Thyroid Patients: ಥೈರಾಯ್ಡ್ ಸಮಸ್ಯೆ ಇರುವವರು ಈ ಆಹಾರಗಳನ್ನು ಸೇವಿಸಲೇಬಾರದು! ಕಾರಣ ತಿಳಿಯಿರಿ
ಥೈರಾಯ್ಡ್ ಸಮಸ್ಯೆ ಹೊಂದಿರುವವರು ಆರೋಗ್ಯದ ಕುರಿತಾಗಿ ಹೆಚ್ಚಿನ ಕಾಳಜಿವಹಿಸಲೇಬೇಕು. ಇದು ತೂಕ ನಷ್ಟ, ನಿದ್ರಾಹೀನತೆ, ಬಾಯಾರಿಕೆ, ಅತಿಯಾದ ಬೆವರು, ದೌರ್ಬಲ್ಯ, ಆತಂಕವನ್ನು ಹೆಚ್ಚಿಸುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ.
ಆರೋಗ್ಯಕರ ಜೀವನ ಶೈಲಿಯಲ್ಲಿ ಉತ್ತಮವಾದ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥವನ್ನು ಸೇವಿಸುವುದು ಮುಖ್ಯ. ಆಹಾರ ಕ್ರಮ ಸರಿಯಾಗಿಲ್ಲದೆಯೇ ಅದೆಷ್ಟೋ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಈಗೀಗ ಸಾಮಾನ್ಯವೆಂಬಂತೆ ಥೈರಾಯ್ಡ್ ಸಮಸ್ಯೆ ಕಂಡು ಬರುತ್ತಿದೆ. ಥೈರಾಯ್ಡ್ ಗ್ರಂಥಿಯಲ್ಲಿನ ಹಾರ್ಮೋನ್ ನಮ್ಮ ದೇಹಕ್ಕೆ ಬಹಳ ಮುಖ್ಯ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ, ದೇಹವು ಸಣ್ಣ ಪ್ರಮಾಣದಲ್ಲಿ ಥೈರಾಯ್ಡ್ ಹಾರ್ಮೋನ್ ಉತ್ಪಾಸಿದಿಸಿದರೆ ಥೈರಾಯ್ಡ್ ಸಮಸ್ಯೆಗೆ ಕಾರಣವಾಗುತ್ತದೆ. ಪುರುಷರಿಗಿಂತ ಮಹಿಳೆಯಲ್ಲಿ ಥೈರಾಯ್ಡ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಗಂಟಲು ನೋವು, ಕೂದಲು ಉದುರುವ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿದ್ದರೆ ಅದು ಥೈರಾಯ್ಡ್ ಲಕ್ಷಣಗಳಾಗಿವೆ.
ಥೈರಾಯ್ಡ್ ಸಮಸ್ಯೆಯುಳ್ಳವರು ಈ ಕೆಳಗಿನ ಆಹಾರವನ್ನು ಸೇವಿಸಬಾರದು. ಇದು ಆರೋಗ್ಯ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಥೈರಾಯ್ಡ್ ಸಮಸ್ಯೆ ಹೊಂದಿರುವವರು ಆರೋಗ್ಯದ ಕುರಿತಾಗಿ ಹೆಚ್ಚಿನ ಕಾಳಜಿವಹಿಸಲೇಬೇಕು. ಇದು ತೂಕ ನಷ್ಟ, ನಿದ್ರಾಹೀನತೆ, ಬಾಯಾರಿಕೆ, ಅತಿಯಾದ ಬೆವರು, ದೌರ್ಬಲ್ಯ, ಆತಂಕವನ್ನು ಹೆಚ್ಚಿಸುತ್ತದೆ. ಇದು ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ.
ಎಲೆಕೋಸು, ಹೂಕೋಸು ಥೈರಾಯ್ಡ್ ಸಮಸ್ಯೆ ಹೊಂದಿರುವವರು ಹೂಕೋಸು, ಎಲೆಕೋಸನ್ನು ಸೇವಿಸಬಾರದು. ಇದರಲ್ಲಿರುವ ಗಿಟಾರ್ನಾಯ್ಡ್ಸ್ ಅಂಶವು ಥೈರಾಯ್ಡ್ ಸಮಸ್ಯೆಯ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಿರುವಾಗ ನೀವು ಈ ತರಕಾರಿಗಳನ್ನು ಹೆಚ್ಚು ಸೇವಿಸದಿರುವುದು ಉತ್ತಮ.
ಚಹಾ ಅಥವಾ ಕೆಫೀನ್ ಉತ್ಪನ್ನಗಳು ಚಹಾ ಅಥವಾ ಕೆಫೀನ್ ಉತ್ಪನ್ನಗಳು ಥೈರಾಯ್ಡ್ ಗ್ರಂಥಿಯ ಮೇಲೆ ಪರಿಣಾಮವನ್ನು ಬೀರುತ್ತವೆ. ನಿಮ್ಮ ರಕ್ತದಲ್ಲಿನ ಥೈರಾಯ್ಡ್ ಮಟ್ಟವನ್ನು ಕ್ರಮೇಣ ಹೆಚ್ಚಿಸುತ್ತದೆ. ಇದು ಹೆಚ್ಚಿನ ಗಂಟಲು ನೋವಿಗೆ ಕಾರಣವಾಗುತ್ತದೆ. ಹಾಗೂ ರೋಗಿಯ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ.
ಮಾಂಸಹಾರ ಸೇವನೆ ಕೆಂಪು ಮಾಂಸ ಸೇವನೆಯನ್ನು ತ್ಯಜಿಸಬೇಕು. ಇದು ಸ್ಯಾಚುರೇಟೆಡ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಥೈರಾಯ್ಡ್ ರೋಗಿಗಳಿಗೆ ಹೆಚ್ಚು ಹಾನಿ ಉಂಟು ಮಾಡುತ್ತದೆ. ಇದು ದೇಹದ ಉಷ್ಣತೆಯು ಅಸಹಜ ಮಟ್ಟಕ್ಕೆ ಏರಲು ಕಾರಣವಾಗುತ್ತದೆ. ಆದ್ದರಿಂದ ಮಾಂಸಹಾರವನ್ನು ಆದಷ್ಟು ತಪ್ಪಿಸುವುದು ಹೆಚ್ಚು ಸೂಕ್ತ.
ಸೋಯಾಬೀನ್ ಸೋಯಾಬೀನ್ ಇದು ದೇಹದಲ್ಲಿನ ಥೈರಾಯ್ಡ್ ಹಾರ್ಮೋನ್ ಉತ್ಪಾದನೆ ಹಾಗೂ ಅದಕ್ಕೆ ಸಂಬಂಧಿಸಿದ ಕಿಣ್ವಗಳ ಮೇಲೆ ಪರಿಣಾಮ ಬೀರುತ್ತದೆ. ಇದರಲ್ಲಿ ಕಂಡುಬರುವ ಗೈಟ್ರೋಗನ್ಗಳು ಥೈರಾಯ್ಡ್ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ ಈ ಆಹಾರ ಸೇವನೆಯನ್ನು ಆದಷ್ಟು ತಪ್ಪಿಸುವುದು ಉತ್ತಮ.
ಇದನ್ನೂ ಓದಿ:
ಹಲಸಿನ ಹಣ್ಣಿನ ಬೀಜದಲ್ಲಿ ಚಟ್ನಿ ಹೇಗೆ ಮಾಡುವುದು ಅಂತೀರಾ ನೀವೇ ನೋಡಿ
Health Tips: ನೇರಳೆ ಹಣ್ಣಿನ ಬೀಜದಿಂದಲೂ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?