Green Chili Benefits: ಹಸಿರು ಮೆಣಸಿನಕಾಯಿಯ ಆರೋಗ್ಯಕರ ಗುಣಗಳ ಬಗ್ಗೆ ನೀವು ತಿಳಿದರೆ ಒಂದು ಮೆಣಸನ್ನು ಬಿಡುವುದಿಲ್ಲ

Health benefits: ಹಸಿರು ಮೆಣಸಿನಕಾಯಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಸಿರು ಮೆಣಸಿನಕಾಯಿ ದೇಹದ ಅನೇಕ ರೋಗಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಹಸಿರು ಮೆಣಸಿನಕಾಯಿಯ ಪ್ರಯೋಜನಗಳ ಬಗ್ಗೆ ತಿಳಿಯುವುದು ಸೂಕ್ತ.

Green Chili Benefits: ಹಸಿರು ಮೆಣಸಿನಕಾಯಿಯ ಆರೋಗ್ಯಕರ ಗುಣಗಳ ಬಗ್ಗೆ ನೀವು ತಿಳಿದರೆ ಒಂದು ಮೆಣಸನ್ನು ಬಿಡುವುದಿಲ್ಲ
ಹಸಿರು ಮೆಣಸಿನಕಾಯಿಗಳು
Follow us
TV9 Web
| Updated By: preethi shettigar

Updated on: Jul 31, 2021 | 9:04 AM

ಹಸಿರು ಮೆಣಸಿನಕಾಯಿಗಳು ನಾವು ಮಾಡುವ ಅಡುಗೆಗೆ ಹೆಚ್ಚಿನ ಪರಿಮಳವನ್ನು ನೀಡುತ್ತದೆ ಎಂಬ ಮಾತಿದೆ. ಹೆಚ್ಚಿನ ಮನೆಗಳಲ್ಲಿ ಮಾಡುವ ಪ್ರತಿ ಅಡುಗೆಗೆ ಹಸಿರು ಮೆಣಸಿನಕಾಯಿ ಮತ್ತು ಒಣ ಮೆಣಸಿನಕಾಯಿ ಬಳಸುತ್ತಾರೆ. ಆದರೆ ಹಸಿರು ಮೆಣಸಿನಕಾಯಿ ಬಳಕೆ ಹೆಚ್ಚು. ಅದಾಗ್ಯೂ ಕೆಲವು ಜನರು ಇವುಗಳನ್ನು ತಿನ್ನಲು ಆಸಕ್ತಿ ಹೊಂದವುದಿಲ್ಲ. ಆದರೆ ನೆನಪಿಡಿ ಹಸಿರು ಮೆಣಸಿನಕಾಯಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಸಿರು ಮೆಣಸಿನಕಾಯಿ ದೇಹದ ಅನೇಕ ರೋಗಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಹಸಿರು ಮೆಣಸಿನಕಾಯಿಯ ಪ್ರಯೋಜನಗಳ ಬಗ್ಗೆ ತಿಳಿಯುವುದು ಸೂಕ್ತ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಸಿರು ಮೆಣಸಿನಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಕೊವಿಡ್ ಸೋಂಕು ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ ನಾವು ಮನೆಯಲ್ಲಿಯೇ ಒಂದಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಬೇಕು. ಹೀಗಾಗಿ ಹಸಿರು ಮೆಣಸಿನಕಾಯಿಯನ್ನು ನಿಯಮಿತವಾಗಿ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.

ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಹೃದ್ರೋಗದ ಅಪಾಯವನ್ನು ಹಸಿರು ಮೆಣಸಿನಕಾಯಿ ಕಡಿಮೆ ಮಾಡುತ್ತದೆ. ಇದು ಕಡಿಮೆ ಕ್ಯಾಲೋರಿ ಹೊಂದಿದೆ. ದೈನಂದಿನ ಆಹಾರದಲ್ಲಿ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಚಯಾಪಚಯ ಕ್ರಿಯೆಯು ಆರೋಗ್ಯಕರವಾಗಿರುತ್ತದೆ. ಅಲ್ಲದೇ ಹಸಿರು ಮೆಣಸಿನಕಾಯಿ ಉತ್ಕರ್ಷಣ ನಿರೋಧಕಗಳಿಂದ ಕೂಡಿದೆ.

ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಹಸಿರು ಮೆಣಸಿನಕಾಯಿ ತಿನ್ನುವುದರಿಂದ ಪ್ರಾಸ್ಟೇಟ್ ಸಂಬಂಧಿತ ರೋಗಗಳ ಸಾಧ್ಯತೆ ಕಡಿಮೆಯಾಗುತ್ತದೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರ ಜತೆಗೆ, ಇದರಲ್ಲಿರುವ ಕ್ಯಾಪ್ಸೈಸಿನ್ ರಕ್ತ ಪರಿಚಲನೆಯನ್ನು ಸಮತೋಲನದಲ್ಲಿರಿಸುತ್ತದೆ. ಹಸಿರು ಮೆಣಸಿನಕಾಯಿ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಹೃದಯ ಸಂಬಂಧಿತ ಇತರ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ.

ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಹಸಿರು ಮೆಣಸಿನಲ್ಲಿ ಕ್ಯಾಪ್ಸೈಸಿನ್ ಎಂಬ ಅಂಶವಿದೆ. ಇದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಇದು ಮೆದುಳಿನ ಒಂದು ಭಾಗವಾದ ಹೈಪೋಥಾಲಮಸ್‌ಗೆ ಪರಿಣಾಮ ಬೀರಿದ ತಕ್ಷಣ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಈ ಕಾರಣಕ್ಕಾಗಿಯೇ ಭಾರತದ ಅತ್ಯಂತ ಉಷ್ಣಯುತ ಸ್ಥಳಗಳಲ್ಲಿಯೂ ಹಸಿರು ಮೆಣಸಿನಕಾಯಿಗಳನ್ನು ಹೇರಳವಾಗಿ ತಿನ್ನುತ್ತಾರೆ.

ಸೈನಸ್ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ ಹಸಿರು ಮೆಣಸಿನಕಾಯಿ ಶೀತ ಮತ್ತು ಸೈನಸ್ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ನಿಮಗೆ ಶೀತ ಬಂದಾಗ ಹಸಿರು ಮೆಣಸಿನಕಾಯಿಯ ಸೊಪ್ಪನ್ನು ಸೇವಿಸಿ, ಇದು ಶೀತವನ್ನು ನಿವಾರಿಸುತ್ತದೆ. ಸೊಪ್ಪನ್ನು ತಿನ್ನುವ ಮೂಲಕ ದೇಹದಲ್ಲಿ ಉತ್ಪತ್ತಿಯಾಗುವ ಶಾಖವು ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ.

ಹುಣ್ಣು ನಿವಾರಕ ಬಾಯಿಯಲ್ಲಿ ಹುಣ್ಣು ಇರುವವರು ಮಸಾಲೆಯುಕ್ತ ಆಹಾರವನ್ನು ಸೇವಿಸುವುದು ಕಷ್ಟವಾದರೂ, ಹಸಿರು ಮೆಣಸಿನಕಾಯಿ ಸೇವನೆಯಿಂದ ಗುಳ್ಳೆಗಳನ್ನು ಬೇಗನೆ ಗುಣಪಡಿಸಬಹುದು. ಇದರಲ್ಲಿ ವಿಟಮಿನ್ ಸಿ ಮತ್ತು ಬೀಟಾ ಕ್ಯಾರೋಟಿನ್ ಸಮೃದ್ಧವಾಗಿದ್ದು, ಕಣ್ಣು ಮತ್ತು ಚರ್ಮಕ್ಕೆ ತುಂಬಾ ಒಳ್ಳೆಯದು. ಆದರೆ ನೆನಪಿಡಿ ಹಸಿರು ಮೆಣಸಿನಕಾಯಿ ಅನ್ನು ತಂಪಾದ ಸ್ಥಳದಲ್ಲಿ ಇರಿಸಿ. ಗಾಳಿ ಮತ್ತು ಬೆಳಕಿಗೆ ಇದು ಒಡ್ಡಿಕೊಳ್ಳುವುದರಿಂದ ಅದರ ವಿಟಮಿನ್ ನಾಶವಾಗುತ್ತದೆ.

ಮಧುಮೇಹ ನಿವಾರಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಇದು ಸಹಾಯ ಮಾಡುತ್ತದೆ. ಮಧುಮೇಹಿಗಳು ಹಸಿರು ಮೆಣಸಿನಕಾಯಿ ಸೊಪ್ಪು ತಿನ್ನುವುದು ಸೂಕ್ತ. ಇವುಗಳು ಸಾಕಷ್ಟು ಕಬ್ಬಿಣವನ್ನು ಒದಗಿಸುತ್ತವೆ. ಇದರ ಜತೆಯಲ್ಲಿ, ಹಸಿರು ಎಲೆಗಳ ತರಕಾರಿಗಳನ್ನು ತಿನ್ನುವುದು ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ:

ಮನೆಯೊಳಗೆ ಗಿಡ ನೆಡುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ಗಮನಹರಿಸಿ

Health Tips: ವಾರಕ್ಕೆ ಮೂರಕ್ಕಿಂತ ಹೆಚ್ಚು ಬಾರಿ ಚಿಕನ್​ ಸೇವಿಸುವ ಅಭ್ಯಾಸ ಇದೆಯೇ? ಅಡ್ಡಪರಿಣಾಮಗಳ ಬಗ್ಗೆ ಎಚ್ಚರ ವಹಿಸಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ