Women Health: ಮುಟ್ಟಿನ ಸಮಯದಲ್ಲಿ ಅಧಿಕ ರಕ್ತಸ್ರಾವಕ್ಕೆ ಕಾರಣವೇನು ಗೊತ್ತಾ? ಪರಿಹಾರವೂ ಇಲ್ಲಿದೆ
ಅಧಿಕ ರಕ್ತಸ್ರಾವದಿಂದ ಪದೇ ಪದೇ ಪ್ಯಾಡ್ನ ಬದಲಾಯಿಸಬೇಕು. ಒಂದು ಗಂಟೆಗೊಮ್ಮೆ ಬದಲಾಯಿಸಬೇಕು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಮೆನೊರ್ಹೇಜಿಯಾ(Menorrhagia) ಎಂದು ಕರೆಯಲಾಗುತ್ತದೆ.
ತಿಂಗಳಿಗೊಮ್ಮೆ ಮಹಿಳೆಯರು ಪಡುವ ಕಷ್ಟ ಅಷ್ಟಿಷ್ಟಲ್ಲ. ಮುಟ್ಟಿನ ಸಮಯ ಹತ್ತಿರ ಬರುತ್ತಿದ್ದಂತೆ ಭಯ ಶುರುವಾಗುತ್ತದೆ. ವಿಪರೀತ ಹೊಟ್ಟೆ, ಸೊಂಟ ನೋವು ತಾಳಲಾರದೆ ಒದ್ದಾಡುತ್ತಾರೆ. ಜೀವವೆ ಬೇಡಪ್ಪ ಅಂತ ಹೆಣ್ಣು ಮಕ್ಕಳು ಕಣ್ಣೀರಾಕುತ್ತಾರೆ. ಆದರೆ ಮಟ್ಟು ಪ್ರಕೃತಿ ನಿಯಮ. ಅದನ್ನು ಅನಿಷ್ಟ ಎನ್ನುವುದು ತಪ್ಪು. ಮುಟ್ಟಾದಾಗ ಎಲ್ಲರಿಗೂ ಹೊಟ್ಟೆ ನೋವಾಗಲ್ಲ. ಆದರೆ ಕೆಲವರಿಗೆ ವಿಪರೀತ ಹೊಟ್ಟೆ ನೋವಾಗುತ್ತದೆ. ಜೊತೆಗೆ ಹೆಚ್ಚು ರಕ್ತಸ್ರಾವವಾಗುತ್ತದೆ.
ಅಧಿಕ ರಕ್ತಸ್ರಾವದಿಂದ ಪದೇ ಪದೇ ಪ್ಯಾಡ್ನ ಬದಲಾಯಿಸಬೇಕು. ಒಂದು ಗಂಟೆಗೊಮ್ಮೆ ಬದಲಾಯಿಸಬೇಕು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಮೆನೊರ್ಹೇಜಿಯಾ(Menorrhagia) ಎಂದು ಕರೆಯಲಾಗುತ್ತದೆ.
ಮೆನೊರ್ಹೇಜಿಯಾಕ್ಕೆ ಕಾರಣವೇನು 1. ಮೆನೊರ್ಹೇಜಿಯಾಕ್ಕೆ ಹಲವು ಕಾರಣಗಳಿವೆ. ಕೆಲವೊಮ್ಮೆ ಇದು ಹಾರ್ಮೋನ್ ಅಸಮತೋಲನದಿಂದಾಗಿ ಸಂಭವಿಸುತ್ತದೆ (Hormone Imbalance). ಮಹಿಳೆಯರ ಗರ್ಭಾಶಯದಲ್ಲಿ ಪ್ರತಿ ತಿಂಗಳು ಒಂದು ಪದರವು ರೂಪುಗೊಳ್ಳುತ್ತದೆ. ಈ ಪದರವು ಮುಟ್ಟಿನ ಸಮಯದಲ್ಲಿ ದೇಹದಿಂದ ರಕ್ತಸ್ರಾವದ ಮೂಲಕ ಹೊರಬರುತ್ತದೆ. ದೇಹದಲ್ಲಿ ಹಾರ್ಮೋನುಗಳ ಅಸಮತೋಲನ ಇದ್ದಾಗ ಈ ಪದರವು ತುಂಬಾ ದಪ್ಪವಾಗುತ್ತದೆ. ಆಗ ಇದು ಅಧಿಕ ರಕ್ತಸ್ರಾವದ ರೂಪದಲ್ಲಿ ಹೊರಬರುತ್ತದೆ.
2. ಗರ್ಭಾಶಯದಲ್ಲಿ ಫೈಬ್ರಾಯ್ಡ್ಗಳು ಇರುವುದರಿಂದ ಕೆಲವೊಮ್ಮೆ ಅಧಿಕ ರಕ್ತಸ್ರಾವ ಪ್ರಾರಂಭವಾಗುತ್ತದೆ.
3. ಗರ್ಭಾಶಯದಲ್ಲಿನ ಕ್ಯಾನ್ಸರ್ ಅಥವಾ ಅಂಡಾಶಯದಲ್ಲಿನ ಕ್ಯಾನ್ಸರ್ ಕೂಡ ಹೆಚ್ಚು ರಕ್ತಸ್ರಾವಕ್ಕೆ ಕಾರಣವಾಗಬಹುದು.
* ಹಾರ್ಮೋನ್ ಸಮಸ್ಯೆಯಿದ್ದಾಗ ಔಷಧಿಗಳನ್ನು ತೆಗೆದುಕೊಳ್ಳಲು ತಜ್ಞರು ಸೂಚಿಸುತ್ತಾರೆ. ವೈದ್ಯರು ನೀಡಿದ ಕೆಲ ಸಲಹೆಗಳನ್ನು ಚಾಚು ತಪ್ಪದೆ ಪಾಲಿಸಬೇಕು. ಆಗ ಮಾತ್ರ ಮೆನೊರ್ಹೇಜಿಯಾ ಸಮಸ್ಯೆಯನ್ನು ದೂರ ಮಾಡಬಹದು.
* ರಕ್ತಸ್ರಾವ ಅಧಿಕವಾಗುತ್ತಿದ್ದರೆ ಅಂತವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಶಸ್ತ್ರಚಿಕಿತ್ಸೆಯಲ್ಲಿ ಗರ್ಭಾಶಯವನ್ನು ತೆಗೆಯಬಹುದು. ಆ ಬಳಿಕ ಮುಟ್ಟಾಗುವುದು ನಿಲ್ಲುತ್ತದೆ.
ಮನೆಮದ್ದುಗಳು ಇಲ್ಲಿವೆ 1. ಸಾಸಿವೆಯನ್ನು ಚೆನ್ನಾಗಿ ಪುಡಿ ಮಾಡಿ. ಮುಟ್ಟಿನ ವೇಳೆ ಅಧಿಕ ರಕ್ತಸ್ರಾವವಾಗುತ್ತಿದ್ದರೆ, ಒಂದು ಚಮಚ ಸಾಸಿವೆ ಪುಡಿಯನ್ನು ತಣ್ಣಗಿರುವ ಹಾಲಿನೊಂದಿಗೆ ಸೇರಿಸಿ ಕುಡಿಯಿರಿ.
2. ಜೀರಿಗೆಯನ್ನು ಪುಡಿ ಮಾಡಿ. ಎರಡು ಚಮಚ ಜೀರಿಗೆ ಪುಡಿಯನ್ನು ಒಂದು ಲೋಟ ನೀರಿನೊಂದಿಗೆ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಅದನ್ನು ಸೋಸಿ, ಕುಡಿಯಿರಿ. ಕುಡಿಯುವಾಗ ಜೀರಿಗೆ ನೀರು ಬಿಸಿಯಾಗಿರಬೇಕು.
3. ಒಂದು ಬಟ್ಟೆ ಅಥವಾ ಟವೆಲ್ಗೆ ಐಸ್ ಕ್ಯೂಬ್ಗಳನ್ನು ಹಾಕಿ. ಅದನ್ನು ಚೆನ್ನಾಗಿ ಹೊಟ್ಟೆಗೆ ಕಟ್ಟಿಕೊಳ್ಳಿ. ಹೊಟ್ಟೆಯ ಕೆಳಭಾಗದಲ್ಲಿ 15 ರಿಂದ 20 ನಿಮಿಷಗಳ ಕಾಲ ಇರಿಸಿ.
4. ಒಂದು ಚಮಚ ಮೆಂತ್ಯ ಬೀಜವನ್ನು ಎರಡು ಕಪ್ ನೀರಿನಲ್ಲಿ ಕುದಿಸಿ. ನೀರು ಅರ್ಧದಷ್ಟು ಉಳಿದಿರುವಾಗ ಸೋಸಿ. ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯಿರಿ. ಇದನ್ನು ದಿನಕ್ಕೆ ಎರಡು ಮೂರು ಬಾರಿ ಕುಡಿಯಬೇಕು.
ಇದನ್ನೂ ಓದಿ
Women Health: ಗುಪ್ತಾಂಗದಲ್ಲಿನ ತುರಿಕೆ ಮತ್ತು ಸೋಂಕು ಕಡಿಮೆ ಮಾಡಲು ಈ ಮನೆಮದ್ದುಗಳನ್ನು ಬಳಸಿ
(Reason and solution for heavy bleeding during periods)