IPL 2025: ಕೊಹ್ಲಿಗೆ ಕೋಚಿಂಗ್ ಅಗತ್ಯವಿಲ್ಲ ಎಂದ ಡಿಕೆ; ವಿಡಿಯೋ ನೋಡಿ
Dinesh Karthik on Virat Kohli: ಏಪ್ರಿಲ್ 7 ರಂದು ಮುಂಬೈನಲ್ಲಿ ಆರ್ಸಿಬಿ ಮುಂಬೈ ವಿರುದ್ಧ ಮಹತ್ವದ ಪಂದ್ಯವನ್ನಾಡಲಿದೆ. ಬೆಂಗಳೂರಿನಲ್ಲಿನ ಸೋಲಿನ ನಂತರ ಗೆಲುವಿನತ್ತ ಮುನ್ನುಗ್ಗಲು ಆರ್ಸಿಬಿ ಸಜ್ಜಾಗಿದೆ. ಆರ್ಸಿಬಿ ಮೆಂಟರ್ ದಿನೇಶ್ ಕಾರ್ತಿಕ್ ಅವರು ಸಂದರ್ಶನದಲ್ಲಿ ವಿರಾಟ್ ಕೊಹ್ಲಿಗೆ ಕೋಚಿಂಗ್ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಕೊಹ್ಲಿಯಿಂದ ತಾನು ಸಾಕಷ್ಟು ಕಲಿತಿದ್ದೇನೆ ಎಂದೂ ಅವರು ತಿಳಿಸಿದ್ದಾರೆ.
ಆರ್ಸಿಬಿ ತನ್ನ 4ನೇ ಪಂದ್ಯವನ್ನು ಇದೇ ಸೋಮವಾರ ಅಂದರೆ ಏಪ್ರಿಲ್ 7 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ವಿರುದ್ಧ ಆಡಲಿದೆ. ಈ ಪಂದ್ಯಕ್ಕಾಗಿ ಆರ್ಸಿಬಿ ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಬೆಂಗಳೂರು ಪಂದ್ಯದಲ್ಲಿ ಸೋಲಿನ ಬಳಿಕ ಆರ್ಸಿಬಿ ಮತ್ತೆ ಗೆಲುವಿನ ಲಯಕ್ಕೆ ಮರಳೋದಕ್ಕೆ ಸಜ್ಜಾಗಿದೆ. ಇನ್ನು ಆರ್ಸಿಬಿ ತಂಡದ ಮೆಂಟರ್ ದಿನೇಶ್ ಕಾರ್ತಿಕ್ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಪೈಕಿ ಕೊಹ್ಲಿಗೆ ಕೋಚಿಂಗ್ ನೀಡುವ ಪ್ರಶ್ನೆಗೆ ಉತ್ತರಿಸಿರುವ ಡಿಕೆ, ಕೊಹ್ಲಿ ಅವರಿಗೆ ಕೋಚಿಂಗ್ ನೀಡುವ ಅಗತ್ಯ ಇಲ್ಲ.. ಕೊಹ್ಲಿ ಅವರಿಂದ ನಾನೇ ಸಾಕಷ್ಟು ಕಲಿತಿದ್ದೇನೆ ಎಂದಿದ್ದಾರೆ.