AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲಿನೊಂದಿಗೆ ಈ ಕೆಲವು ಆಹಾರ ಪದಾರ್ಥಗಳನ್ನು ಮಿಶ್ರಣ ಮಾಡಿ ಸೇವಿಸಲೇಬಾರದು; ಯಾವುವು? ಮಾಹಿತಿ ಇಲ್ಲಿದೆ

ನಾಲಿಗೆಗೆ ರುಚಿ ನೀಡುವ ಕೆಲವು ಆಹಾರ ಪದಾರ್ಥಗಳು ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಹಾಗಾಗಿ ನಿಮ್ಮ ಆರೋಗ್ಯದ ಕುರಿತಾಗಿ ಹೆಚ್ಚು ಕಾಳಜಿವಹಿಸಿ.

ಹಾಲಿನೊಂದಿಗೆ ಈ ಕೆಲವು ಆಹಾರ ಪದಾರ್ಥಗಳನ್ನು ಮಿಶ್ರಣ ಮಾಡಿ ಸೇವಿಸಲೇಬಾರದು; ಯಾವುವು? ಮಾಹಿತಿ ಇಲ್ಲಿದೆ
ಹಾಲು
Follow us
TV9 Web
| Updated By: shruti hegde

Updated on: Jul 01, 2021 | 1:48 PM

ಪೌಷ್ಠಿಕಾಂಶಯುಕ್ತ ಅಹಾರವನ್ನು ನಾವು ಸೇವಿಸುವಾಗ ರುಚಿಕರವಾಗರುತ್ತದೆ ಎಂದು ವಿವಿಧ ಆಹಾರಗಳನ್ನು ಮಿಶ್ರಣ ಮಾಡಿ ಸೇವಿಸುತ್ತೇವೆ. ಮಿಲ್ಕ್​ಶೇಕ್​, ಸಲಾಡ್​ ಎನ್ನುತ್ತಾ ಹೊಸ ಹೊಸ ಪ್ರಯತ್ನದೊಂದಿಗೆ ರುಚಿಕರವಾದ ತಿಂಡಿಗಳನ್ನು ಸವಿಯುತ್ತೇವೆ. ಆದರೆ ಕೆಲವು ಆಹಾರ ಪದಾರ್ಥಗಳು ಮಿಶ್ರಣ ಮಾಡಿ ಸೇವಿಸುವುದು ಆರೋಗ್ಯಕ್ಕೆ ಸಮಸ್ಯೆಯನ್ನು ತಂದೊಡ್ಡಬಹುದು ಎಂದು ನಿಮಗೆ ತಿಳಿದಿದೆಯೇ? ಆಹಾರ ವಿಶ್ರಣವು ಹೊಟ್ಟೆನೋವು, ಹೊಟ್ಟೆ ಉಬ್ಬುವ ಸಮಸ್ಯೆ, ಆಯಾಸ, ಗ್ಯಾಸ್​ ಮತ್ತು ಅಸ್ವಸ್ಥತೆಯಂತಹ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ದೀರ್ಘಕಾಲದವರೆಗೆ ತಪ್ಪಾದ ಆಹಾರ ಕ್ರಮವನ್ನೇ ಸೇವಿಸುತ್ತಿದ್ದರೆ ಅದು ಉಸಿರಾಟ ತೊಂದರೆಯನ್ನುಂಟು ಮಾಡಬಹುದು. ಜತೆಗೆ ದೀರ್ಘಕಾಲದವರೆಗೆ ಜೀರ್ಣಕ್ರಿಯೆ ತೊಂದರೆಗೆ ಕಾರಣವಾಗಬಹುದು.

ವಿವಿಧ ಪೌಷ್ಠಿಕ ಆಹಾರವನ್ನು ಸೇವಿಸುವುದರ ಜತೆಗೆ ನಾವು ಹಾಲನ್ನು ಹೆಚ್ಚು ಉಪಯೋಗಿಸುತ್ತೇವೆ. ಹಾಲು ಕೆಲವರಿಗೆ ಅತ್ಯಂತ ಇಷ್ಟವಾದ ಆಹಾರ ಕೂಡಾ ಹೌದು. ಜತೆಗೆ ಫ್ರೂಟ್​ ಸಲಾಡ್​, ಐಸ್​ಕ್ರೀಮ್​, ಸ್ವೀಟ್ಸ್​ ಹೀಗೆ ಅನೇಕ ವಿವಿಧ ರುಚಿಯಾದ ತಿಂಡಿಯನ್ನು ಮಾಡಿ ಸವಿಯುತ್ತೇವೆ. ಆದರೆ ಕೆಲವು ಹಣ್ಣುಗಳನ್ನು ಅಥವಾ ಆಹಾರವನ್ನು ಹಾಲಿನೊಂದಿಗೆ ಬೆರೆಸಲೇಬಾರದು. ಈ ಮಿಶ್ರಣವು ನಿಮ್ಮ ಆರೋಗ್ಯದ ಮೇಲೆ ಅಡ್ಡಪಡಿಣಾಮವನ್ನು ಉಂಟು ಮಾಡುತ್ತವೆ. ಅಂತಹ ಆಹಾರ ಯಾವುದು ಎಂಬುದರ ಬಗ್ಗೆ ತಿಳಿಯೋಣ.

ಹಾಲಿನೊಂದಿಗೆ ಬೆರೆಸಲೇಬಾರದ ಕೆಲವು ಆಹಾರಗಳು ಮೊಟ್ಟೆ, ಮಾಂಸ ಮತ್ತು ಮೀನು ಮೀನು, ಮೊಟ್ಟೆ ಹಾಗೂ ಮಾಂಸಗಳನ್ನು ಹಾಲಿನೊಂದಿಗೆ ಸೇವಿಸುತ್ತಿದ್ದರೆ ಅದನ್ನು ಆದಷ್ಟು ತಪ್ಪಿಸಿ. ಏಕೆಂದರೆ ಇದು ಜೀರ್ಣಕಾರಿ ಸಮಸ್ಯೆಯನ್ನು ತಂದೊಡ್ಡುತ್ತದೆ. ಜತೆಗೆ ಹೊಟ್ಟೆ ಉಬ್ಬುವುದು. ಹೊಟ್ಟೆ ನೋವಿನಂತಹ ಸಮಸ್ಯೆಗೆ ಕಾರಣವಾಗುತ್ತದೆ.

ಹುಳಿ ಪದಾರ್ಥಗಳು ನೀವು ಸಿಟ್ರಸ್​ ಮತ್ತು ಆಮ್ಲೀಯ ಆಹಾರ ಪದಾರ್ಥಗಳನ್ನು ಯಾವಾಗಲೂ ಮಿಶ್ರಣ ಮಾಡಿ ಸೇವಿಸಬಾರದು. ವಿಟಮಿನ್​ ಸಿ ಪೌಷ್ಠಿಕಾಂಶದಿಂದ ಸಮೃದ್ಧವಾಗಿರುವ ಹಣ್ಣುಗಳನ್ನು ಹಾಲಿನೊಂದಿಗೆ ಸಂಯೋಜಿಸಬಾರದು. ಹಾಲು ಜೀರ್ಣಗೊಳ್ಳಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಹಾಲು, ಲಿಂಬು ಮತ್ತು ಯಾವುದೇ ಸಿಟ್ರಸ್​ ಸಮೃದ್ಧವಾದ ಹಣ್ಣನ್ನು ಮಿಶ್ರಣ ಮಾಡಿದರೆ ಹಾಲು ಹೆಪ್ಪುಗಟ್ಟುತ್ತದೆ. ಇದು ನಿಮ್ಮ ಆರೋಗ್ಯದಲ್ಲಿ ಹೆಚ್ಚು ಪರಿಣಾಮವನ್ನು ಉಂಟು ಮಾಡುತ್ತದೆ.

ಬಾಳೆಹಣ್ಣು ಹಾಲು ಮತ್ತು ಬಾಳೆಹಣ್ಣು ಎರಡೂ ಕೂಡಾ ತೂಕವನ್ನು ಹೆಚ್ಚಿಸಲು ಸಹಾಯ ಮಾಡುವ ಪದಾರ್ಥಗಳು. ಆದರೆ ಇವೆರಡನ್ನೂ ಒಟ್ಟಿಗೆ ಸೇವಿಸುವದರಿಂದ ಜೀರ್ಣಕ್ರಿಯೆ ಕಷ್ಟವಾಗಿತ್ತದೆ. ದೇಹಕ್ಕೆ ಹೆಚ್ಚು ಆಯಾಸವನ್ನು ಉಂಟು ಮಾಡುತ್ತದೆ. ಸಾಮಾನ್ಯವಾಗಿ ಬಾಳೆಹಣ್ಣಿನ ಮಿಲ್ಕ್​ಶೇಕ್​ಅನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಹೀಗಿರುವಾಗ ಮಿಲ್ಕ್​ಶೇಕ್​ಗೆ ಸ್ವಲ್ಪ ದಾಲ್ಚಿನ್ನಿ ಅಥವಾ ಜಾಯಿಕಾಯಿ ಪುಡಿಯನ್ನು ಸೇರಿಸಿ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಮೊಸರು ನೀವು ಹಾಲು ಮತ್ತು ಮೊಸರನ್ನು ಯಾವಾಗಲೂ ಮಿಶ್ರಣ ಮಾಡಿ ಸೇವಿಸಬಾರದು. ಆಯುರ್ವೇದದ ಪ್ರಕಾರ ಹೊಟ್ಟೆಯ ತೊಂದರೆ ಉಂಟಾಗಲು ಮುಖ್ಯವಾದ ಕಾರಣ ಹಾಲು ಮತ್ತು ಮೊಸರನ್ನು ಮಿಶ್ರಣ ಮಾಡಿ ಸೇವಿಸುವುದು. ಸಾಮಾನ್ಯವಾಗಿ ವಯಸ್ಕರು ರುಚಿಗೋಸ್ಕರ ಹಾಲು ಮತ್ತು ಮೊಸರನ್ನು ಒಟ್ಟಿಗೆ ಅನ್ನದ ಜೊತೆ ಕಲಸಿ ಊಟ ಮಾಡುತ್ತಾರೆ. ಜೀರ್ಣಕ್ರಿಯೆಗೆ ತೊಂದರೆಯುಂಟಾಗುವ ಇಂತಹ ಆಹಾರ ಪದಾರ್ಥಗಳು ಅನಾರೋಗ್ಯವನ್ನು ತಂದೊಡ್ಡುತ್ತದೆ.

ಮೂಲಂಗಿ ಹಾಲು ಸಂಪೂರ್ಣ ಆಹಾರ. ಇದರೊಂದಿಗೆ ಇತರ ಪದಾರ್ಥಗಳನ್ನು ಸೇವಿಸಬಾರದು. ಮೂಲಂಗಿ ಸೇವಿಸುತ್ತಾ ಜತೆಗೆ ಹಾಲನ್ನು ಸೇವಿಸುವ ಅಭ್ಯಾಸ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಜತೆಗೆ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ.

ಸೂಚನೆ: ಇಂದಿನಿಂದಲೇ ನೀವು ನಿಮ್ಮ ಆಹಾರ ಕ್ರಮವನ್ನು ಬದಲಾಯಿಸಿಕೊಳ್ಳಿ. ನಾಲಿಗೆಗೆ ರುಚಿ ನೀಡುವ ಕೆಲವು ಆಹಾರ ಪದಾರ್ಥಗಳು ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಹಾಗಾಗಿ ನಿಮ್ಮ ಆರೋಗ್ಯದ ಕುರಿತಾಗಿ ಹೆಚ್ಚು ಕಾಳಜಿವಹಿಸಿ. ಆರೋಗ್ಯದಲ್ಲಿ ಏನೇ ಏರು-ಪೇರು ಕಂಡು ಬಂದರೂ ಸಹ ಹತ್ತಿರದ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ.

ಇದನ್ನೂ ಓದಿ:

Health Benefits: ಹಾಲು ಕುಡಿಯುವ ಅಭ್ಯಾಸ ಇದೆಯೇ? ಹಾಗಿದ್ದರೆ ಸೇವಿಸುವ ಸಮಯದ ಬಗ್ಗೆ ತಿಳಿಯವುದನ್ನು ಮರೆಯಬೇಡಿ

Health Tips: ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗಾಗಿ ಒಂದಿಷ್ಟು ಸಲಹೆಗಳು

VIDEO: ಔಟ್ ಮಾಡು... ಔಟ್ ಮಾಡು... ಪಂದ್ಯದ ನಡುವೆ ಕಾವ್ಯ ಮಾರನ್ ರಿಯಾಕ್ಷನ್
VIDEO: ಔಟ್ ಮಾಡು... ಔಟ್ ಮಾಡು... ಪಂದ್ಯದ ನಡುವೆ ಕಾವ್ಯ ಮಾರನ್ ರಿಯಾಕ್ಷನ್
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ