Immunity Booster: ವಿಟಮಿನ್ ಹೊಂದಿರುವ ಪದಾರ್ಥಗಳು ಯಾವುವು? ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಏನೆಲ್ಲಾ ಸೇವಿಸಬೇಕು ಎನ್ನುವುದನ್ನು ತಿಳಿಯಿರಿ

ಜೀವಸತ್ವಗಳು ಮತ್ತು ಖನಿಜಗಳು ಬಲವಾದ ಮೂಳೆಗಳು, ಸ್ನಾಯುಗಳು, ಆರೋಗ್ಯಕರ ಚರ್ಮ, ಜೀವಕೋಶಗಳು ಮತ್ತು ರೋಗನಿರೋಧಕ ಶಕ್ತಿಯನ್ನು ಒದಗಿಸಲು ಅಗತ್ಯವಾದ ಪೋಷಕಾಂಶಗಳಾಗಿ ಕಾರ್ಯನಿರ್ವಹಿಸುತ್ತವೆ.

Immunity Booster: ವಿಟಮಿನ್ ಹೊಂದಿರುವ ಪದಾರ್ಥಗಳು ಯಾವುವು? ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಏನೆಲ್ಲಾ ಸೇವಿಸಬೇಕು ಎನ್ನುವುದನ್ನು ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Skanda

Updated on: Jul 01, 2021 | 6:50 AM

ನಮ್ಮ ದೇಹವು ಆರೋಗ್ಯವಾಗಿರಲು ಮತ್ತು ದೀರ್ಘಕಾಲದವರೆಗೆ ಕಾಯಿಲೆಗಳಿಂದ ದೂರವಿರಲು ಜೀವಸತ್ವಗಳು ಮತ್ತು ಖನಿಜಗಳು ದೇಹಕ್ಕೆ ಅತ್ಯಗತ್ಯ. ಇವುಗಳು ಬಲವಾದ ಮೂಳೆಗಳು, ಸ್ನಾಯುಗಳು, ಆರೋಗ್ಯಕರ ಚರ್ಮ, ಜೀವಕೋಶಗಳು ಮತ್ತು ರೋಗನಿರೋಧಕ ಶಕ್ತಿಯನ್ನು ಒದಗಿಸಲು ಅಗತ್ಯವಾದ ಪೋಷಕಾಂಶಗಳಾಗಿ ಕಾರ್ಯನಿರ್ವಹಿಸುತ್ತವೆ. ದೇಹಕ್ಕೆ ಅಗತ್ಯವಿರುವ ಜೀವಸತ್ವಗಳು ಮತ್ತು ಪ್ರೋಟೀನ್‌ಗಳ ಕೊರತೆಯು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿಯೇ ಆರೋಗ್ಯಕರ ಆಹಾರವನ್ನು ಸೇವಿಸಲು ವೈದ್ಯರು ಶಿಫಾರಸು ಮಾಡುತ್ತಾರೆ. ಹಾಗಿದ್ದರೆ ಯಾವ ಪೋಷಕಾಂಶಗಳು ಮತ್ತು ಜೀವಸತ್ವಗಳು ನಮ್ಮ ದೇಹಕ್ಕೆ ಮುಖ್ಯ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೋಷಕಾಂಶಗಳು ಮತ್ತು ಜೀವಸತ್ವಗಳು

ವಿಟಮಿನ್ ಸಿ: ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅತ್ಯಂತ ಪರಿಣಾಮಕಾರಿಯಾದ ಜೀವಸತ್ವಗಳಲ್ಲಿ ಒಂದಾಗಿದೆ. ಇದು ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ. ಸಿಟ್ರಸ್ ಹಣ್ಣುಗಳಿಂದ ಹಿಡಿದು ಹಸಿರು ತರಕಾರಿಗಳವರೆಗೆ ವಿವಿಧ ಆಹಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ಇವುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ.

ವಿಟಮಿನ್ ಸಿ ಹೊಂದಿರುವ ಆಹಾರಗಳು ಕಿತ್ತಳೆ, ನಿಂಬೆ, ಪಾಲಕ್ ಸೊಪ್ಪು, ಕೋಸು, ಸ್ಟ್ರಾಬೆರಿ, ಪಪ್ಪಾಯಿ, ಪೇರಲೆ ಹಣ್ಣು, ದೊಣ್ಣೆಮೆಣಸು (ಕ್ಯಾಪ್ಸಿಕಂ).

ವಿಟಮಿನ್ ಎ ವಿಟಮಿನ್ ಎ ಕೂಡ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಎರಡು ರೀತಿಯ ಆಹಾರಗಳಲ್ಲೂ ಕಂಡುಬರುತ್ತದೆ. ಇದರರ್ಥ ಮಾಂಸ ಮತ್ತು ಸಸ್ಯಾಹಾರಿ ಆಹಾರಗಳಲ್ಲಿ ವಿಟಮಿನ್ ಎ ಲಭ್ಯವಿದೆ. ವಿಟಮಿನ್ ಎ ಮಾಂಸ ಮತ್ತು ಹಾಲಿನ ಉತ್ಪನ್ನಗಳಲ್ಲಿ ಕಂಡುಬರುತ್ತದೆ. ಇದನ್ನು ದೈನಂದಿನ ಆಹಾರದ ಭಾಗವಾಗಿ ತೆಗೆದುಕೊಳ್ಳುವುದು ಉತ್ತಮ.

ಈ ತರಕಾರಿಗಳಲ್ಲಿ ವಿಟಮಿನ್ ‘ಎ’ ಇರುತ್ತದೆ ಪಾಲಕ್ ಸೊಪ್ಪು, ಗೆಣಸು, ಕ್ಯಾರೆಟ್, ದೊಣ್ಣೆಮೆಣಸು, ಪಪ್ಪಾಯಿ, ಮಾವು, ಹಾಲು, ಚೀಸ್ ಮತ್ತು ಮೊಸರು.

ವಿಟಮಿನ್ ಡಿ ವಿಟಮಿನ್ ಡಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ವಿಟಮಿನ್ ಡಿ ನಮ್ಮ ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ವಿಟಮಿನ್ ಡಿ ಸಾಲ್ಮನ್ ಮೀನು, ಟ್ಯೂನ ಮೀನುಗಳಲ್ಲಿ ಇದೆ. ಇವುಗಳ ಜತೆಗೆ ಹಾಲು, ಚೀಸ್, ಮೊಟ್ಟೆ, ಅಣಬೆಗಳಲ್ಲೂ ವಿಟಮಿನ್ ಡಿ ಇದೆ.

ವಿಟಮಿನ್ ಇ ವಿಟಮಿನ್ ಇ ನಮ್ಮ ದೇಹದಲ್ಲಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಸೋಂಕು ಹರಡುವುದನ್ನು ತಡೆಯುತ್ತದೆ. ಅಷ್ಟೇ ಅಲ್ಲ ಇದು ಹೃದಯದ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟದಂತೆ ತಡೆಯುತ್ತದೆ. ವಿಟಮಿನ್ ಇ ಮುಖ್ಯವಾಗಿ ತೈಲಗಳು, ಬೀಜಗಳು, ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕಂಡುಬರುತ್ತದೆ.

ವಿಟಮಿನ್ ಇ ಗಾಗಿ ಈ ಆಹಾರಗಳನ್ನು ತೆಗೆದುಕೊಳ್ಳಬಹುದು ಬಾದಾಮಿ, ಕಡಲೆಕಾಯಿ, ಪಾಲಕ್​ ಸೊಪ್ಪು, ಮಾವು, ದೊಣ್ಣೆಮೆಣಸು.

ಸತು ಸತುವು ನಮ್ಮ ದೇಹದಲ್ಲಿ ಸಣ್ಣ ಪ್ರಮಾಣದಲ್ಲಿ ಕಂಡುಬರುವ ಖನಿಜವಾಗಿದೆ. ಇದು ಹೊಸ ಕೋಶಗಳನ್ನು ಉತ್ಪಾದಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಾವು ನಿಯಮಿತವಾಗಿ ಸತು ಅಂಶದ ಆಹಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಸತು ಪದಾರ್ಥಗಳು ಹುರಿದ ಹುರುಳಿ, ಹಾಲು, ಚೀಸ್, ಮೊಸರು, ಮಾಂಸ, ಮಸೂರ, ಕುಂಬಳಕಾಯಿ, ಎಳ್ಳು, ಸೆಣಬಿನ ಬೀಜಗಳು, ಕಡಲೆಕಾಯಿ, ಗೋಡಂಬಿ, ಬಾದಾಮಿ, ಮೊಟ್ಟೆ, ಗೋಧಿ, ಅಕ್ಕಿ, ಆಲೂಗೆಡ್ಡೆ ಉತ್ಪನ್ನಗಳಲ್ಲಿ ಸತು ಕಂಡುಬರುತ್ತದೆ.

ಇದನ್ನೂ ಓದಿ: Ragi Ambali: ರಾಗಿ ಅಂಬಲಿ ತಯಾರಿಸುವ ವಿಧಾನದ ಜತೆ ಇದನ್ನು ಕುಡಿಯುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ

Omega-3: ರೋಗನಿರೋಧಕ ಶಕ್ತಿ ಹೆಚ್ಚಿಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವ ಒಮೆಗಾ-3 ಆಹಾರಗಳ ಬಗ್ಗೆ ತಿಳಿಯಿರಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ