AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಅಂಗೈ ಮೇಲೆ ಅರಳುವ ಮೆಹಂದಿ ಅಂದಕ್ಕಷ್ಟೇ ಸೀಮಿತ ಅಲ್ಲ, ಇದರ ಆರೋಗ್ಯಕರ ಗುಣಗಳ ಬಗ್ಗೆ ತಿಳಿಯಿರಿ

ಕೇವಲ ಮೆಹಂದಿ ಹಚ್ಚಿಕೊಳ್ಳಬೇಕು ಎಂದೇನು ಇಲ್ಲ. ಬದಲಾಗಿ ಮದರಂಗಿ ಎಲೆಗಳನ್ನು ತಂದು ಚೆನ್ನಾಗಿ ತೊಳೆದು ಅವುಗಳನ್ನು ಹಾಗೆಯೇ ಕೈಗಳ ಮೇಲೆ ಇಟ್ಟುಕೊಳ್ಳಬಹುದು ಅಥವಾ ಕಷಾಯ ರೂಪದಲ್ಲಿ ತೆಗೆದುಕೊಳ್ಳಬಹುದು.

Health Tips: ಅಂಗೈ ಮೇಲೆ ಅರಳುವ ಮೆಹಂದಿ ಅಂದಕ್ಕಷ್ಟೇ ಸೀಮಿತ ಅಲ್ಲ, ಇದರ ಆರೋಗ್ಯಕರ ಗುಣಗಳ ಬಗ್ಗೆ ತಿಳಿಯಿರಿ
ಪ್ರಾತಿನಿಧಿಕ ಚಿತ್ರ
TV9 Web
| Updated By: Skanda|

Updated on: Jul 27, 2021 | 7:28 AM

Share

ಕೈಗೆ ಮೆಹಂದಿ ಹಚ್ಚುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಆಚರಣೆ. ಅದರಲ್ಲೂ ಮದುವೆ ಸಮಾರಂಭದಲ್ಲಿ ವಧು-ವರರು ಕೈ ಮತ್ತು ಕಾಲಿಗೆ ಮೆಹಂದಿ ಹಚ್ಚುತ್ತಾರೆ. ಮೆಹಂದಿ, ಗೋರಂಟಿ, ಮದರಂಗಿ ಎಂದು ಇದನ್ನು ಕರೆಯಲಾಗುತ್ತದೆ. ಕೈಗಳನ್ನು ಸುಂದರವಾಗಿರಿಸಿಕೊಳ್ಳುವುದಕ್ಕೆ ಮಾತ್ರ ಮೆಹಂದಿ ಹಚ್ಚುವುದಿಲ್ಲ, ಬದಲಾಗಿ ಮೆಹಂದಿ ಹಚ್ಚುವುದರಿಂದ ಅನೇಕ ಆರೋಗ್ಯಕರ ಗುಣಗಳಿವೆ. ವೈಜ್ಞಾನಿಕವಾಗಿ, ಮೆಹಂದಿ ಗರ್ಭಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕುತ್ತದೆ. ಅಂಗೈಯ ಮಧ್ಯದಲ್ಲಿ ಗರ್ಭಾಶಯಕ್ಕೆ ರಕ್ತವನ್ನು ಸಾಗಿಸುವ ಮುಖ್ಯ ರಕ್ತನಾಳಗಳಿವೆ. ಹೀಗಾಗಿ ಮೆಹಂದಿ ಹಾಕಿಕೊಳ್ಳುವುದರಿಂದ ಹೆರಿಗೆಯಿಂದ ಉಂಟಾಗುವ ನೋವು ಕಡಿಮೆಯಾಗುತ್ತದೆ. ಅಲ್ಲದೆ ಮೆಹಂದಿ ಹಾರ್ಮೋನುಗಳು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

ಆಷಾಢದಲ್ಲಿ ಹಾಕುವ ಮೆಹಂದಿಯ ವಿಶೇಷ ಏನು? ವಾಸ್ತವವಾಗಿ ಬೇರೆ ದಿನಗಳಲ್ಲಿ ಹಾಕುವ ಮೆಹಂದಿಗಿಂತ ಆಷಾಢದಲ್ಲಿ ಕೈಗೆ ಹಾಕಿಕೊಳ್ಳುವ ಮೆಹಂದಿ ಹೆಚ್ಚು ಆರೋಗ್ಯಕರ ಗುಣವನ್ನು ಹೊಂದಿದೆ. ಮಳೆಗಾಲದಲ್ಲಿ ಕಾಲಿನ ಸೆಳೆತ ಮತ್ತು ಚರ್ಮದ ಕಾಯಿಲೆಗಳು ಹೆಚ್ಚಾಗಿರುತ್ತದೆ. ಮೆಹಂದಿ ಈ ಸಮಸ್ಯೆಯನ್ನು ದೂರ ಮಾಡುತ್ತದೆ. ಅಲ್ಲದೆ ಮೆಹಂದಿ ಸೋಂಕನ್ನು ಕಡಿಮೆ ಮಾಡುತ್ತದೆ ಮತ್ತು ದೇಹಕ್ಕೆ ಸಂಬಂಧಿಸಿದ ಇನ್ನಿತರ ಕಾಯಿಲೆಗಳನ್ನು ನಿರ್ವಹಣೆ ಮಾಡುತ್ತದೆ.

ಮದರಂಗಿಯ ಉಪಯೋಗಗಳು ಕೇವಲ ಮೆಹಂದಿ ಹಚ್ಚಿಕೊಳ್ಳಬೇಕು ಎಂದೇನು ಇಲ್ಲ. ಬದಲಾಗಿ ಮದರಂಗಿ ಎಲೆಗಳನ್ನು ತಂದು ಚೆನ್ನಾಗಿ ತೊಳೆದು ಅವುಗಳನ್ನು ಹಾಗೆಯೇ ಕೈಗಳ ಮೇಲೆ ಇಟ್ಟುಕೊಳ್ಳಬಹುದು ಅಥವಾ ಕಷಾಯ ರೂಪದಲ್ಲಿ ತೆಗೆದುಕೊಳ್ಳಬಹುದು. * ಮದರಂಗಿ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ.

* ಮುಪ್ಪಿನಲ್ಲಿ ಕಾಣಿಸಿಕೊಳ್ಳುವ ಅನೇಕ ಸಮಸ್ಯೆಗಳನ್ನು ಇದು ದೂರ ಮಾಡುತ್ತದೆ.

* ಮದರಂಗಿಯು ದೃಷ್ಟಿಗೆ ಸಂಬಂಧಿಸಿದ ಅನೇಕ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

* ಕೂದಲನ್ನು ಸುಂದರವಾಗಿಸುವಲ್ಲಿಯೂ ಮೆಹಂದಿ ಪ್ರಮುಖ ಪಾತ್ರವಹಿಸುತ್ತದೆ.

* ಮೂಲವ್ಯಾಧಿ ಮತ್ತು ಕಾಮಾಲೆ ಸಮಸ್ಯೆ ಇರುವವರು ಮದರಂಗಿ ಎಲೆಯನ್ನು ಕಷಾಯ ರೂಪದಲ್ಲಿ ತೆಗೆದುಕೊಳ್ಳುವುದು ಉತ್ತಮ.

* ಮದರಂಗಿ ಎಲೆಗಳನ್ನು ಮಲಗುವ ದಿಮ್ಮಿನ ಮೇಲೆ ಹಾಕಿ ಅದರ ಮೇಲೆ ಒಂದು ಬಟ್ಟೆ ಹಾಸಿ, ಮಲಗುವುದರಿಂದ ಸುಖ ನಿದ್ರೆ ದೊರೆಯುತ್ತದೆ.

ಇದನ್ನೂ ಓದಿ: Healthy Heart: ಹೃದಯ ಬಡಿತದ ಮೇಲೆ ನಮ್ಮ ಆರೋಗ್ಯ ನಿಂತಿದೆ; ಈ ರೋಗ ಲಕ್ಷಣಗಳ ಬಗ್ಗೆ ಸದಾ ಎಚ್ಚರ ವಹಿಸಿ

Fasting Benefits: ಉಪವಾಸ ಹೇಗೆ ಮಾಡುವುದು? ಇದರ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ