ಮೆಂತ್ಯೆ ನೀರು ಕುಡಿಯುವ ಅಭ್ಯಾಸ ಒಳ್ಳೆಯದು; ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ

ಪ್ರತಿನಿತ್ಯ ಬಳಸುವ ಮೆಂತ್ಯೆಯಲ್ಲಿ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿದೆ ಎಂಬುದು ನಿಮಗೆ ತಿಳಿದಿದೆಯೇ?

ಮೆಂತ್ಯೆ ನೀರು ಕುಡಿಯುವ ಅಭ್ಯಾಸ ಒಳ್ಳೆಯದು; ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ಮೆಂತ್ಯೆ ನೀರು
Follow us
TV9 Web
| Updated By: ಆಯೇಷಾ ಬಾನು

Updated on: Jul 23, 2021 | 6:46 AM

ಸಾಮಾನ್ಯವಾಗಿ ಅಡುಗೆ ಪದಾರ್ಥಗಳಲ್ಲಿ ಮೆಂತ್ಯೆಯನ್ನು ಬಳಸುತ್ತೇವೆ. ನಾವು ಪ್ರತಿನಿತ್ಯ ಬಳಸುವ ಆಹಾರ ಪದಾರ್ಥಗಳಲ್ಲಿ ಪೌಷ್ಟಿಕ ಗುಣಗಳಿರುತ್ತವೆ. ಆಹಾರ ಸೇವಿಸುವ ಜತೆಗೆ ಅದರಲ್ಲಿರುವ ಪೌಷ್ಟಿಕಾಂಶದ ಬಗ್ಗೆ ತಿಳಿಯಲೇಬೇಕು. ಹಾಗಿರುವಾಗ ಪ್ರತಿನಿತ್ಯ ಬಳಸುವ ಮೆಂತ್ಯೆಯಲ್ಲಿ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಈ ಕುರಿತಾದ ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ಹೊಟ್ಟೆಯಲ್ಲಿ ಆರೋಗ್ಯ ಸಮಸ್ಯೆ ಕಂಡು ಬಂದಾಗ ಮೆಂತ್ಯೆ ನೀರನ್ನು ಸೇವಿಸುತ್ತಾರೆ. ಮೆಂತ್ಯೆ ನೀರು ಸೇವಿಸಲು ಕಹಿಯಾಗಿದ್ದರೂ ಆರೋಗ್ಯಕ್ಕೆ ಉತ್ತಮ. ಇದರಲ್ಲಿರುವ ಕಹಿ ಅಂಶ ದೇಹದಲ್ಲಿನ ಸೋಂಕನ್ನು ನಾಶ ಪಡಿಸಲು ಸಹಾಯ ಮಾಡುತ್ತದೆ. ಹೊಟ್ಟೆ ನೋವು, ಅದರಲ್ಲಿಯೂ ಮುಖ್ಯವಾಗಿ ಯುವತಿಯರಲ್ಲಿ ಋತು ಚಕ್ರದ ಸಮಯದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ನೋವಿಗೆ ಮೆಂತ್ಯೆ ನೀರು ಸೇವಿಸುವುದು ಉತ್ತಮ ಔಷಧ.

ಪಾತ್ರೆಯಲ್ಲಿ ಮೆಂತ್ಯೆ ಬೀಜ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಅದನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ. ಅರ್ಧ ಚಮಚ ಮೆಂತ್ಯೆ ಪುಡಿಯನ್ನು ಒಂದು ಲೋಟ ನೀರಿಗೆ ಬೆರಸಿ ಕುಡಿಯುವ ಅಭ್ಯಾಸ ಮಾಡಿ. ಬೆಳಗ್ಗೆ ಎದ್ದ ತಕ್ಷಣ ಈ ನೀರನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಜತೆಗೆ ಹೊಟ್ಟೆ ನೋವು ನಿವಾರಣೆಗೆ ಸಹಾಯಕವಾಗಿದೆ.

ಮೆಂತ್ಯೆ ನೀರು ಕುಡಿಯುವುದರಿಂದ ಆರೋಗ್ಯ ಪ್ರಯೋಜನಗಳು ಮೆಂತ್ಯೆ ನೀರು ಕುಡಿಯುವುದರಿಂದ ಹೊಟ್ಟೆ ಆರೋಗ್ಯವಾಗಿರುತ್ತದೆ. ಮೆಂತ್ಯೆ ಸೇವಿಸುವುದರಿಂದ ತೂಕ ನಿಯಂತ್ರಣ ಮಾಡಿಕೊಳ್ಳಬಹುದು. ಹೆಚ್ಚು ಕ್ಯಾಲೊರಿ ಹೊಂದಿರುವ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ದೇಹದ ತೂಕ ಹೆಚ್ಚಳವಾಗುತ್ತದೆ.

ಮೆಂತ್ಯೆ ತಲೆ ಕೂದಲು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿರುವ ಪೋಷಕಾಂಶಗಳಿಂದ ಇದು ಕೂದಲನ್ನು ದಪ್ಪವಾಗಿಡಲು ಸಹಾಯ ಮಾಡುತ್ತದೆ. ಜತೆಗೆ ತಲೆಹೊಟ್ಟು, ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದು.

ಮೆಂತ್ಯೆ ನೀರು ನಿಮ್ಮ ದೇಹದಲ್ಲಿನ ಹಾನಿಕಾರಕ ವಿಷವನ್ನು ತೆಗೆದು ಹಾಕುತ್ತದೆ. ಜತೆಗೆ ಮಲಬದ್ಧತೆ, ಅಜೀರ್ಣದಂತಹ ಸಮಸ್ಯೆಗಳನ್ನು ತೆಗೆದು ಹಾಕುತ್ತದೆ.

ಮೆಂತ್ಯೆ ನೀರು ಮಧುಮೇಹ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ತುಂಬಾ ಒಳ್ಳೆಯದು. ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೆಂತ್ಯೆ ಬೀಜಗಳು ಅಮೈನೋ ಆಮ್ಲಗಳು ಕಂಡು ಬರುವುದರಿಂದ ಇದು ದೇಹದಲ್ಲಿ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ

ಚರ್ಮದ ಕಪ್ಪು ಕಲೆಗಳು, ಮೊಡವೆಗಳನ್ನು ಹೋಗಲಾಡಿಸುತ್ತದೆ. ಮೆಂತ್ಯೆ ನೀರು ಸೇವನೆಯಿಂದ ಹೃದಯಾಘಾತ ಸಮಸ್ಯೆ ಕಾಡುವುದು ಕಡಿಮೆ. ಹಾಗಾಗಿ ಮೆಂತ್ಯೆ ನೀರು ಸೇವನೆಯನ್ನು ಅಭ್ಯಾಸದಲ್ಲಿಟ್ಟುಕೊಳ್ಳಿ

ಇದನ್ನೂ ಓದಿ:

Health Tips: ಉರಿಯೂತ ಸಮಸ್ಯೆಯನ್ನು ಆಹಾರದಿಂದ ಸೋಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

Health Tips: ಬೊಜ್ಜು ಕರಗಿಸಲು ಮೆಂತ್ಯ ಉಪಯೋಗಿಸಿ; ಆರೋಗ್ಯಕರ ಜೀವನಕ್ಕೆ ಮನೆಯಲ್ಲೇ ಮದ್ದು

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?