Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಣಸೆ ಬೀಜ: ನೀವು ಮೊಣಕಾಲು ನೋವು ಮತ್ತು ಕೀಲು ನೋವಿನಿಂದ ಬಳಲುತ್ತಿದ್ದೀರಾ?

Tamarind Seeds: ಇದರಲ್ಲಿರುವ ಔಷಧೀಯ ಗುಣಗಳು ಮೂಳೆಗಳನ್ನು ಬಲಪಡಿಸುತ್ತದೆ. ಜತೆಗೆ ಅತಿಸಾರ, ಚರ್ಮ ರೋಗ, ಹಲ್ಲಿನ ತೊಂದರೆ ಮತ್ತು ಅಜೀರ್ಣ ಸಮಸ್ಯೆಗಳನ್ನು ಗುಣಪಡಿಸುವ ಔಷಧೀಯ ಗುಣಗಳನ್ನು ಹೊಂದಿದೆ.

ಹುಣಸೆ ಬೀಜ: ನೀವು ಮೊಣಕಾಲು ನೋವು ಮತ್ತು ಕೀಲು ನೋವಿನಿಂದ ಬಳಲುತ್ತಿದ್ದೀರಾ?
ಹುಣಸೆ ಬೀಜಗಳು
Follow us
TV9 Web
| Updated By: ಆಯೇಷಾ ಬಾನು

Updated on: Jun 23, 2021 | 9:58 AM

ಸಾಮಾನ್ಯವಾಗಿ ಹುಣಸೆ ಹಣ್ಣನ್ನು ಅಡುಗೆಯಲ್ಲಿ ಬಳಸುತ್ತೇವೆ. ಜತೆಗೆ ಮರದಲ್ಲಿ ಬಿಟ್ಟಿರುವ ಹುಣಸೆ ಕಾಯಿಯಿಂದ ಚಟ್ನಿ, ಉಪ್ಪಿನಕಾಯಿ ಹೀಗೆ ನಾನಾವಿಧದ ಅಡುಗೆ ಪದಾರ್ಥದಲ್ಲಿ ಬಳಸುತ್ತೇವೆ. ಹಾಗೆಯೇ ಹುಣಸೆ ಬೀಜವನ್ನು ಬಿಸಾಡುವುದು ಸಾಮಾನ್ಯ. ಹುಣಸೇ ಬೀಜದಲ್ಲಿರುವ ಪೌಷ್ಟಿಕಾಂಶ ನಿಮ್ಮ ದೇಹವನ್ನು ಸದೃಢವಾಗಿರಿಸಲು ಸಹಾಯ ಮಾಡುತ್ತದೆ. ಹಾಗೆಯೇ ಗಂಟು ನೋವು, ಕಾಲು ನೋವುಗಳನ್ನು ಪರಿಹರಿಸುವ ಶಕ್ತಿಯನ್ನು ಹೊಂದಿದೆ.

ಕೆಲವರ ಮನೆಯಲ್ಲಿ ಹುಣಸೆ ಬೀಜಗಳನ್ನು ಸಂಗ್ರಹಿಸಿ ಇಡುತ್ತಾರೆ. ಜತೆಗೆ ಅವುಗಳನ್ನು ಉತ್ತಮ ಬೆಲೆಗೆ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಇನ್ನು ಕೆಲವರ ಮನೆಯಲ್ಲಿ ಬೀಜವನ್ನು ಬೆಂಕಿಯಲ್ಲಿ ಸುಟ್ಟು, ಹೊರಗಿನ ಕೆಂಪು ಬಣ್ಣದ ಸಿಪ್ಪೆ ಒಡೆದು ಒಳಗಿನ ಗಟ್ಟಿ ಬೀಜವನ್ನು ತಿನ್ನುತ್ತಾರೆ. ಇನ್ನು ಕೆಲವರು ಹಣ್ಣಿನ ಸ್ವಾದ ಪಡೆದು ಬೀಜವನ್ನು ಬಿಸಾಡುತ್ತಾರೆ. ಹಾಗಿದ್ದರೆ ಹುಣಸೆ ಹಣ್ಣಿನ ಬೀಜದ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ.

ಕೀಲು ನೋವುಗಳಿಂದ ಬಳಲುತ್ತಿರುವವರು ಹುಣಸೆ ಹಣ್ಣಿನ ಬೀಜ ಉತ್ತಮ ಔಷಧವಾಗಿದೆ. ಹುಣಸೆ ಬೀಜಗಳನ್ನು ಚೆನ್ನಾಗಿ ತೊಳೆದು 2-3 ದಿನಗಳ ಕಾಲ ನೀರಿನಲ್ಲಿ ನೆನೆಸಿಡಿ. ಪ್ರತಿನಿತ್ಯವೂ ಸಹ ನೀರು ಬದಲಾಯಿಸುತ್ತಿರಿ. ನಂತರ ಮೇಲಿನ ಕೆಂಪು ಬಣ್ಣದ ಸಿಪ್ಪೆಯನ್ನು ಬಿಡಿಸಿ, ಒಳಗಿರುವ ಮತ್ತೊಂದು ಬೀಜವನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ನೆರಳಿನಲ್ಲಿ ಒಣ ಹಾಕಿ. ನಂತರ ಒಣಗಿದ ಬೀಜಗಳನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ ಗಾಜಿನ ಪಾತ್ರೆಯಲ್ಲಿ ಶೇಖರಿಸಿಟ್ಟುಕೊಳ್ಳಿ. ನೀರಿನೊಂದಿಗೆ ಅಥವಾ ಹಾಲಿನೊಂದಿಗೆ ಅರ್ಧ ಚಮಚ ಪುಡಿಯನ್ನು ಸೇವಿಸುವುದರಿಂದ ಕೀಲು ನೋವು ಅಥವಾ ಮೊಣಕಾಲು ನೋವು ಬಹು ಬೇಗ ಗುಣವಾಗುತ್ತದೆ.

3-4 ವಾರಗಳವರೆಗೆ ನಿಮಗೆ ಚೇತರಿಕೆಯ ಗುಣಲಕ್ಷಣಗಳು ಕಂಡು ಬರುತ್ತವೆ. ಇದರಲ್ಲಿರುವ ಔಷಧೀಯ ಗುಣಗಳು ಮೂಳೆಗಳನ್ನು ಬಲಪಡಿಸುತ್ತದೆ. ಜತೆಗೆ ಅತಿಸಾರ, ಚರ್ಮ ರೋಗ, ಹಲ್ಲಿನ ತೊಂದರೆ ಮತ್ತು ಅಜೀರ್ಣ ಸಮಸ್ಯೆಗಳನ್ನು ಗುಣಪಡಿಸುವ ಔಷಧೀಯ ಗುಣಗಳನ್ನು ಹೊಂದಿದೆ. ಕೆಮ್ಮು, ಗಂಟಲು ನೋವು, ಮಧುಮೇಹ, ಹೃದ್ರೋಗಗಳಿಗೂ ಇದು ಉತ್ತಮ ಔಷಧಿಯಾಗಿದೆ. ಹುಣಸೆ ಹಣ್ಣನ್ನು ಸಾಮಾನ್ಯವಾಗಿ ಚಾಕಲೇಟ್​-ಬಿಸ್ಕೇಟ್​ ತಯಾರಿಸಲು ಬಳಸುತ್ತಾರೆ. ಅಂಟು ತಯಾರಿಕೆಯಲ್ಲಿಯೂ ಹುಣಸೆ ಹಣ್ಣನ್ನು ಬಳಸುತ್ತಾರೆ.

ಇದನ್ನೂ ಓದಿ:

ಹುಣಸೆ ಹಣ್ಣಿಗೆ ಬಂಪರ್ ಬೆಲೆ; ಕೊರೊನಾದಿಂದ ಕಂಗೆಟ್ಟ ರೈತರ ಮೊಗದಲ್ಲಿ ಮಂದಹಾಸ

ಆಯಾಸವಿಲ್ಲದೆ ಆದಾಯ ತರುವ ಹುಣಸೆ ಬೆಳೆಗೆ ರಾಜ್ಯದಾದ್ಯಂತ ಉತ್ತಮ ಬೇಡಿಕೆ

ಜಿಲ್ಲಾಧಿಕಾರಿ ಕಚೇರಿಯೆದುರು ನಮಾಜ್ ಮಾಡಿದ ವೃದ್ಧೆ; ಸೆಕ್ಯುರಿಟಿ ಸಸ್ಪೆಂಡ್
ಜಿಲ್ಲಾಧಿಕಾರಿ ಕಚೇರಿಯೆದುರು ನಮಾಜ್ ಮಾಡಿದ ವೃದ್ಧೆ; ಸೆಕ್ಯುರಿಟಿ ಸಸ್ಪೆಂಡ್
ಜಾಮ್‌ನಗರದ ಬಳಿ ವಾಯುಪಡೆಯ ಯುದ್ಧ ವಿಮಾನ ಪತನವಾದ ಕ್ಷಣ ಸಿಸಿಟಿವಿಯಲ್ಲಿ ಸೆರೆ
ಜಾಮ್‌ನಗರದ ಬಳಿ ವಾಯುಪಡೆಯ ಯುದ್ಧ ವಿಮಾನ ಪತನವಾದ ಕ್ಷಣ ಸಿಸಿಟಿವಿಯಲ್ಲಿ ಸೆರೆ
ಮಳೆಯಿಂದ ಕೆರೆಯಂತಾದ ಬೆಂಗಳೂರಿನ ಕಲ್ಯಾಣ ನಗರದ ಓಆರ್​ಆರ್​ ಸರ್ವಿಸ್ ರಸ್ತೆ
ಮಳೆಯಿಂದ ಕೆರೆಯಂತಾದ ಬೆಂಗಳೂರಿನ ಕಲ್ಯಾಣ ನಗರದ ಓಆರ್​ಆರ್​ ಸರ್ವಿಸ್ ರಸ್ತೆ
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ಗೆ ತಂಪೆರೆದ ಮಳೆ
ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ಗೆ ತಂಪೆರೆದ ಮಳೆ
ನಗರದಲ್ಲಿರುವ ಮರಗಳ ಸರ್ವೇ ಮಾಡಿಸಿದರೆ ಅಪಾಯಗಳನ್ನು ತಪ್ಪಿಸಬಹುದು
ನಗರದಲ್ಲಿರುವ ಮರಗಳ ಸರ್ವೇ ಮಾಡಿಸಿದರೆ ಅಪಾಯಗಳನ್ನು ತಪ್ಪಿಸಬಹುದು
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಗ್ರಾಮಸ್ಥರ ಪ್ರಶ್ನೆಗಳಿಗೆ ಲಕ್ಷ್ಮಿಹೆಬ್ಬಾಳ್ಕರ್ ಅವರಲ್ಲಿ ಉತ್ತರವಿರಲಿಲ್ಲ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಕೋಟೆನಾಡಲ್ಲಿ ನಾಳೆಯೂ ಅಗಲಿದೆಯಂತೆ ಮಳೆ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ವಿಡಿಯೋ
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್
ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್