AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Education Summit 2025: S-VYASA ವಿವಿಯ ತನುಜಾ ಟಿವಿ9 ಎಕ್ಸ್​​​ಪೋ ಬಗ್ಗೆ ಹೇಳಿದ್ದಿದು

TV9 Education Summit 2025: S-VYASA ವಿವಿಯ ತನುಜಾ ಟಿವಿ9 ಎಕ್ಸ್​​​ಪೋ ಬಗ್ಗೆ ಹೇಳಿದ್ದಿದು

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 06, 2025 | 5:08 PM

Thanuja of S-VYASA Deemed-to University at TV9 Education Summit 2025: ಟಿವಿ9 ಎಜುಕೇಶನ್ ಸಮಿಟ್ 2025 ಕಾರ್ಯಕ್ರಮದಲ್ಲಿ ಹಲವು ವಿವಿಗಳು, ಕಾಲೇಜುಗಳು ಪಾಲ್ಗೊಂಡು ತಮ್ಮಲ್ಲಿ ಲಭ್ಯ ಇರುವ ಕೋರ್ಸ್​​ಗಳು ಹಾಗೂ ಅವುಗಳ ವಿಶೇಷತೆ ಬಗ್ಗೆ ವಿದ್ಯಾರ್ಥಿಗಳು ಹಾಗು ಪೋಷಕರೊಂದಿಗೆ ಮಾಹಿತಿ ಹಂಚಿಕೊಂಡರು. ಏಪ್ರಿಲ್ 4ರಿಂದ 6ರವರೆಗೆ ಈ ಸಮಿಟ್ ನಡೆದಿದೆ. ಇದರಲ್ಲಿ ಪಾಲ್ಗೊಂಡಿದ್ದ ವಿವಿಗಳಲ್ಲಿ ಎಸ್​​ವ್ಯಾಸ್ ಡೀಮ್ಡ್ ಟು ಬಿ ಯೂನಿವರ್ಸಿಟಿಯೂ ಒಂದು. ಎಸ್-ವ್ಯಾಸ್ ಯೂನಿವರ್ಸಿಟಿಯ ತನುಜಾ ಎಂಬುವವರು ತಮ್ಮ ಶಿಕ್ಷಣ ಸಂಸ್ಥೆ ಹಾಗೂ ಅದು ಆಫರ್ ಮಾಡಿರುವ ಕೆಲ ಪ್ರಮುಖ ಕೋರ್ಸ್​​ಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

ಬೆಂಗಳೂರು, ಏಪ್ರಿಲ್ 6: ಟಿವಿ9 ಎಜುಕೇಶನ್ ಸಮಿಟ್ 2025 ಕಾರ್ಯಕ್ರಮದಲ್ಲಿ (TV9 Education Summit 2025:) ಹಲವು ವಿವಿಗಳು, ಕಾಲೇಜುಗಳು ಪಾಲ್ಗೊಂಡು ತಮ್ಮಲ್ಲಿ ಲಭ್ಯ ಇರುವ ಕೋರ್ಸ್​​ಗಳು ಹಾಗೂ ಅವುಗಳ ವಿಶೇಷತೆ ಬಗ್ಗೆ ವಿದ್ಯಾರ್ಥಿಗಳು ಹಾಗು ಪೋಷಕರೊಂದಿಗೆ ಮಾಹಿತಿ ಹಂಚಿಕೊಂಡರು. ಏಪ್ರಿಲ್ 4ರಿಂದ 6ರವರೆಗೆ ಈ ಸಮಿಟ್ ನಡೆದಿದೆ. ಇದರಲ್ಲಿ ಪಾಲ್ಗೊಂಡಿದ್ದ ವಿವಿಗಳಲ್ಲಿ ಎಸ್​​ವ್ಯಾಸ್ ಡೀಮ್ಡ್ ಟು ಬಿ ಯೂನಿವರ್ಸಿಟಿಯೂ ಒಂದು. ಎಸ್-ವ್ಯಾಸ್ ಯೂನಿವರ್ಸಿಟಿಯ (S-VYAS Deemed-to-be University) ತನುಜಾ ಎಂಬುವವರು ತಮ್ಮ ಶಿಕ್ಷಣ ಸಂಸ್ಥೆ ಹಾಗೂ ಅದು ಆಫರ್ ಮಾಡಿರುವ ಕೆಲ ಪ್ರಮುಖ ಕೋರ್ಸ್​​ಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಬೆಂಗಳೂರಿನ ಕೆಂಗೇರಿಯಲ್ಲಿನ ಸತ್ವ ಗ್ಲೋಬಲ್ ಸಿಟಿಯಲ್ಲಿ ಸ್ಥಾಪಿತವಾಗಿರುವ ಎಸ್-ವ್ಯಾಸ್ ಯೂನಿವರ್ಸಿಟಿಯಲ್ಲಿ ಅತ್ಯಾಧುನಿಕ ಸೌಲಭ್ಯ ಇದೆ. ಟೆಕ್ ಪಾರ್ಕ್ ಸಮೀಪವೇ ದ್ದು ವಿದ್ಯಾರ್ಥಿಗಳು ಐಟಿ ಕ್ಷೇತ್ರದ ಅನುಭವ ಪಡೆಯಲು ಅವಕಾಶ ಇದೆ. ಬಿಟೆಕ್, ಬಿಸಿಎ, ಬಿಬಿಎ, ಬಿಕಾಂ ಮೊದಲಾದ ಅಂಡರ್ ಗ್ರಾಜುಯೇಟ್ ಕೋರ್ಸ್​​ಗಳಿವೆ. ಎಂಬಿಎ, ಎಂಸಿಎ, ಎಂಎಸ್​​ಸಿ ಇತ್ಯಾದಿ ಪಿಜಿ ಕೋರ್ಸ್​​ಗಳಿವೆ. ಎಸ್-ವ್ಯಾಸ್ ವಿಶ್ವವಿದ್ಯಾಲಯವು 180ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಒಪ್ಪಂದ ಹೊಂದಿದ್ದು, ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಮತ್ತು ಉದ್ಯೋಗ ಅವಕಾಶಗಳನ್ನು ಒದಗಿಸುತ್ತದೆ. ಇಂಟರ್ವ್ಯೂ ತರಬೇತಿಯನ್ನು ಸಹ ಒದಗಿಸಲಾಗುತ್ತದೆ. ವಿದ್ಯಾರ್ಥಿಗಳು ಸಿಇಟಿ ಅಥವಾ ನಿರ್ವಹಣಾ ಪ್ರವೇಶದ ಮೂಲಕ ಸೇರ್ಪಡೆಗೊಳ್ಳಬಹುದು ಎಂದು ತನುಜಾ ಅವರು ಮಾಹಿತಿ ನೀಡಿದರು.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ