ಒಂದೇ ಸ್ಥಳದಲ್ಲಿ 30 ನಿಮಿಷಗಳ ಕಾಲ ನಡೆಯುವುದರಿಂದ ಬೊಜ್ಜು ಕರಗಿಸಲು ಸಾಧ್ಯವೇ?
ಒಂದೇ ಸ್ಳಳದಲ್ಲಿ ನಿಂತು ಕೆಲಸಮಾಡುವುದು ಅಥವಾ ನಡೆಯುವುದು ಕ್ಯಾಲೊರಿಯನ್ನು ಕರಗಿಸಲು ಸಹಾಯ ಮಾಡುತ್ತದೆ. ಒಂದೇ ಸ್ಠಳದಲ್ಲಾಗಿರಲೀ ಅಥವಾ ನಿರ್ದಿಷ್ಟ ದೂರದವರೆಗೆ ಚಲಿಸುವುದಾಗಿರಲೀ ಇದು ನಿಮ್ಮ ದೇಹದಲ್ಲಿನ ಬೊಜ್ಜನ್ನು ಕರಗಿಸುತ್ತದೆ.
ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಗೆಯಾಗುತ್ತಿದ್ದಂತೆಯೇ ಬೊಜ್ಜು ಕಾಣಿಸಿಕೊಳ್ಳುತ್ತದೆ. ಇದರಿಂದ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಹಾಗಿರುವಾಗ ಪ್ರತಿನಿತ್ಯವೂ ವ್ಯಾಯಾಮದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು. ಜತೆಗೆ ಪ್ರತಿನಿತ್ಯ ಅರ್ಧ ಗಂಟೆಯಾದರೂ ನಡೆಯುವ ಅಭ್ಯಾಸ ಇರಲೇಬೇಕು. ಇದರಿಂದ ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕರಗಿಸಬಹುದು. ದೇಹದಲ್ಲಿನ ಅನಗತ್ಯ ಬೊಜ್ಜಿನಾಂಶ ಕರಗುತ್ತದೆ. ಸ್ನಾಯುಗಳು ಬಲಗೊಳ್ಳುತ್ತದೆ. ಹಾಗಿರುವಾಗ ಒಂದೇ ಸ್ಥಳದಲ್ಲಿ 30 ನಿಮಿಷಗಳ ಕಾಲ ನಡೆಯುವುದು ಅಥವಾ ಓಡುವ ಅಭ್ಯಾಸದಿಂದ ದೇಹದಲ್ಲಿನ ಹೆಚ್ಚಿನ ಕ್ಯಾಲೊರಿಯನ್ನು ಕರಗಿಸಬಹುದು.
ಒಂದೇ ಸ್ಳಳದಲ್ಲಿ ನಿಂತು ಕೆಲಸಮಾಡುವುದು ಅಥವಾ ನಡೆಯುವುದು ಕ್ಯಾಲೊರಿಯನ್ನು ಕರಗಿಸಲು ಸಹಾಯ ಮಾಡುತ್ತದೆ. ಒಂದೇ ಸ್ಠಳದಲ್ಲಾಗಿರಲೀ ಅಥವಾ ನಿರ್ದಿಷ್ಟ ದೂರದವರೆಗೆ ಚಲಿಸುವುದಾಗಿರಲೀ ಇದು ನಿಮ್ಮ ದೇಹದಲ್ಲಿನ ಬೊಜ್ಜನ್ನು ಕರಗಿಸುತ್ತದೆ. ಇದರಿಂದ ಉತ್ತಮ ಪ್ರಯೋಜನವೆಂದರೆ, ಮಾನಸಿಕ ಒತ್ತಡ, ಜತೆಗೆ ರಕ್ತದೊತ್ತಡದಂತಹ ಸಮಸ್ಯೆಗಳಿಂದ ದೂರವಿರಬಹುದು.
ನಿಯಮಿತವಾಗಿ ಚಲಿಸುವುದು ಅಥವಾ ನಡೆದಾಡುವುದು ಹೃದಯ ಸಂಬಂಧಿ ಖಾಯಿಲೆ, ಟೈಪ್2 ಮಧುಮೇಹ, ಬೊಜ್ಜು ಮತ್ತು ಕ್ಯಾನ್ಸರ್ಅನ್ನು ತಡೆಗಟ್ಟಲು ಸಹಾಯಕವಾಗಿದೆ. ಒಬ್ಬ ಮನುಷ್ಯ ಒಂದು ವಾರಕ್ಕೆ ಕನಿಷ್ಠ ಅಂದರೂ 150 ನಿಮಿಷಗಳಷ್ಟಾದರೂ ನಡೆಯಲೇಬೇಕು. ನಡೆದಾಡುವ ಅಭ್ಯಾಸ ಇಲ್ಲದವರಿಗೆ ರಕ್ತ ಪರಿಚಲನೆ, ಹೆಚ್ಚಿನ ರಕ್ತದೊತ್ತಡ ಮತ್ತು ಅನಾರೋಗ್ಯಕರ ಕೊಲೆಸ್ಟ್ರಾಲ್ ಮಟ್ಟಕ್ಕೆ ಕಾರಣವಾಗಬಹುದು. ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಿರುವಾಗ ಪ್ರತಿನಿತ್ಯ ವಾಕಿಂಗ್ ಅಥವಾ ಜಾಗಿಂಗ್ ಮಾಡುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಮನೆಯ ಅಂಗಳದಲ್ಲಿ ಒಂದೇ ಸ್ಥಳದಲ್ಲಿ 30 ನಿಮಿಷಗಳ ಕಾಲ ನಡೆಯುವ ಅಭ್ಯಾಸ ರೂಢಿಯಲ್ಲಿರಲಿ.
ಜನರು ಹೆಚ್ಚಾಗಿ ವಾತಾವರಣದಲ್ಲಿ ಬೆರೆಯಲು ಇಷ್ಟಪಡುತ್ತಾರೆ. ಹಾಗಾಗಿ ದೂರದಲ್ಲಿರುವ ಪಾರ್ಕ್ ಅಥವಾ ರಸ್ತೆಯಲ್ಲಿ ನಡೆದಾಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಒಂದೇ ಸ್ಥಳದಲ್ಲಿ ನಡೆಯುವುದು ಮನಸ್ಸಿಗೆ ಕಿರಿಕಿರಿ ಅನಿಸಬಹುದು. ಆದರೆ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಹೊರಗಡೆ ಹೋಗುವುದು ಕಷ್ಟವೆನಿಸಿರುವಾಗ ಮನೆಯಲ್ಲಿಯೇ ನಡೆಯುವ ಅಥವಾ ಓಡುವ ಅಭ್ಯಾಸ ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಲು ಉತ್ತಮ ಮಾರ್ಗ.
ವಾಕಿಂಗ್ ಮಾಡುವುದರಿಂದ ಮನಸ್ಸು ಚೈತನ್ಯಗೊಳ್ಳುತ್ತದೆ. ಉಸಿರಾಟ ಕ್ರಿಯೆ ಸರಾಗವಾಗುತ್ತದೆ. ವಾಕಿಂಗ್ ಅಥವಾ ಜಾಗಿಂಗ್ ಮಾಡುವಾಗ ನಿಧಾನವಾಗಿ ನಿಮ್ಮ ಓಟವನ್ನು ವೇಗಗೊಳಿಸಿ ಈ ಮೂಲಕ ನಿಮಗೆ ಹೆಚ್ಚು ಆರೋಗ್ಯ ಸುಧಾರಿಸಿಕೊಳ್ಳಲು ಸಹಾಯವಾಗುತ್ತದೆ.
ಇದನ್ನೂ ಓದಿ:
Walking Benefits: ಮನೆಯಂಗಳದಲ್ಲೇ ವಾಕಿಂಗ್ ಮಾಡಿ; ಅನಗತ್ಯ ಚಿಂತೆಯಿಂದ ದೂರವಿರಿ
ವರ್ಕ್ ಫ್ರಂ ಹೋಮ್ನಿಂದ ಮನಸ್ಸು ಭಾರವೆನಿಸಿರಬಹುದು! ಅನಗತ್ಯ ಚಿಂತೆ ಹೋಗಲಾಡಿಸಲು ಇಲ್ಲಿದೆ ಸಲಹೆಗಳು