Women Health: ಪಿಸಿಓಎಸ್ ಎಂದರೇನು? ಇದು ಮಹಿಳೆಯರಲ್ಲಿ ಬಂಜೆತನದ ಸಮಸ್ಯೆಗೆ ಹೇಗೆ ಕಾರಣ ಎಂಬುದನ್ನು ತಿಳಿಯಿರಿ
ಅಂಕಿಅಂಶಗಳ ಪ್ರಕಾರ, ಪ್ರತಿ 5 ಮಹಿಳೆಯರಲ್ಲಿ ಒಬ್ಬರು ಪಿಸಿಓಎಸ್ನಿಂದ ಬಳಲುತ್ತಿದ್ದಾರೆ. ಇದನ್ನು ಪಿಸಿಓಡಿ ಎಂದೂ ಕರೆಯುತ್ತಾರೆ. ಈ ಕಾಯಿಲೆಯಿಂದಾಗಿ, ಮಹಿಳೆಯರಲ್ಲಿ ಅನೇಕ ರೋಗಗಳು ಕಂಡುಬರುತ್ತದೆ.
ಮಹಿಳೆಯರಲ್ಲಿ ಹಾರ್ಮೋನುಗಳ ಅಸಮತೋಲನದಿಂದಾಗಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS) ಸಮಸ್ಯೆ ಉಂಟಾಗುತ್ತದೆ. ಅಂಕಿಅಂಶಗಳ ಪ್ರಕಾರ, ಪ್ರತಿ 5 ಮಹಿಳೆಯರಲ್ಲಿ ಒಬ್ಬರು ಪಿಸಿಓಎಸ್ನಿಂದ ಬಳಲುತ್ತಿದ್ದಾರೆ. ಇದನ್ನು ಪಿಸಿಓಡಿ ಎಂದೂ ಕರೆಯುತ್ತಾರೆ. ಈ ಕಾಯಿಲೆಯಿಂದಾಗಿ, ಮಹಿಳೆಯರಲ್ಲಿ ಅನೇಕ ರೋಗಗಳು ಕಂಡುಬರುತ್ತದೆ. ಈ ಕಾರಣದಿಂದಾಗಿ ಮಹಿಳೆಯರ ಮುಖದ ಮೇಲೆ ಕೂದಲು ಬೆಳೆಯುವುದು ಮತ್ತು ದೇಹದ ಭಾಗಗಳು ಅಥವಾ ತಲೆಯ ಮೇಲೆ ಕೂದಲು ಉದುರುವುದು, ಮಧುಮೇಹ ಮತ್ತು ಹೃದ್ರೋಗಗಳು ಕಂಡುಬರುತ್ತದೆ.
15 ರಿಂದ 44 ವರ್ಷ ವಯಸ್ಸಿನ ಮಹಿಳೆಯರಲ್ಲಿ ಪಿಸಿಓಎಸ್ ಅತ್ಯಂತ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕ ಮಹಿಳೆಯರಿಗೆ ಪಿಸಿಓಎಸ್ ಸಮಸ್ಯೆ ಇದೆ. ಆದರೆ ಈ ಬಗ್ಗೆ ಮಾಹಿತಿಯ ಕೊರತೆ ಇದೆ. ಹೀಗಾಗಿ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ತ್ರೀರೋಗತಜ್ಞೆ ಡಾ. ನೂಪುರ್ ಅನೇಕ ಸಲಹೆಗಳನ್ನು ನೀಡಿದ್ದಾರೆ.
ಪಿಸಿಓಎಸ್ ಎಂದರೇನು ಮತ್ತು ಅದು ಹೇಗೆ ಸಂಭವಿಸುತ್ತದೆ? ಹಾರ್ಮೋನುಗಳ ಅಸಮತೋಲನದಿಂದಾಗಿ ಪಿಸಿಓಎಸ್ ಉಂಟಾಗುತ್ತದೆ. ಇದು ಜೀವನಶೈಲಿಯಲ್ಲಿನ ಬದಲಾವಣೆಯಿಂದಾಗಿ ಪ್ರಾರಂಭವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಇದನ್ನು ಮೆಟಾಬಾಲಿಕ್ ಸಿಂಡ್ರೋಮ್ ಎಂದೂ ಕರೆಯುತ್ತಾರೆ. ಅಂದರೆ ಜೀವನಶೈಲಿಯಿಂದಾಗಿ ಮಹಿಳೆಯರಲ್ಲಿ ಹಾರ್ಮೋನುಗಳ ಅಸಮತೋಲನದ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಮತ್ತು ಈ ಸಮಸ್ಯೆಗಳನ್ನು ಪಿಸಿಓಎಸ್ ಎಂದು ಕರೆಯಲಾಗುತ್ತದೆ. ಅಂಡಾಶಯದಲ್ಲಿ ಅನೇಕ ಸಣ್ಣ ಚೀಲಗಳು ರೂಪುಗೊಳ್ಳುವುದರಿಂದ ಇದನ್ನು ಪಾಲಿಸಿಸ್ಟಿಕ್ ಎಂದು ಕರೆಯಲಾಗುತ್ತದೆ. ಹಾರ್ಮೋನುಗಳ ಅಸಮತೋಲನವು ಎಲ್ಲಾ ವಯಸ್ಸಿನ ಮಹಿಳೆಯರ ಮೇಲೆ ವಿಭಿನ್ನವಾಗಿ ಪರಿಣಾಮ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಸಹ ಮುಖ್ಯವಾಗಿದೆ.
ಹದಿಹರೆಯದ ಹುಡುಗಿಯರ ಬಗ್ಗೆ ಮಾತನಾಡುವುದಾದರೆ, ಅವರಲ್ಲಿ ಮೊಡವೆಗಳು, ಬೊಜ್ಜು ಹೆಚ್ಚಾಗಲು ಆರಂಭವಾಗುತ್ತದೆ ಮತ್ತು ಇದರ ಹೊರತಾಗಿ ಪ್ರತಿ ತಿಂಗಳು ಮುಟ್ಟಾಗುವುದು ವಿಳಂಬವಾಗುತ್ತದೆ ಅಥವಾ ಅನಿಯಮಿತ ಮತ್ತು ತುಂಬಾ ನೋವಿನಿಂದ ಈ ಸಮಯ ಕೂಡಿರುತ್ತದೆ. ಹದಿಹರೆಯದ ಹುಡುಗಿಯರಲ್ಲಿ ಈ ಎಲ್ಲಾ ಪಿಸಿಓಎಸ್ ಲಕ್ಷಣಗಳು ಕಂಡುಬರುತ್ತದೆ.
ಪಿಸಿಓಎಸ್ ಕ್ಯಾನ್ಸರ್‌ಗೆ ಕಾರಣವಾಗುತ್ತದೆಯೇ? ಸಕಾಲದಲ್ಲಿ ಪಿಸಿಓಎಸ್ ಗುಣಪಡಿಸದಿದ್ದರೆ ಅದು ನಂತರದ ದಿನಗಳಲ್ಲಿ ಕ್ಯಾನ್ಸರ್ ಆಗಿ ಬದಲಾಗುತ್ತದೆ. ಅತಿಯಾದ ರಕ್ತಸ್ರಾವದಿಂದಾಗಿ ಗರ್ಭಾಶಯದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ ಮತ್ತು ಕೆಲವು ಸಂದರ್ಭಗಳಲ್ಲಿ ಅಂತಹ ಮಹಿಳೆಯರಿಗೆ ಗರ್ಭಾಶಯದ ಕ್ಯಾನ್ಸರ್ ಬರುವ ಅಪಾಯವಿದೆ.
ಪಿಸಿಓಎಸ್ ಹೇಗೆ ಬಂಜೆತನಕ್ಕೆ ಪ್ರಮುಖ ಕಾರಣವಾಗಿದೆ? ಭಾರತ ಮತ್ತು ಪ್ರಪಂಚದಾದ್ಯಂತ ಬಂಜೆತನದ ಸಮಸ್ಯೆ ಹೆಚ್ಚುತ್ತಿರುವುದನ್ನು ನಾವು ನೋಡಿದ್ದೇವೆ. ಪಿಸಿಓಎಸ್ನಿಂದ ಗರ್ಭಧಾರಣೆ ವಿಳಂಬವಾಗುತ್ತದೆ. ಅಲ್ಲದೇ ಅಂಡಾಶಯದಲ್ಲಿ ಮೊಟ್ಟೆಗಳನ್ನು ಉತ್ಪಾದಿಸುವ ಸಾಮರ್ಥ್ಯವು ಪ್ರತಿ ತಿಂಗಳು ಕಡಿಮೆಯಾಗುತ್ತದೆ ಅಥವಾ ಅವುಗಳ ಗುಣಮಟ್ಟವು ಕಡಿಮೆಯಿರುತ್ತದೆ. ಅಂತಹ ಮಹಿಳೆಯರಲ್ಲಿ ಬೊಜ್ಜು ಹೆಚ್ಚಾಗುತ್ತದೆ ಮತ್ತು ಮುಟ್ಟಿನಲ್ಲಿ ಸಮಸ್ಯೆಯಾಗುತ್ತದೆ. ನಂತರ ಇದು ಬಂಜೆತನಕ್ಕೆ ಕಾರಣವಾಗುತ್ತದೆ.
ಪಿಸಿಓಎಸ್ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಗರ್ಭಿಣಿಯಾಗುವ ಅವಕಾಶ ಎಷ್ಟು? ಮಹಿಳೆಗೆ ಪಾಲಿಸಿಸ್ಟಿಕ್ ಅಂಡಾಶಯದ ಸಮಸ್ಯೆ ಇದ್ದರೆ, ಆಕೆ ಗರ್ಭಿಣಿಯಾಗಲು ಸಾಧ್ಯವಿಲ್ಲ. ಪಿಸಿಓಎಸ್ ಇರುವ ಮಹಿಳೆಯರು ತಮ್ಮ ಜೀವನಶೈಲಿಯನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು. ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು, ವ್ಯಾಯಾಮ ಮಾಡಬೇಕು, ಮದ್ಯಪಾನ ಅಥವಾ ಧೂಮಪಾನ ಮಾಡಬಾರದು, ಒತ್ತಡಕ್ಕೆ ಒಳಗಾಗಬಾರದು.
ಪಿಸಿಓಎಸ್‌ಗೆ ಹೇಗೆ ಚಿಕಿತ್ಸೆ ನೀಡಲಾಗುತ್ತದೆ? ಜೀವನಶೈಲಿಯನ್ನು ನೋಡಿಕೊಳ್ಳುವುದು ಅಗತ್ಯವಾಗಿದೆ. ಜೀವನಶೈಲಿಯನ್ನು ಸರಿಪಡಿಸಿದ ನಂತರವೂ ಸಮಸ್ಯೆ ಮುಂದುವರಿದರೆ, ಅದರ ಚಿಕಿತ್ಸೆಯು ಅವರು ಯಾವ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಪ್ರತಿ ಮಹಿಳೆಯ ಸ್ಥಿತಿಯನ್ನು ಅವಲಂಬಿಸಿ, ಅವರಿಗೆ ಹೇಗೆ ಚಿಕಿತ್ಸೆ ನೀಡಬೇಕೆಂಬುದನ್ನು ನಿಗದಿ ಮಾಡಲಾಗುತ್ತದೆ.
ಇದನ್ನೂ ಓದಿ: Green Chili Benefits: ಹಸಿರು ಮೆಣಸಿನಕಾಯಿಯ ಆರೋಗ್ಯಕರ ಗುಣಗಳ ಬಗ್ಗೆ ನೀವು ತಿಳಿದರೆ ಒಂದು ಮೆಣಸನ್ನು ಬಿಡುವುದಿಲ್ಲ
Black Pepper Benefits: ನಾಲ್ಕು ಕಾಳು ಕರಿಮೆಣಸನ್ನು ಸೇವಿಸುವುದರಿಂದ ಆರೋಗ್ಯದಲ್ಲಿ ಅನೇಕ ಬದಲಾವಣೆಗಳಾಗುತ್ತದೆ