TV9 Education Summit 2025: ಟಿವಿ9 ಎಕ್ಸ್ಪೋಗೆ ಧನ್ಯವಾದ ಹೇಳಿದ ARENA ANIMATIONSನ ರೋಶಿನಿ
TV9 Education Summit 2025: ಗುಪ್ತಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್‌ನ ರೋಶಿನಿ ಅವರು ಟಿವಿ9 ಎಕ್ಸ್ಪೋದಲ್ಲಿ ಅರಿನಾ ಅನಿಮೇಷನ್ ಮತ್ತು ಅರಿನಾ ಕ್ರಿಯೇಟಿವ್ ಕ್ಯಾಂಪಸ್ ಬಗ್ಗೆ ಮಾತನಾಡಿದ್ದಾರೆ. ಮಕ್ಕಳಲ್ಲಿ ಉತ್ಸಾಹ ಮತ್ತು ಕೌಶಲ್ಯ ಅಭಿವೃದ್ಧಿಯ ಬಗ್ಗೆ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಉಪಕ್ರಮವನ್ನು ಅವರು ಶ್ಲಾಘಿಸಿದ್ದಾರೆ.
ಬೆಂಗಳೂರು, ಏಪ್ರಿಲ್ 6: ಗುಪ್ತಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್‌ನ ಕೆರಿಯರ್ ಕ್ವಾಲಿಟಿ ಆಫೀಸರ್ ರೋಶಿನಿ ಅವರು ಟಿವಿ9 ಎಕ್ಸ್ಪೋದಲ್ಲಿ (TV9 Education Summit 2025) ತಮ್ಮ ಸಂಸ್ಥೆಯ ಅರಿನಾ ಅನಿಮೇಷನ್ ಮತ್ತು ಅರಿನಾ ಕ್ರಿಯೇಟಿವ್ ಕ್ಯಾಂಪಸ್‌ಗಳನ್ನು ಪ್ರದರ್ಶಿಸಿದ್ದಾರೆ. ಮೂರು ದಿನಗಳ ಈ ಎಕ್ಸ್ಪೋದಲ್ಲಿ ವಿದ್ಯಾರ್ಥಿಗಳಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿರುವುದಾಗಿ ಅವರು ತಿಳಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿನ ವೃತ್ತಿ ಅವಕಾಶಗಳು ಮತ್ತು ಶಿಕ್ಷಣದ ಬಗ್ಗೆ ವಿದ್ಯಾರ್ಥಿಗಳು ತೋರಿಸಿದ ಆಸಕ್ತಿಯನ್ನು ಅವರು ಶ್ಲಾಘಿಸಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದು ತುಂಬಾ ಪ್ರೇರೇಪಕವಾಗಿದೆ ಎಂದು ಹೇಳಿದ ಅವರು, ಟಿವಿ9 ಈ ಉಪಕ್ರಮವನ್ನು ಕೈಗೊಂಡಿದ್ದಕ್ಕಾಗಿ ಧನ್ಯವಾದಗಳನ್ನೂ ಅರ್ಪಿಸಿದ್ದಾರೆ. ಟಿವಿ9 ಕನ್ನಡವು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ಏಪ್ರಿಲ್ 4ರಿಂದ ಆಯೋಜಿಸಿದ ಮೂರು ದಿನಗಳ ಎಜುಕೇಶನ್ ಎಕ್ಸ್ಪೋ ಕಾರ್ಯಕ್ರಮದಲ್ಲಿ ಗುಪ್ತಾ ಇನ್ಸ್ಟಿಟ್ಯೂಟ್ ಮಾತ್ರವಲ್ಲ ಹತ್ತಾರು ಪ್ರಮುಖ ಕಾಲೇಜು ಮತ್ತು ಯೂನಿವರ್ಸಿಟಿಗಳು ಪಾಲ್ಗೊಂಡವು.
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ