TV9 Education Summit 2025: ಟಿವಿ9 ಎಜುಕೇಶನ್ ಎಕ್ಸ್ಪೋಗೆ ಧನ್ಯವಾದ ಹೇಳಿದ ಸೋಮೇಶ್ವರಿ, ಶ್ರುತಿ, ಹರ್ಷಿತ್
TV9 Education Summit 2025: ಕರ್ನಾಟಕ ಕಾಲೇಜ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ಮೊದಲಾದ ಹಲವು ಶಿಕ್ಷಣ ಸಂಸ್ಥೆಗಳು ಟಿವಿ9 ಎಜುಕೇಶನ್ ಸಮಿಟ್ನಲ್ಲಿ ಪಾಲ್ಗೊಂಡಿದ್ದವು. ಎಂಜಿನಿಯರಿಂಗ್, ಮ್ಯಾನೇಜ್ಮೆಂಟ್ ಮತ್ತು ನರ್ಸಿಂಗ್ ಕೋರ್ಸುಗಳಿಗೆ ಸಾಕಷ್ಟು ವಿಚಾರಣೆಗಳು ಬಂದವು. ಕಾಲೇಜಿನ ಪ್ರವೇಶ ನಿರ್ದೇಶಕಿ ಸೋಮೇಶ್ವರಿ ರಾಜ್ (ಪ್ರವೇಶ ನಿರ್ದೇಶಕರು) ತಮಗೆ ಮೇಳದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದ್ದಾಗಿ ಹೇಳಿಕೊಂಡರು.
ಬೆಂಗಳೂರು, ಏಪ್ರಿಲ್ 6: ಕರ್ನಾಟಕದ ಹಲವು ಶಿಕ್ಷಣ ಸಂಸ್ಥೆಗಳು ಇವತ್ತು ಮುಕ್ತಾಯಗೊಳ್ಳುತ್ತಿರುವ ಟಿವಿ9 ಶಿಕ್ಷಣ ಮೇಳದಲ್ಲಿ (TV9 Education Summit 2025) ಪಾಲ್ಗೊಂಡವು. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಈ ಮೇಳದಲ್ಲಿ ಕರ್ನಾಟಕ ಕಾಲೇಜ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್, ಪಿಇಎಸ್ ಎಂಜಿನಿಯರಿಂಗ್ ಕಾಲೇಜು, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಸಂಸ್ಥೆಗಳು ತಾವು ಆಫರ್ ಮಾಡುತ್ತಿರುವ ಕೋರ್ಸ್ಗಳ ಬಗ್ಗೆ ಟಿವಿ9 ಜೊತೆ ಹಂಚಿಕೊಂಡವು. ಕರ್ನಾಟಕ ಕಾಲೇಜ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ಸಂಸ್ಥೆಯ ಪ್ರವೇಶ ನಿರ್ದೇಶಕರಾದ ಸೋಮೇಶ್ವರಿ ರಾಜ್ ಅವರು ವಿವಿಧ ಎಂಜಿನಿಯರಿಂಗ್, ಮ್ಯಾನೇಜ್ಮೆಂಟ್ ಮತ್ತು ನರ್ಸಿಂಗ್ ಕೋರ್ಸ್ಗಳ ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಶ್ರುತಿ ಅವರು ಓಪನ್ ವಿವಿಯ ವಿವಿಧ ಕೋರ್ಸ್ಗಳ ಬಗ್ಗೆ ವಿವರಿಸಿದರು. ಮೈಸೂರಿನಲ್ಲಿರುವ ಕೇಂದ್ರ ಕಚೇರಿ ಮತ್ತು ರಾಜ್ಯದಾದ್ಯಂತ ಆರು ಪ್ರಾದೇಶಿಕ ಕೇಂದ್ರಗಳ ಬಗ್ಗೆಯೂ ಮಾಹಿತಿ ನೀಡಲಾಯಿತು. ಪಿ.ಇ.ಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್ (ಮಂಡ್ಯ)ನ ಪ್ರತಿನಿಧಿಗಳು ಕೂಡ ಭಾಗವಹಿಸಿದ್ದು, ಅವರು ಮೇಳದಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದ್ದಾರೆ ಎಂದು ಹೇಳಿದರು.
ಟಿವಿ9 ಕನ್ನಡ ಆಯೋಜಿಸಿದ ಈ ರಾಜ್ಯಮಟ್ಟದ ಶಿಕ್ಷಣ ಮೇಳದಲ್ಲಿ ಸಾಕಷ್ಟು ಜನರು ಭಾಗವಹಿಸಿದ್ದು, ಕಾಲೇಜುಗಳಿಗೆ ಇದು ಉತ್ತಮ ಅವಕಾಶವಾಗಿತ್ತು.
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ