Obesity: ಕೊರೊನಾ ಸಮಯದಲ್ಲಿ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಕಾಡುತ್ತಿದೆಯೇ? ಪರಿಹಾರ ಕ್ರಮಗಳು ಹೀಗಿವೆ
ದೇಹದಲ್ಲಿ ಬೊಜ್ಜು ಹೆಚ್ಚಾದಂತೆಯೇ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ತೂಕ ಹೆಚ್ಚಾಗುತ್ತದೆ. ಅಧಿಕ ತೂಕದಿಂದ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತವೆ.
ಕಳೆದ ನಾಲ್ಕು ದಶಕಗಳಿಗೆ ಹೋಲಿಸಿದರೆ ಈಗ ಮಕ್ಕಳಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚಾಗಿದೆ. ಸಾಂಕ್ರಾಮಿಕ ಕೊರೊನಾದಿಂದಾಗಿ ಶಾಲೆಗಳೆಲ್ಲ ಮುಚ್ಚಲ್ಪಟ್ಟಿದೆ. ಇದು ಮಕ್ಕಳಲ್ಲಿ ಸ್ಥೂಲಕಾಯದ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಬೊಜ್ಜು ಹೆಚ್ಚಾದ ಮಕ್ಕಳಲ್ಲಿ ಟೈಪ್2 ಡಯಾಬಿಟಿಸ್, ಅಧಿಕ ರಕ್ತದೊತ್ತಡ ಮತ್ತು ಯಕೃತ್ತು ಸಮಸ್ಯೆ ಕಾಡತೊಡಗುವ ಸಾಧ್ಯತೆ ಹೆಚ್ಚು.
ದೇಹದಲ್ಲಿ ಬೊಜ್ಜು ಹೆಚ್ಚಾದಂತೆಯೇ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ತೂಕ ಹೆಚ್ಚಾಗುತ್ತದೆ. ಅಧಿಕ ತೂಕದಿಂದ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತವೆ. ಮಕ್ಕಳು ಮನೆಗಿಂತ ಶಾಲೆಯಲ್ಲಿ ಪೌಷ್ಠಿಕ ಆಹಾರವನ್ನು ಸೇವಿಸುತ್ತಾರೆ. ಸರಿಯಾದ ಸಮಯಕ್ಕೆ ಆಹಾರ ಸೇವಿಸುವದರಿಂದಾಗಿ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಕಾಡುವುದಿಲ್ಲ. ಪ್ರಸ್ತುತದಲ್ಲಿ ಕೊರೊನಾ ಸಾಕ್ರಾಮಿಕ ರೋಗದ ಹರಡುವಿಕೆಯಿಂದ ಮಕ್ಕಳು ಮನೆಯಲ್ಲಿಯೇ ಇರುವ ಪರಿಸ್ಥಿತಿ ಎದುರಾಗಿದೆ. ಶಾಲೆಯಲ್ಲಿ ಆಟದ ಜತೆಗೆ ಪಾಠ ಕಲಿಯುತ್ತಿದ್ದ ಮಕ್ಕಳು ಚಟುವಟಿಕೆಯಿಂದ ಇರುತ್ತಿದ್ದರು. ಆದರೀಗ ಮನೆಯಲ್ಲಿ ಸ್ಮಾರ್ಟ್ಫೋನ್, ಟಿವಿಯಂತಹ ಸಾಧನಗಳಿಗೆ ಅಂಟಿಕೊಂಡಿದ್ದಾರೆ. ಇದು ಮಕ್ಕಳಲ್ಲಿನ ದೈಹಿಕ ಚಟುವಟಿಕೆಯನ್ನು ಕುಂಠಿತಗೊಳಿಸಿದೆ.
ಹೆಚ್ಚಾಗಿ ಮಕ್ಕಳು ಕುಳಿತಲ್ಲಿಯೇ ಹೆಚ್ಚು ಸಮಯ ಕುಳಿತಿರುವುದು, ಜಂಕ್ಫುಡ್ಗಳ ಸೇವನೆ, ಚಾಕಲೇಟ್-ಬಿಸ್ಕೆಟ್ ಅತಿಯಾದ ಬಳಕೆಯಿಂದಾಗಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ. ದೇಹದಲ್ಲಿ ಕ್ಯಾಲೋರಿ ಹೆಚ್ಚಾದಂತೆ ಅಧಿಕ ತೂಕದ ಜತೆಗೆ ಆರೋಗ್ಯ ಸಮಸ್ಯೆಗಳು ಕಾಡತೊಡಗುತ್ತದೆ. ಹೀಗಿರುವಾಗ ಮಕ್ಕಳಲ್ಲಿ ಪೌಷ್ಠಿಕ ಆಹಾರದ ಜತೆಗೆ ವ್ಯಾಯಾಮ, ದೈಹಿಕ ಚಟುವಟಿಕೆಗಳು ಬೇಕು.
ಬೆಳೆಯುವ ಮಕ್ಕಳಲ್ಲಿ ಅಪೌಷ್ಠಿಕತೆ ಕೊರತೆಯು ಸಮಸ್ಯೆಯನ್ನು ತಂದೊಡ್ಡುತ್ತದೆ. ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಅವರ ಆಹಾರ ಕ್ರಮದಲ್ಲಿ ಬದಲಾವಣೆ ತರಲೇಬೇಕು. ಜಂಕ್ಫುಡ್ಗಳೆಂದರೆ ಮಕ್ಕಳಿಗೆ ಬಾರೀ ಪ್ರೀತಿಯಿರಬಹುದು. ಅದರೆ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ದೂರವಿರುವುದು ಅವಶ್ಯಕ. ನೆನೆಸಿದ ಹೆಸರುಕಾಳು, ಕಡಲೆ, ಕ್ಯಾರೆಟ್, ಬಿಟ್ರೂಟ್, ಸೊಪ್ಪಿನಂತಹ ಪದಾರ್ಥಗಳನ್ನು ಕೊಡಿ. ಇವುಗಳಿಂದ ಮಕ್ಕಳಲ್ಲಿ, ರೋಗ ನಿರೋಧಕ ಶಕ್ತಿ ಹೆಚ್ಚುವುದರ ಜತೆಗೆ ಆರೋಗ್ಯ ಸುಧಾರಿಸಲು ಸಹಾಯವಾಗುತ್ತದೆ.
ಆರೋಗ್ಯ ಸುಧಾರಿಸಿಕೊಳ್ಳಲು ಕೆಲವು ಟಿಪ್ಸ್ಗಳು *ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು *ಪೌಷ್ಠಿಕ ಆಹಾರವನ್ನೇ ಹೆಚ್ಚು ಸೇವಿಸುವುದು *ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸುವುದು *ಆದಷ್ಟು ಜಂಕ್ಫುಡ್ಗಳನ್ನು ತ್ಯಜಿಸುವುದು *ವ್ಯಾಯಾಮ ಮಾಡುವುದು *ಹೊರಾಂಗಣ ಆಟ ಆಡುವುದು *ಮಕ್ಕಳು ಹೆಚ್ಚು ಚಟುವಟಿಕೆಯಿಂದ ಕೂಡಿರುವಂತೆ ನೋಡಿಕೊಳ್ಳುವುದು
ಇದನ್ನೂ ಓದಿ:
Health Tips: ನೇರಳೆ ಹಣ್ಣಿನ ಬೀಜದಿಂದಲೂ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಒಂದೇ ಸ್ಥಳದಲ್ಲಿ 30 ನಿಮಿಷಗಳ ಕಾಲ ನಡೆಯುವುದರಿಂದ ಬೊಜ್ಜು ಕರಗಿಸಲು ಸಾಧ್ಯವೇ?