Fasting Benefits: ಉಪವಾಸ ಹೇಗೆ ಮಾಡುವುದು? ಇದರ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ

ಉಪವಾಸದಿಂದ ಜೀರ್ಣಕ್ರಿಯೆಯ ಸಮಸ್ಯೆ ದೂರವಾಗುತ್ತದೆ. ಉಪವಾಸನವು ರೋಗಾಣುಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಮೂತ್ರಪಿಂಡದಲ್ಲಿನ ಕಲ್ಲುಗಳನ್ನು ಇದು ಹೊರಹಾಕುತ್ತದೆ.

Fasting Benefits: ಉಪವಾಸ ಹೇಗೆ ಮಾಡುವುದು? ಇದರ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ
ಸಾಂಕೇತಿಕ ಚಿತ್ರ
Follow us
TV9 Web
| Updated By: preethi shettigar

Updated on: Jul 26, 2021 | 8:04 AM

ದೇವರ ಹೆಸರಿನಲ್ಲಿ ಊಟ ಬಿಡುವುದು ಅಥವಾ ಉಪವಾಸ ಮಾಡುವುದು ಹಿಂದಿನಿಂದ ನಡೆದುಕೊಂಡು ಬಂದ ಆಚರಣೆ ಮತ್ತು ಸಂಪ್ರದಾಯ. ಆದರೆ ಹಿಂದೆ ಉಪವಾಸ ಪ್ರಾರಂಭಿಸುವುದು ಎಂದರೆ ಒಂದು ದಿನ ಹೊಟ್ಟೆಯನ್ನು ಖಾಲಿ ಇಡುವುದು. ಕೇವಲ ಹಾಲು, ತೆಂಗಿನ ನೀರು ಮತ್ತು ಇತರ ಜ್ಯೂಸ್ ತೆಗೆದುಕೊಳ್ಳುವುದಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಉಪವಾಸ ಎಂದರೆ ಬೆಳಿಗ್ಗೆ ಟಿಫಿನ್, ಮಧ್ಯಾಹ್ನ ಉಪಹಾರ ಮತ್ತು ಸಂಜೆ ಊಟ ಎಂಬಂತೆ ಆಗಿದೆ. ಆದರೆ ಈಗಲೂ ಉಪವಾಸ ಮಾಡುವವರು ನಮ್ಮ ನಡುವೆ ಇದ್ದಾರೆ. ನಮ್ಮ ಹಿರಿಯರು ಪಾಲಿಸುವ ಉಪವಾಸ ನಿಯಮಗಳಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ವಿಶೇಷವಾಗಿ ಉಪವಾಸದಿಂದ ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕಬಹುದು.

ಹೊಟ್ಟೆ ನೋವು, ಹುಣ್ಣು, ಜ್ವರ, ಶೀತ ಇತ್ಯಾದಿಗಳನ್ನು ಕನಿಷ್ಠ 5 ದಿನಗಳವರೆಗೆ ಉಪವಾಸದಿಂದ ಕಡಿಮೆ ಮಾಡಬಹುದು. ಯಾವುದೇ ಕಾಯಿಲೆ ಇದ್ದವರು ಉಪವಾಸ ಮಾಡುವುದರಿಂದ ರೋಗವು ಬೇಗನೆ ಕಡಿಮೆಯಾಗುತ್ತದೆ. ಇಲ್ಲದಿದ್ದರೆ, ಒಂದು ಹೊತ್ತು ಉಪವಾಸ ಮಾಡಬಹುದು ಮತ್ತು ನಂತರ ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳಬಹುದು.

ಉಪವಾಸದ ಪ್ರಯೋಜನಗಳು ಉಪವಾಸವು ವಿವಿಧ ಅಂಗಗಳಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಉಂಟುಮಾಡುತ್ತದೆ. ಜೀರ್ಣಕ್ರಿಯೆಯ ಸಮಸ್ಯೆ ದೂರವಾಗುತ್ತದೆ. ಉಪವಾಸನವು ರೋಗಾಣುಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಮೂತ್ರಪಿಂಡದಲ್ಲಿನ ವಿಷ ಮತ್ತು ಕಲ್ಲುಗಳನ್ನು ಹೊರಹಾಕುತ್ತದೆ. ಶ್ವಾಸಕೋಶದಲ್ಲಿನ ವಿಷ, ನೀರನ್ನು ಹೊರಹಾಕಲು ಉಪವಾಸ ಮಾಡುವುದು ಉತ್ತಮ ಅಭ್ಯಾಸವಾಗಿದೆ. ಇದು ಆಯಾಸವನ್ನು ಕಡಿಮೆ ಮಾಡುತ್ತದೆ. ಹೃದಯದ ಸುತ್ತಲಿನ ಕೊಬ್ಬು ಮತ್ತು ನೀರನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಬಡಿತವನ್ನು ಸುಧಾರಿಸುತ್ತದೆ.

ಉಪವಾಸವು ಯಕೃತ್ತನ್ನು ಸಡಿಲಗೊಳಿಸುತ್ತದೆ. ಅದರಲ್ಲಿರುವ ಕಲ್ಮಶಗಳನ್ನು ತೆಗೆದುಹಾಕುತ್ತದೆ. ದೇಹದಲ್ಲಿ ರಕ್ತ ಪರಿಚಲನೆ ಸಕ್ರಿಯವಾಗುತ್ತದೆ. ಉಪವಾಸವು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಇದು ಸೆಳೆತ, ಉರಿಯೂತ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ಕೀಲುಗಳಲ್ಲಿ ಸಂಗ್ರಹವಾಗಿರುವ ಕೊಬ್ಬು, ನೀರು ಮತ್ತು ಮಾಂಸದಂತಹ ಮಾಲಿನ್ಯಕಾರಕಗಳನ್ನು ತೆಗೆದುಹಾಕಲು ಉಪವಾಸ ಸಹಕಾರಿಯಾಗಿದೆ. ಅಲ್ಲದೆ ಚರ್ಮದ ಕಾಂತಿಯು ಹೆಚ್ಚಾಗುತ್ತದೆ.

ಯಾರೆಲ್ಲಾ ಉಪವಾಸ ಮಾಡಬಾರದು? ದುರ್ಬಲವಾಗಿರುವ ಜನರು, ಹೃದ್ರೋಗ, ಮಕ್ಕಳು, ವೃದ್ಧರು, ಗರ್ಭಿಣಿಯರು, ಪ್ರಸವಾನಂತರದ ಮಹಿಳೆಯರು, ಕ್ಷಯ ರೋಗಿಗಳು, ರಕ್ತಹೀನತೆ ಮತ್ತು ಮಧುಮೇಹ ಇರುವವರು ಹೆಚ್ಚು ದಿನ ಉಪವಾಸ ಮಾಡಬಾರದು.

ಯಾರು ಉಪವಾಸ ಮಾಡಬಹುದು? ಸ್ಥೂಲಕಾಯತೆ, ಅಸ್ತಮಾ, ಸಂಧಿವಾತ, ಅಧಿಕ ರಕ್ತದೊತ್ತಡ, ಚರ್ಮ ರೋಗ ಇರುವವರು ಉಪವಾಸವನ್ನು ಮಾಡಬಹುದು

ಆದಾಗ್ಯೂ, ಉಪವಾಸದ ನಂತರ ಹೆಚ್ಚು ಆಹಾರವನ್ನು ತೆಗೆದುಕೊಳ್ಳಬೇಡಿ. ಕ್ರಮೇಣ ಆಹಾರವನ್ನು ಹೆಚ್ಚಿಸಿ. ಮೆಣಸಿನಕಾಯಿ, ಮಸಾಲೆ, ಪೇಸ್ಟ್ರಿ ಅಥವಾ ಉಪ್ಪಿನಕಾಯಿ ತಿನ್ನಬೇಡಿ. ಉಪವಾಸದ ನಂತರ ತಕ್ಷಣಕ್ಕೆ ಆಹಾರ ತಿನ್ನುವುದರಿಂದ ಅತಿಸಾರ, ವಾಂತಿ, ಎದೆಯುರಿ ಮತ್ತು ಹೊಟ್ಟೆ ನೋವು ಉಂಟಾಗುತ್ತದೆ.

ಇದನ್ನೂ ಓದಿ: Kidney Stone: ಮೂತ್ರಪಿಂಡದಲ್ಲಿ ಕಲ್ಲು ಇದೆ ಎಂದು ತಿಳಿಯುವುದು ಹೇಗೆ? ಈ ಲಕ್ಷಣಗಳೇ ಸಮಸ್ಯೆಗೆ ಮುನ್ನೆಚ್ಚರಿಕೆ

Liver Health: ಪಿತ್ತಜನಕಾಂಗದ ಆರೋಗ್ಯವನ್ನು ಕಾಪಾಡಲು ವಾರದ 7 ದಿನವನ್ನು ಬಳಸಿ; ಆಹಾರದಲ್ಲಿನ ಈ ಕ್ರಮ ಯಕೃತ್ತಿನ ಕಾಯಿಲೆಯಿಂದ ನಿಮ್ಮನ್ನು ದೂರ ಇಡುತ್ತದೆ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ