Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಸೌಧದ ಶಾಶ್ವತ ವರ್ಣರಂಜಿತ ದೀಪಾಲಂಕಾರ ನೋಡಿ

ವಿಧಾನಸೌಧದ ಶಾಶ್ವತ ವರ್ಣರಂಜಿತ ದೀಪಾಲಂಕಾರ ನೋಡಿ

ವಿವೇಕ ಬಿರಾದಾರ
|

Updated on: Apr 06, 2025 | 10:00 PM

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧಕ್ಕೆ ಹೊಸ ಶಾಶ್ವತ ವರ್ಣರಂಜಿತ ದೀಪಾಲಂಕಾರವನ್ನು ಉದ್ಘಾಟಿಸಿದ್ದಾರೆ. ಶನಿವಾರ, ಭಾನುವಾರ ಮತ್ತು ವಿಶೇಷ ಸಂದರ್ಭಗಳಲ್ಲಿ 1063 ದೀಪಗಳು ಬೆಳಗಲಿವೆ. ಲೆಕ್ಸಾ ಲೈಟಿಂಗ್ಸ್ ಈ ಯೋಜನೆಯ ಗುತ್ತಿಗೆ ಪಡೆದಿದೆ. ಉದ್ಘಾಟನಾ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷರು, ಉಪಮುಖ್ಯಮಂತ್ರಿಗಳು ಮತ್ತು ಹಲವು ಸಚಿವರು ಭಾಗವಹಿಸಿದ್ದರು.

ವಿಧಾನಸೌಧದ ಶಾಶ್ವತ ವರ್ಣರಂಜಿತ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರವಿವಾರ (.06) ಉದ್ಘಾಟಿಸಿದರು. ಶನಿವಾರ, ಭಾನುವಾರ, ವಿಶೇಷ ಸಂದರ್ಭದಲ್ಲಿ ವಿದ್ಯುತ್ ದೀಪಗಳನ್ನು ಚಾಲು ಮಾಡಲಾಗುತ್ತದೆ. ವಿಧಾನಸೌಧದವನ್ನು ವಿದ್ಯುತ್​ ದೀಪದಿಂದ ಅಲಂಕಾರ ಮಾಡಲು ಸುಮಾರು 1,063 ವಿದ್ಯುತ್ ದೀಪಗಳನ್ನು ಬಳಸಲಾಗಿದೆ. ಲೆಕ್ಸಾ ಲೈಟಿಂಗ್ಸ್​ಗೆ ಶಾಶ್ವತ ವಿದ್ಯುತ್ ದೀಪಾಲಂಕಾರದ ಗುತ್ತಿಗೆ ನೀಡಲಾಗಿದೆ. ವಿದ್ಯುತ್​ ದೀಪಾಲಂಕಾರ ಉದ್ಘಾಟನಾ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ಯುಟಿ ಖಾದರ್, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಹೆಚ್.ಕೆ.ಪಾಟೀಲ್, ಜಾರ್ಜ್, ಸಿಎಸ್ ಶಾಲಿನಿ ಉಪಸ್ಥಿತರಿದ್ದರು.