AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯೊಳಗೆ ಗಿಡ ನೆಡುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ಗಮನಹರಿಸಿ

ಒತ್ತಡವನ್ನು ಕಡಿಮೆ ಮಾಡಲು ಆಹಾರದ ಕ್ರಮದಲ್ಲಿನ ಬದಲಾವಣೆ ಮಾತ್ರ ಅಲ್ಲ, ಮನಸ್ಸಿನ ನೆಮ್ಮದಿಗಾಗಿ ಇನ್ನಿತರ ಕ್ರಮಗಳನ್ನು ಅನುಸರಿಸುವುದು ಸೂಕ್ತ. ಒತ್ತಡವನ್ನು ಕಡಿಮೆ ಮಾಡಲು ಸುತ್ತಲಿನ ವಾತಾವರಣವೂ ಮುಖ್ಯ ಪಾತ್ರ ವಹಿಸುತ್ತದೆ.

ಮನೆಯೊಳಗೆ ಗಿಡ ನೆಡುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ಗಮನಹರಿಸಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 29, 2021 | 7:27 AM

Share

ಇತ್ತಿಚೇಗೆ ಕೊರೊನಾ, ಕೆಲಸದ ಒತ್ತಡ, ಇದರ ನಡುವೆ ಕುಟುಂಬ ಸಮಸ್ಯೆಗಳೊಂದಿಗೆ ನಿರಂತರವಾಗಿ ಹೋರಾಟ ನಡೆಸುವುದು ಹೀಗೆ ಹಲವು ಗೊಂದಲಗಳು ಮಾನಸಿಕ ನೆಮ್ಮದಿಯನ್ನು ಕಸಿದುಕೊಳ್ಳುತ್ತಿದೆ. ಇದು ಮೆದುಳಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಕಾರಣಕ್ಕೆ ಇತ್ತೀಚೆಗೆ ಅನೇಕ ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಒತ್ತಡವನ್ನು(Stress) ಕಡಿಮೆ ಮಾಡಲು ಆಹಾರದ ಕ್ರಮದಲ್ಲಿನ ಬದಲಾವಣೆ ಮಾತ್ರ ಅಲ್ಲ, ಮನಸ್ಸಿನ ನೆಮ್ಮದಿಗಾಗಿ ಇನ್ನಿತರ ಕ್ರಮಗಳನ್ನು ಅನುಸರಿಸುವುದು ಸೂಕ್ತ. ಒತ್ತಡವನ್ನು ಕಡಿಮೆ ಮಾಡಲು ಸುತ್ತಲಿನ ವಾತಾವರಣವೂ ಮುಖ್ಯ ಪಾತ್ರ ವಹಿಸುತ್ತದೆ. ಅನಿಯಂತ್ರಿತ ಆಲೋಚನೆಗಳಿಂದ ದೂರವಿರಲು ಶಾಂತಿಯುತ ವಾತಾವರಣ ಇರಬೇಕು. ಖಿನ್ನತೆಯನ್ನು ಹೋಗಲಾಡಿಸಲು, ಪಕ್ಷಿಗಳ ಮತ್ತು ಗಾಳಿಯ ಇಂಪಾದ ಶಬ್ದವನ್ನು ಕೇಳುವ ಸ್ಥಳಗಳಿಗೆ ಹೋಗಬೇಕು. ಆದಾಗ್ಯೂ, ಹಾಗೆ ಹೋಗುವುದು ಹೆಚ್ಚಿನ ಜನರಿಗೆ ಸಾಧ್ಯವಾಗದಿರಬಹುದು. ಹೀಗಾಗಿ ಮನೆಯಲ್ಲಿಯೇ ಅಂತಹ ವಾತಾವರಣ ಸೃಷ್ಟಿಸಬೇಕು. ನಿಯಮಿತವಾದ ಜಾಗದಲ್ಲಿನ ಮನೆಯಲ್ಲಿ ಇದು ಹೇಗೆ ಸದ್ಯ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ತುಳಸಿ ನಮ್ಮ ಭಾರತೀಯ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ವಿಶೇಷ ಸ್ಥಾನವಿದೆ. ತುಳಸಿಯನ್ನು ದೇವತೆಯಾಗಿ ಪೂಜಿಸಲಾಗುತ್ತದೆ. ತುಳಸಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ತುಳಸಿ ಗಿಡವನ್ನು ಮನೆಯಲ್ಲಿ ಇಡುವುದರಿಂದ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುವುದಲ್ಲದೆ ಒತ್ತಡ ಕಡಿಮೆಯಾಗುತ್ತದೆ. ಈ ಗಿಡವನ್ನು ಬೆಳಿಗ್ಗೆ ನೋಡುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಪುಟ್ಟ ಪಾಟ್​ನಲ್ಲಿ ಈ ಗಿಡ ಹಾಕಬಹುದು.

ಗುಲಾಬಿ ಗಿಡ ಮನೆಯಲ್ಲಿ ಗುಲಾಬಿ ಗಿಡವನ್ನು ನೆಡುವುದರಿಂದ ಅನೇಕ ಪ್ರಯೋಜನಗಳಿವೆ. ಗುಲಾಬಿಗಳು ಶಾಂತಿ, ಪ್ರೀತಿ ಮತ್ತು ಸಕಾರಾತ್ಮಕ ವಾತಾವರಣಕ್ಕೆ ಹೆಚ್ಚು ಒತ್ತು ನೀಡುತ್ತದೆ. ಈ ಸಸ್ಯವು ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬಣ್ಣ ಬಣ್ಣದ ಗುಲಾಬಿ ಹೂವುಗಳನ್ನು ನೋಡುವುದರಿಂದ ಕಣ್ಣಿಗೂ ತಪ್ಪು, ಮನಸ್ಸಿಗೂ ನೆಮ್ಮದಿ.

ಮನಿ ಪ್ಲಾಂಟ್ ಎಲ್ಲಿಯಾದರೂ ಸುಲಭವಾಗಿ ಬೆಳೆಯುವ ಸಸ್ಯವೆಂದರೆ ಅದು ಮನಿ ಪ್ಲಾಂಟ್​. ಈ ಸಸ್ಯವನ್ನು ಮಲಗುವ ಕೋಣೆ, ಬಾಲ್ಕನಿ, ಸ್ನಾನಗೃಹ, ಡ್ರಾಯಿಂಗ್ ರೂಮ್ ಅಥವಾ ತೋಟದಲ್ಲಿ ಸುಲಭವಾಗಿ ಬೆಳೆಸಬಹುದು. ಕೆಲವರು ಈ ಸಸ್ಯಗಳನ್ನು ಅಡುಗೆಮನೆಯಲ್ಲಿ ಬೆಳೆಯುತ್ತಾರೆ. ಇದು ಅಡಿಗೆ ತುಂಬಾ ರುಚಿಯಾಗುವಂತೆ ಮಾಡುತ್ತದೆ ಎಂಬ ನಂಬಿಕೆ ಇದೆ. ಈ ಗಿಡ ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತವೆ. ಈ ಗಿಡಕ್ಕೆ ಹೆಚ್ಚಿನ ಕಾಳಜಿ ಬೇಕು.

ಮಲ್ಲಿಗೆ ಮಲ್ಲಿಗೆ ಹೂವುಗಳ ಪರಿಮಳ ಬಹಳ ಆಕರ್ಷಕವಾಗಿದೆ. ಮಲ್ಲಿಗೆ ಗಿಡವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ವಿಶ್ವದ ಅನೇಕ ದೇಶಗಳಲ್ಲಿ ಈ ಗಿಡವನ್ನು ಪೂಜಿಸಲಾಗುತ್ತದೆ. ಮಲ್ಲಿಗೆ ಹೂವನ್ನು ವಿಶ್ವಾಸ, ಪ್ರೀತಿ ಮತ್ತು ಸಂಬಂಧವನ್ನು ಬಲಪಡಿಸುವ ಸಂಕೇತವಾಗಿ ಪರಿಗಣಿಸಲಾಗಿದೆ. ಮೇಣದಬತ್ತಿಗಳಿಗೆ ಸುಗಂಧವನ್ನು ಸೇರಿಸಲು ಮಲ್ಲಿಗೆ ಹೂಗಳನ್ನು ಬಳಸಲಾಗುತ್ತದೆ. ಈ ಸಸ್ಯಗಳನ್ನು ನೆಡುವುದರಿಂದ ರಾತ್ರಿಯಲ್ಲಿ ಉತ್ತಮ ಕನಸುಗಳು ಬರುತ್ತವೆ ಮತ್ತು ಒತ್ತಡ ದೂರವಾಗುತ್ತದೆ.

ಇದನ್ನೂ ಓದಿ: Kadamba Tree: ಕದಂಬ ಮರದ ವಿಶೇಷತೆ ಮತ್ತು ಆರೋಗ್ಯಕರ ಗುಣಗಳ ಬಗ್ಗೆ ತಿಳಿಯಲು, ಒಂದು ಗಿಡ ನೆಟ್ಟು ನೋಡಿ

Health Tips: ಅಂಗೈ ಮೇಲೆ ಅರಳುವ ಮೆಹಂದಿ ಅಂದಕ್ಕಷ್ಟೇ ಸೀಮಿತ ಅಲ್ಲ, ಇದರ ಆರೋಗ್ಯಕರ ಗುಣಗಳ ಬಗ್ಗೆ ತಿಳಿಯಿರಿ

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?