Women Health: ಗರ್ಭಿಣಿಯರಿಗೆ ವಾಕಿಂಗ್ ಎಷ್ಟು ಮುಖ್ಯ? ಹಾಕುವ ಪ್ರತಿ ಹೆಜ್ಜೆ ಜತೆಗೆ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ

ದಿನಕ್ಕೆ 30 ರಿಂದ 45 ನಿಮಿಷಗಳ ನಡಿಗೆಯಿಂದ ಹೆಚ್ಚಿನ ಪ್ರಯೋಜನವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಾಗಿದ್ದರೆ ಗರ್ಭಾವಸ್ಥೆಯಲ್ಲಿ ನಡಿಗೆಯ ಪ್ರಯೋಜನಗಳು ಮತ್ತು ಮುನ್ನೆಚ್ಚರಿಕೆಗಳನ್ನು ತಿಳಿಯಿರಿ.

Women Health: ಗರ್ಭಿಣಿಯರಿಗೆ ವಾಕಿಂಗ್ ಎಷ್ಟು ಮುಖ್ಯ? ಹಾಕುವ ಪ್ರತಿ ಹೆಜ್ಜೆ ಜತೆಗೆ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ
ಸಾಂದರ್ಭಿಕ ಚಿತ್ರ
Follow us
| Updated By: preethi shettigar

Updated on:Jul 26, 2021 | 4:02 PM

ಆರೋಗ್ಯಕರ ಗರ್ಭಧಾರಣೆಗೆ ಉತ್ತಮ ಜೀವನಶೈಲಿಯನ್ನು ಹೊಂದುವುದು ಬಹಳ ಮುಖ್ಯ. ಆರೋಗ್ಯಕರ ಜೀವನಶೈಲಿ ಎಂದರೆ ಹೆಚ್ಚು ಪೋಷಕಾಂಶಯುಕ್ತ ಆಹಾರವನ್ನು ಸೇವಿಸುವುದು, ವಾಕಿಂಗ್ ಮಾಡುವುದು ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು. ಗರ್ಭಿಣಿಯಾದವರು ದೇಹದಲ್ಲಿ ಪೋಷಕಾಂಶಗಳ ಕೊರತೆ ಜತೆಗೆ, ದೈಹಿಕ ಚಟುವಟಿಕೆಯನ್ನು ಉತ್ತಮವಾಗಿಸಬೇಕು. ಇದರಿಂದ ತೂಕ ಹೆಚ್ಚಾಗುವುದಿಲ್ಲ ಮತ್ತು ಯಾವುದೇ ತೊಂದರೆಗಳಾಗುವುದಿಲ್ಲ. ಆದರೆ ಗರ್ಭಾವಸ್ಥೆಯಲ್ಲಿ ಭಾರೀ ಜೀವನಕ್ರಮವನ್ನು ಅನುಸರಿಸುವುದು ಕೂಡ ಒಳ್ಳೆಯದಲ್ಲ. ಹೀಗಾಗಿ ವಾಕಿಂಗ್ (Walking)​ ಅಥವಾ ನಡೆಯುವುದು ಉತ್ತಮ ಆಯ್ಕೆ. ದಿನಕ್ಕೆ 30 ರಿಂದ 45 ನಿಮಿಷಗಳ ನಡಿಗೆಯಿಂದ ಹೆಚ್ಚಿನ ಪ್ರಯೋಜನವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಾಗಿದ್ದರೆ ಗರ್ಭಾವಸ್ಥೆಯಲ್ಲಿ ನಡಿಗೆಯ ಪ್ರಯೋಜನಗಳು ಮತ್ತು ಮುನ್ನೆಚ್ಚರಿಕೆಗಳನ್ನು ತಿಳಿಯಿರಿ.

ವಾಕಿಂಗ್​ನಿಂದ ಯಾವೆಲ್ಲಾ ಪ್ರಯೋಜನಗಳಿವೆ 1. ಗರ್ಭಿಣಿಯರು ಮಾಡುವ ವಾಕಿಂಗ್ ಅನ್ನು ಹೃದಯ ವ್ಯಾಯಾಮ ಎಂದು ಪರಿಗಣಿಸಲಾಗುತ್ತದೆ. ಇದೊಂದು ಉತ್ತಮ ಚಟುವಟಿಕೆಯಾಗಿದೆ. ವಾಕಿಂಗ್​ ಅನ್ನು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಮಾಡಬಹುದು.

2. ವಾಕಿಂಗ್ ಸ್ನಾಯುಗಳನ್ನು ಬಲಪಡಿಸುತ್ತದೆ. ಗರ್ಭಿಣಿಯರಿಗೆ ಹೊಟ್ಟೆ ಗಾತ್ರ ದೊಡ್ಡದಾಗುವುದರಿಂದ ಕಾಲುಗಳಲ್ಲಿ ಕಾಣಿಸುವ ಅಸ್ವಸ್ಥತೆ ಮತ್ತು ನೋವಿನ ಸಮಸ್ಯೆ ವಾಕಿಂಗ್​ನಿಂದ ದೂರವಾಗುತ್ತದೆ

3. ಗರ್ಭಿಣಿಯರಿಗೆ ಮಧುಮೇಹದ ಅಪಾಯ ಹೆಚ್ಚಾಗಿರುತ್ತದೆ. ಆದರೆ ಪ್ರತಿದಿನ ವಾಕಿಂಗ್ ಮಾಡಿದರೆ ಈ ಸಮಸ್ಯೆ ದೂರವಾಗುತ್ತದೆ.

4. ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಗ್ಯಾಸ್ಟಿಕ್, ಮಲಬದ್ಧತೆ ಹಾಗೂ ಇನ್ನಿತರ ಸಮಸ್ಯೆಗೆ ವಾಕಿಂಗ್ ಉತ್ತಮ ಪರಿಹಾರವಾಗಿದೆ.

ವಾಕಿಂಗ್​ ಮಾಡುವಾಗ ವಹಿಸಬೇಕಾದ ಮುನ್ನೆಚ್ಚರಿಕೆ 1. ವಾಕಿಂಗ್​ ಸಮಯದಲ್ಲಿ ಉತ್ತಮ ಗುಣಮಟ್ಟದ ಬೂಟುಗಳನ್ನು ಧರಿಸುವುದು ಸೂಕ್ತ. ಅದು ನೆಲದ ಮೇಲೆ ಹಿಡಿತವನ್ನು ಹೊಂದಿರುತ್ತದೆ ಮತ್ತು ಪಾದಗಳಿಗೆ ಸರಿಯಾಗಿ ಹೊಂದಿಕೊಳ್ಳುತ್ತದೆ.

2. ವಾಕಿಂಗ್ ಮಾಡುವಾಗ ಸೂರ್ಯನ ಬೆಳಕು ಹೆಚ್ಚಾಗಿರುತ್ತದೆ. ಹೀಗಾಗಿ ಚರ್ಮದ ಕಾಳಜಿ ವಹಿಸಿವುದು ಅಗತ್ಯ. ಆದ್ದರಿಂದ ಸನ್‌ಸ್ಕ್ರೀನ್ ಅಥವಾ ಚರ್ಮಕ್ಕೆ ಹಾನಿಯಾಗದಂತೆ ಕಾಪಾಡುವ ಇತರ ಕ್ರೀಮ್ ಬಳಸಿ.

3. ಎಂದಿಗೂ ಒಬ್ಬಂಟಿಯಾಗಿ ವಾಕಿಂಗ್ ಹೋಗಬೇಡಿ. ಯಾರನ್ನಾದರೂ ನಿಮ್ಮೊಂದಿಗೆ ಕರೆದುಕೊಂಡು ಹೋಗುವುದು ಉತ್ತಮ. ಗರ್ಭಧಾರಣೆಯ ಸಮಯವು ತುಂಬಾ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ನಿಮ್ಮ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ.

4. ವಾಕಿಂಗ್ ಮಾಡುವಾಗ ಕುಡಿಯುವ ನೀರನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ. ದೇಹದ ಉಷ್ಣತೆಯು ಹೆಚ್ಚಾಗದಂತೆ ಎರಡು ಸಿಪ್​ ನೀರನ್ನು ಕಡಿಮೆ ಅಂತರದಲ್ಲಿ ಕುಡಿಯಿರಿ.

5. ಮೊಳಕೆಬರಿಸಿದ ಕಾಳು ಮತ್ತು ಇನ್ನಿತರ ಪೋಷಕಾಂಶಯುಕ್ತ ಆಹಾರವನ್ನು ವಾಕ್ ಮಾಡಲು 30 ನಿಮಿಷಗಳ ಮೊದಲು ತೆಗೆದುಕೊಳ್ಳಿ.

6. ನಡಿಗೆಗೆ ಬೆಳಿಗ್ಗೆ ಸಮಯವನ್ನು ಆರಿಸಿ ಮತ್ತು ಸಾಧ್ಯವಾದಷ್ಟು ನಡೆಯಿರಿ. ನಡೆಯುವಾಗ ದಣಿವಾದರೆ ಅಥವಾ ಉಸಿರಾಟದ ತೊಂದರೆ ಅನುಭವಿಸಿದಾಗ ಕುಳಿತುಕೊಳ್ಳಿ. ಬಲವಂತವಾಗಿ ನಡೆಯುವುದು ಬೇಡ.

ಇದನ್ನೂ ಓದಿ: Women Health: ಗುಪ್ತಾಂಗದಲ್ಲಿನ ತುರಿಕೆ ಮತ್ತು ಸೋಂಕು ಕಡಿಮೆ ಮಾಡಲು ಈ ಮನೆಮದ್ದುಗಳನ್ನು ಬಳಸಿ

Health Benefits: ಪ್ಲಮ್​ ಹಣ್ಣು ಸೇವಿಸಿದ್ದೀರಾ? ಹುಳಿ-ಸಿಹಿ ರುಚಿಯ ಜತೆಗೆ ಇದು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ

Published On - 7:07 am, Sun, 25 July 21

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ