevan Pragati Scheme)​ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಈ ಪಾಲಿಸಿಯಲ್ಲಿ ನೀವು ದಿನಕ್ಕೆ 200 ರೂ.ಗಳನ್ನು ಹೂಡಿಕೆ ಮಾಡಿದರೆ ಸಾಕು. ಆ ಬಳಿಕ 28 ಲಕ್ಷ ರೂಪಾಯಿಯಾಗಿ ಹಿಂಪಡೆಯಬಹುದು. ಅಷ್ಟೇ ಅಲ್ಲದೆ ಈ ಪಾಲಿಸಿಯ ಮತ್ತೊಂದು ವಿಶೇಷತೆಯೆಂದರೆ ಇದರಲ್ಲಿ ನೀವು 15,000 ಕ್ಕಿಂತ ಹೆಚ್ಚು ಪಿಂಚಣಿಯನ್ನು ಸಹ ಪಡೆಯಬಹುದು. ಹಾಗಿದ್ರೆ ಈ ವಿಶೇಷ ಯೋಜನೆಯ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ…

LIC ಜೀವನ್ ಪ್ರಗತಿ ಯೋಜನೆ (Jeevan Pragati Scheme): LIC ಯ ಜೀವನ್ ಪ್ರಗತಿ ಯೋಜನೆ ಪಾಲಿಸಿಯಲ್ಲಿ ನೀವು ಎಷ್ಟು ವಿಮಾ ಮೊತ್ತವನ್ನು ಪಡೆಯುತ್ತೀರಿ ಅದು ಅಂತ್ಯದ ವೇಳೆಗೆ ಸುಮಾರು ಎರಡು ಪಟ್ಟು ಹೆಚ್ಚಾಗುತ್ತದೆ. ಇದೊಂದು ನಾನ್​ ಲಿಂಕ್ ಪಾಲಿಸಿ ಆಗಿರುವುದರಿಂದ ಹೆಚ್ಚಿನ ಪ್ರಯೋಜನ ಸಿಗುತ್ತೆ.

ಈ ಪಾಲಿಸಿಯ ಪ್ರಯೋಜನಗಳೇನು? ಅಲ್ಪಾವಧಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ಪಾಲಿಸಿದಾರನು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಅವುಗಳಲ್ಲಿ ಮುಖ್ಯವಾದವು ಈ ಕೆಳಗಿನಂತಿವೆ.

>> ಇದು ಒಂದು ದತ್ತಿ ಯೋಜನೆಯಾಗಿದ್ದು, ಇಲ್ಲಿ ಹೂಡಿಕೆ ಮಾಡುವುದು ಹೆಚ್ಚು ಭದ್ರತೆ ಹಾಗೂ ಇದು ಹೆಚ್ಚಿನ ಉಳಿತಾಯವನ್ನು ಒದಗಿಸುತ್ತದೆ. >> ಪಾಲಿಸಿಯಲ್ಲಿ ರಿಸ್ಕ್ ಕವರ್ ಪ್ರತಿ ಐದು ವರ್ಷಗಳಿಗೊಮ್ಮೆ ಹೆಚ್ಚಾಗುತ್ತದೆ. >> ಮೊದಲ ಐದು ವರ್ಷಗಳ ವಿಮಾ ಮೊತ್ತವು ಒಂದೇ ಆಗಿರುತ್ತದೆ. >> ಇದರ ನಂತರ 6 ರಿಂದ 10 ವರ್ಷಗಳೊಳಗೆ ಇದು 25% ರಿಂದ 125% ಗೆ ಹೆಚ್ಚಾಗುತ್ತದೆ. >> 11 ರಿಂದ 15 ವರ್ಷಗಳವರೆಗೆ ವಿಮಾ ಮೊತ್ತವು 150% ಆಗುತ್ತದೆ. >> 16 ರಿಂದ 20 ವರ್ಷಗಳವರೆಗೆ ವಿಮಾ ಮೊತ್ತವು ಮೂಲ ವಿಮೆಯ 200% ಆಗುತ್ತದೆ.

ಅಕಾಲಿಕ ಮರಣವಾದ್ರೆ? ಈ ಪಾಲಿಸಿ ಅವಧಿಯಲ್ಲಿ ಪಾಲಿಸಿದಾರರು ಮರಣ ಹೊಂದಿದರೆ ಸಾವಿನ ಮೇಲೆ ವಿಮಾ ಮೊತ್ತ + ಸರಳ ರಿವರ್ಷನರಿ ಬೋನಸ್ (ಠೇವಣಿ ಬೋನಸ್) + ಅಂತಿಮ ಸೇರ್ಪಡೆ ಬೋನಸ್ (ಯಾವುದಾದರೂ ಇದ್ದರೆ) ಆತನ/ಅವಳ ನಾಮಿನಿಗೆ ಪಾವತಿಸಲಾಗುತ್ತದೆ.

ಅಂದರೆ, ನೀವು 2 ಲಕ್ಷ ರೂ ವಿಮಾ ಮೊತ್ತದ ಪಾಲಿಸಿಯನ್ನು ತೆಗೆದುಕೊಂಡರೆ, ಮೊದಲ ಐದು ವರ್ಷಗಳಲ್ಲಿ ವಿಮಾ ಮೊತ್ತದ ವ್ಯಾಪ್ತಿ 2 ಲಕ್ಷ, 6 ರಿಂದ 10 ವರ್ಷಗಳವರೆಗೆ 2.50 ಲಕ್ಷ, 11 ರಿಂದ 15 ವರ್ಷಗಳವರೆಗೆ 3 ಲಕ್ಷ ಮತ್ತು 16 ರಿಂದ 20 ರವರೆಗೆ ವರ್ಷಗಳ ವ್ಯಾಪ್ತಿ 4 ಲಕ್ಷ ರೂ. ಆಗಿರುತ್ತದೆ. ಅಂದರೆ ವರ್ಷ ಕಳೆಯುತ್ತಿದ್ದಂತೆ ವಿಮಾ ಮೊತ್ತವು ದುಪ್ಪಟ್ಟಾಗುತ್ತದೆ. ಆಕಸ್ಮಿಕ ಸಾವು ಮತ್ತು ಅಂಗವೈಕಲ್ಯ ಕೂಡ ಈ ಪಾಲಿಸಿಯ ಅಡಿಯಲ್ಲಿ ಬರುತ್ತದೆ. ಇದಕ್ಕಾಗಿ ನೀವು ಹೆಚ್ಚುವರಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ.

28 ಲಕ್ಷ ರೂ ಸಿಗಲಿದೆ: ಈ ಯೋಜನೆಯಡಿಯಲ್ಲಿ, 20 ವರ್ಷಗಳ ನಂತರ 15 ಲಕ್ಷಗಳ ಮೊತ್ತದ ವಿಮಾ ಮೊತ್ತ ಮತ್ತು 200 ರೂಗಳ ದೈನಂದಿನ ಹೂಡಿಕೆಯ ಮೇಲೆ ನೀವು ಸುಮಾರು 28 ಲಕ್ಷ ರೂಪಾಯಿಗಳನ್ನು ಪಡೆಯಬಹುದು.

ಎಲ್ಐಸಿ ಜೀವನ್ ಪ್ರಗತಿ ಯೋಜನೆಯ ನಿಯಮಗಳು: ವಯಸ್ಸು: 12 ರಿಂದ 45 ವರ್ಷಗಳಿನವರು ಈ ಪಾಲಿಸಿ ಪಡೆಯಬಹುದು. ಪಾಲಿಸಿ ಅವಧಿ: 12 ರಿಂದ 20 ವರ್ಷಗಳು ಗರಿಷ್ಠ ಮೆಚ್ಯೂರಿಟಿ ವಯಸ್ಸು: 65 ವರ್ಷಗಳು ಕವರ್ ಮೊತ್ತ ಕನಿಷ್ಠ ರೂ .1,50,000 ಗರಿಷ್ಠ ಯಾವುದೇ ಮಿತಿ ಇಲ್ಲ

ಎಲ್‌ಐಸಿ ಜೀವನ್ ಪ್ರಗತಿ ಯೋಜನೆಯ ಸೆರೆಂಡರ್ ವ್ಯಾಲ್ಯೂ: ಪಾಲಿಸಿದಾರರು 3 ವರ್ಷಗಳ ಕಾಲ ಪ್ರೀಮಿಯಂ ಪಾವತಿಸಿದ್ದರೆ ಅವರು ಪಾಲಿಸಿಯನ್ನು ಒಪ್ಪಿಸಬಹುದು ಮತ್ತು ಸೆರೆಂಡರ್ ಮೌಲ್ಯವನ್ನು ಪಡೆಯಬಹುದು.

ಇದನ್ನೂ ಓದಿ: ಕಡಿಮೆ ಬೆಲೆಯ ಪವರ್​ಫುಲ್ ಪವರ್ ಬ್ಯಾಂಕ್: ಮೊಬೈಲ್, ಲ್ಯಾಪ್​ಟಾಪ್​ನ್ನು ಚಾರ್ಜ್​ ಮಾಡಬಹುದು

ಇದನ್ನೂ ಓದಿ: Viral Story: ಒಂದು ಕೆ.ಜಿ ಮಾಂಸ ಖರೀದಿಸಿದ್ರೆ ಒಂದು ಲೀಟರ್ ಪೆಟ್ರೋಲ್ ಉಚಿತ

( lic jeevan pragati yojana invest 200 rupees daily and get 28 lakh )

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ