Health Tips: ಉರಿಯೂತ ಸಮಸ್ಯೆಯನ್ನು ಆಹಾರದಿಂದ ಸೋಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

ದೇಹದಲ್ಲಿ ನೀರಿನ ಅಂಶ ಕಡಿಮೆಯಿದ್ದಾಗ ಉರಿಯೂತದಂತಹ ಸಮಸ್ಯೆ ಕಂಡುಬರುವುದು ಹೆಚ್ಚು. ಜನರು ಪ್ರತಿನಿತ್ಯ ನಾಲ್ಕು ಲೀಟರ್​ ನೀರನ್ನು ಕುಡಿಯಲು ವೈದ್ಯರು ಸೂಚಿಸುತ್ತಾರೆ.

Health Tips: ಉರಿಯೂತ ಸಮಸ್ಯೆಯನ್ನು ಆಹಾರದಿಂದ ಸೋಲಿಸುವುದು ಹೇಗೆ? ಇಲ್ಲಿದೆ ಮಾಹಿತಿ
ಉರಿಯೂತ ಸಮಸ್ಯೆ
Follow us
TV9 Web
| Updated By: shruti hegde

Updated on:Jul 02, 2021 | 5:15 PM

ದೀರ್ಘಕಾಲದ ಉರಿಯೂತ ಸಮಸ್ಯೆಯು ಆರೋಗ್ಯವನ್ನು ಹಾನಿಗೊಳಿಸುತ್ತದೆ. ದೇಹದಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾ ಮತ್ತು ವೈರಸ್​ಗಳು ಮಾನಸಿಕ ಆರೋಗ್ಯವನ್ನೂ ಕಿತ್ತುಕೊಳ್ಳುತ್ತದೆ. ಇದರಿಂದ ಆತಂಕ, ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಕೊವಿಡ್​ನಿಂದ ಚೇತರಿಸಿಕೊಂಡ ಬಳಿಕವೂ ಸಹ ಆರೋಗ್ಯದಲ್ಲಿ ಉರಿಯೂತದಂತಹ ಸಮಸ್ಯೆಗಳು ಕಾಡುತ್ತಿರಬಹುದು. ಹೀಗಿರುವಾಗ ಆಹಾರದಿಂದಲೇ ಉರಿಯೂತ ಸಮಸ್ಯೆನ್ನು ನಿಯಂತ್ರಣಕ್ಕೆ ತರುವುದು ಹೇಗೆ ಎಂಬುದರ ಕುರಿತಾಗಿ ಆಯುರ್ವೇದ ತಜ್ಞರಾದ ಡಾ.ವಿಷ್ಣುರಾಜ್​​ ಪ್ರಕಾಶ್​ ಒಂದಿಷ್ಟು ಸಲಹೆಗಳನ್ನು ನಿಡಿದ್ದಾರೆ. ವೈದ್ಯರು ಹೇಳಿರುವ ಮಾಹಿತಿಯೊಂದಿಗೆ ಇಂಡಿಯಾ ಟು ಡೇ ವರದಿ ಮಾಡಿದೆ.

ನೀರು ದೇಹದಲ್ಲಿ ನೀರಿನ ಅಂಶ ಕಡಿಮೆಯಿದ್ದಾಗ ಉರಿಯೂತದಂತಹ ಸಮಸ್ಯೆ ಕಂಡುಬರುವುದು ಹೆಚ್ಚು. ಜನರು ಪ್ರತಿನಿತ್ಯ ನಾಲ್ಕು ಲೀಟರ್​ ನೀರನ್ನು ಕುಡಿಯಲು ವೈದ್ಯರು ಸೂಚಿಸುತ್ತಾರೆ. ಉರಿಯೂತವನ್ನು ನಿಯಂತ್ರಣಕ್ಕೆ ತರಲು ನೀರಿಗಿಂತ ಒಳ್ಳೆಯ ಆಹಾರ ಯಾವುದೂ ಇಲ್ಲ. ನೀರಿನೊಂದಿಗೆ ಐದು ತುಳಸಿ ಎಲೆ, ಎರಡು ಶುಂಠಿ ಚೂರು ಅಥವಾ ಎರಡು ಅರಿಶಿಣ ಚೂರು ಅಥವಾ ಪುಡಿಯನ್ನು ಬೆರೆಸಬಹುದು ಎಂದು ವೈದ್ಯರು ಹೇಳುತ್ತಾರೆ. ಇದು ರೋಗ-ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.

ನೆಲ್ಲಿಕಾಯಿ(ಆಮ್ಲ) ಬೆಟ್ಟದ ನೆಲ್ಲಿಕಾಯಿಯಲ್ಲಿ ಆಂಟಿ-ಆಕ್ಸಿಡೆಂಟ್​ ಮತ್ತು ವಿಟಮಿನ್​ ಸಿ ಸಮೃದ್ಧವಾಗಿರುತ್ತದೆ. ಇದು ದೇಹದಲ್ಲಿರುವ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆಯುರ್ವೇದದ ಪ್ರಕಾರ ಆಮ್ಲ, ಅಂಗಾಶಂಗಳನ್ನು ಸುಧಾರಿಸುತ್ತದೆ. ಬೆಳಗ್ಗೆಯ ಹೊತ್ತಿನಲ್ಲಿ ಆಮ್ಲವನ್ನು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಮತ್ತು ರೋಗ-ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ತರಕಾರಿಗಳನ್ನು ಸೇವಿಸಿ ಸೋರೆಕಾಯಿ, ಕುಂಬಳಕಾಯಿ, ಚೀನೀಕಾಯಿ, ಪಾಲಾಕ್ ಸೊಪ್ಪು, ಮೆಂತ್ಯೆ, ಶುಂಠಿ, ಅರಿಶಿಣ, ಜಾಯಿಕಾಯಿಗಳಂತಹ ಆಹಾರ ಪದಾರ್ಥಗಳು ಉರಿಯೂತವನ್ನು ನಿಯಂತ್ರಿಸಲು ಸಹಾಯಕವಾಗಿದೆ. ಜತೆಗೆ ದಾಳಿಂಬೆ ಹಣ್ಣು ಸೇವನೆಯಿಂದ ದೇಹದಲ್ಲಿನ ಉರಿಯೂತ ಸಮಸ್ಯೆಯನ್ನು ಹೋಗಲಾಡಿಸಬಹುದಾಗಿದೆ.

ಉರಿಯೂತ ಸಮಸ್ಯೆಗೆ ಕಾರಣವಾಗುವ ಆಹಾರ ಪದಾರ್ಥಗಳು ಹಾಲು-ಮೊಸರು ಆಯುರ್ವೇದದ ಪ್ರಕಾರ ಹಾಲು ಮತ್ತು ಮೊಸರು ಸೇವನೆಯು ಉರಿಯೂತ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಆದಷ್ಟು ಅವಗಳನ್ನು ಹೆಚ್ಚಾಗಿ ಸೇವಿಸುವುದನ್ನು ತಪ್ಪಿಸಿ.

ಮಾಂಸ ಮಾಂಸದಲ್ಲಿ ಹೆಚ್ಚಾಗಿ ಸ್ಯಾಚುರೇಟ್​ ಮತ್ತು ಕೊಬ್ಬಿನ ಅಂಶ ಹೆಚ್ಚಾಗಿ ಕಂಡು ಬರುತ್ತದೆ. ಇದು ದೆಹದಲ್ಲಿ ಉರಿಯೂತ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದ್ದರಿಂದ ಮಾಂಸಾಹಾರಿಗಳು ಆದಷ್ಟು ಮಾಂಸ ಸೇವನೆಯನ್ನು ಕಡಿಮೆ ಮಾಡಿಕೊಳ್ಳಿ. ಇದರಿಂದ ಉರಿಯೂತ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಬಹುದಾಗಿದೆ.

ಮಸಾಲೆ ಪದಾರ್ಥ, ಹುಳಿ-ಉಪ್ಪು-ಖಾರ ಈ ಆಹಾರ ಪದಾರ್ಥಗಳು ಉರಿಯೂತವನ್ನು ಹೆಚ್ಚಿಸುತ್ತದೆ. ರುಚಿಯಾಗಿದೆ ಎಂಬ ಕಾರಣಕ್ಕೆ ಮಸಾಲಾಯುಕ್ತ ಪದಾರ್ಥಗಳನ್ನು ಹೆಚ್ಚು ಸೇವಿಸುವುದರಿಂದ ಉರಿಯೂತ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ

ಇದನ್ನೂ ಓದಿ:

Health Tips: ನೇರಳೆ ಹಣ್ಣಿನ ಬೀಜದಿಂದಲೂ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಹುಣಸೆ ಬೀಜ: ನೀವು ಮೊಣಕಾಲು ನೋವು ಮತ್ತು ಕೀಲು ನೋವಿನಿಂದ ಬಳಲುತ್ತಿದ್ದೀರಾ?

Published On - 1:57 pm, Fri, 2 July 21

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ