AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kidney Stone: ಮೂತ್ರಪಿಂಡದಲ್ಲಿ ಕಲ್ಲು ಇದೆ ಎಂದು ತಿಳಿಯುವುದು ಹೇಗೆ? ಈ ಲಕ್ಷಣಗಳೇ ಸಮಸ್ಯೆಗೆ ಮುನ್ನೆಚ್ಚರಿಕೆ

Health Tips: ಮೂತ್ರದಲ್ಲಿ ಕ್ಯಾಲ್ಸಿಯಂ, ಆಕ್ಸಲೇಟ್ ಮತ್ತು ಯೂರಿಕ್ ಆಮ್ಲದ ಮಟ್ಟ ಹೆಚ್ಚಿದ್ದರೆ ಅವು ಸ್ವಾಭಾವಿಕವಾಗಿ ಹೊರಗೆ ಹೋಗುವುದಿಲ್ಲ. ಅವು ಮೂತ್ರದಲ್ಲಿ ಸಂಗ್ರಹವಾಗಿ ನಂತರದ ದಿನಗಳಲ್ಲಿ ಕಲ್ಲುಗಳನ್ನು ರೂಪಿಸುತ್ತವೆ.

Kidney Stone: ಮೂತ್ರಪಿಂಡದಲ್ಲಿ ಕಲ್ಲು ಇದೆ ಎಂದು ತಿಳಿಯುವುದು ಹೇಗೆ? ಈ ಲಕ್ಷಣಗಳೇ ಸಮಸ್ಯೆಗೆ ಮುನ್ನೆಚ್ಚರಿಕೆ
ಸಾಂಕೇತಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Jul 22, 2021 | 7:53 AM

ಜೀವನಶೈಲಿಯಲ್ಲಿನ ಬದಲಾವಣೆ, ಡಯಟ್ ಮುಂತಾದವು ಇತ್ತೀಚೆಗೆ ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಹೆಚ್ಚುತ್ತಿದೆ. ಸಾಕಷ್ಟು ನೀರು ಕುಡಿಯದಿರುವುದು, ಕ್ಯಾಲ್ಸಿಯಂ ಅಂಶದ ಹೆಚ್ಚಳ, ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸದಿರುವುದು ಮತ್ತು ಹೆಚ್ಚು ಔಷಧಿ ತೆಗೆದುಕೊಳ್ಳುವುದರಿಂದ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗಬಹುದು. ಮೂತ್ರದಲ್ಲಿ ಕ್ಯಾಲ್ಸಿಯಂ, ಆಕ್ಸಲೇಟ್ ಮತ್ತು ಯೂರಿಕ್ ಆಮ್ಲದ ಮಟ್ಟ ಹೆಚ್ಚಿದ್ದರೆ ಅವು ಸ್ವಾಭಾವಿಕವಾಗಿ ಹೊರಗೆ ಹೋಗುವುದಿಲ್ಲ. ಅವು ಮೂತ್ರದಲ್ಲಿ ಸಂಗ್ರಹವಾಗಿ ನಂತರದ ದಿನಗಳಲ್ಲಿ ಕಲ್ಲುಗಳನ್ನು ರೂಪಿಸುತ್ತವೆ. ಆದಾಗ್ಯೂ ಮೊದಲೇ ಈ ಕಲ್ಲು ಇರುವುದು ಪತ್ತೆಯಾದರೆ ಮೂತ್ರಪಿಂಡದ ಕಲ್ಲುಗಳನ್ನು(Kidney Stone)  ಬಹಳ ಸುಲಭವಾಗಿ ಹೊರತೆಗೆಯಬಹುದು. ಇಲ್ಲದಿದ್ದರೆ ನೋವು ಉಲ್ಬಣಗೊಳ್ಳುತ್ತದೆ. ಹೇರಿಗೆ ನೋವಿನಂತೆಯೇ ಮೂತ್ರಪಿಂಡದಲ್ಲಿ ಕಲ್ಲು ಆದಾಗ ನೋವು ಕಾಣಿಸಿಕೊಳ್ಳುತ್ತದೆ ಎಂಬುವುದು ತಜ್ಞರ ಮಾತು. ಆದರೆ ಇದರಿಂದ ಮುಂಜಾಗೃತೆ ವಹಿಸಲು ಅಥವಾ ಆರಂಭದ ಹಂತದಲ್ಲಿಯೇ ಈ ಸಮಸ್ಯೆ ಬಗ್ಗೆ ಅರಿಯಲು ಇಲ್ಲಿದೆ ಸರಳ ವಿಧಾನ

* ಮೂತ್ರ ವಿಸರ್ಜನೆಯ ಸಮಯದಲ್ಲಿ ವಾಸನೆ ಅಧಿಕವಾಗಿದ್ದರೆ, ಮೂತ್ರನಾಳದಲ್ಲಿ ಕಲ್ಲುಗಳಿವೆ ಎಂದು ತಿಳಿಯಬಹುದು, ಮೂತ್ರದ ಬಣ್ಣವು ಕೂಡ ಈ ಸಂದರ್ಭದಲ್ಲಿ ಬದಲಾಗುತ್ತದೆ.

* ಕೆಲವು ಸಂದರ್ಭಗಳಲ್ಲಿ ಮೂತ್ರವಿಸರ್ಜನೆ ಮಾಡುವಾಗ ರಕ್ತ ಹೊರಬಂದಂತಾಗುತ್ತದೆ. ಅಂತಹ ರೋಗಲಕ್ಷಣ ಕಾಣಿಸಿಕೊಂಡರೆ ತಕ್ಷಣ ಎಚ್ಚರಿಕೆ ವಹಿಸಬೇಕು.

* ಮೂತ್ರಪಿಂಡದ ಕಲ್ಲುಗಳಿರುವ ಜನರಿಗೆ ಬೆನ್ನು ನೋವು ಇರುತ್ತದೆ. ಆದ್ದರಿಂದ ನೀವು ಹೆಚ್ಚು ದಿನಗಳವರೆಗೆ ಬೆನ್ನು ನೋವಿನಿಂದ ಬಳಲುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

* ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರೆ, ಕೆಲವರಿಗೆ ಜ್ವರ ಬರುತ್ತದೆ. ಜ್ವರ ಆಗಾಗ್ಗೆ ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

* ಬೆನ್ನಿನಲ್ಲಿ ಇರುವಂತೆಯೇ ಹೊಟ್ಟೆಯ ಕೆಳಭಾಗದ ಎರಡೂ ಬದಿಗಳಲ್ಲಿ ನೋವು ಇರುತ್ತದೆ.

* ಮೂತ್ರಪಿಂಡದಲ್ಲಿ ಕಲ್ಲುಗಳಿರುವ ಕೆಲವರಿಗೆ ವಾಂತಿಯಾಗುವುದು ಅಥವಾ ವಾಕರಿಕೆಯಾಗುವ ಸಾಧ್ಯತೆ ಇದೆ. ಕೆಲವು ವಸ್ತುಗಳ ವಾಸನೆಯನ್ನು ತೆಗೆದುಕೊಂಡಾಗ ವಾಕರಿಕೆ ಬಂದಂತಾಗುತ್ತದೆ. ಆದ್ದರಿಂದ ನೀವು ಈ ರೀತಿಯ ರೋಗಲಕ್ಷಣವನ್ನು ಅನುಭವಿಸಿದರೆ, ಕೂಡಲೇ ಸ್ಕ್ಯಾನಿಂಗ್ ಮಾಡಿಸಿಕೊಳ್ಳಿ ಮತ್ತು ವೈದ್ಯರ ಸಲಹೆ ಪಡೆಯಿರಿ.

ಇದನ್ನೂ ಓದಿ: Liver Health: ಪಿತ್ತಜನಕಾಂಗದ ಆರೋಗ್ಯವನ್ನು ಕಾಪಾಡಲು ವಾರದ 7 ದಿನವನ್ನು ಬಳಸಿ; ಆಹಾರದಲ್ಲಿನ ಈ ಕ್ರಮ ಯಕೃತ್ತಿನ ಕಾಯಿಲೆಯಿಂದ ನಿಮ್ಮನ್ನು ದೂರ ಇಡುತ್ತದೆ

Health Benefits: ಕಿಡ್ನಿ ಸಮಸ್ಯೆ ಉಂಟಾದ ಮೇಲೆ ಪರಿಹಾರ ಹುಡುಕುವ ಬದಲು, ಪ್ರತಿದಿನ ಡಿಟಾಕ್ಸ್​ ಮಾಡಿ ಕುಡಿಯಿರಿ