Ragi Ambali: ರಾಗಿ ಅಂಬಲಿ ತಯಾರಿಸುವ ವಿಧಾನದ ಜತೆ ಇದನ್ನು ಕುಡಿಯುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ

ವಿಶೇಷವಾಗಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ರಾಗಿ ಅಂಬಲಿ ಹೆಚ್ಚು ಸಹಾಯಕವಾಗಿದೆ. ಇಂದು ರಾಗಿ ಅಂಬಲಿಯನ್ನು ಹೇಗೆ ತಯಾರಿಸುವುದು ಮತ್ತು ಇದನ್ನು ಕುಡಿಯುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದುಕೊಳ್ಳೋಣ

Ragi Ambali: ರಾಗಿ ಅಂಬಲಿ ತಯಾರಿಸುವ ವಿಧಾನದ ಜತೆ ಇದನ್ನು ಕುಡಿಯುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ
ರಾಗಿ ಅಂಬಲಿ
Follow us
TV9 Web
| Updated By: Skanda

Updated on: Jun 30, 2021 | 9:27 AM

ರಾಗಿ ಸೇವನೆಯೂ ಆರೋಗ್ಯದ ಹಿತದೃಷ್ಟಿಯಿಂದ ತುಂಬಾ ಒಳ್ಳೆಯದು ಇದು ದೇಹಕ್ಕೆ ಹೆಚ್ಚು ಶಕ್ತಿಯನ್ನು ನೀಡುತ್ತದೆ. ಅಕ್ಕಿಯನ್ನು ಇತ್ತೀಚೆಗೆ ಹೆಚ್ಚು ಸೇವಿಸಲಾಗುತ್ತದೆ. ಅದಕ್ಕೆ ಅನುಗುಣವಾಗಿ ರಾಗಿಯನ್ನು ಕೂಡ ಸೇವಿಸುವ ಅಭ್ಯಾಸವನ್ನು ಮಾಡಿಕೊಳ್ಳಿ. ರಾಗಿಯು ದೇಹಕ್ಕೆ ತುಂಬಾ ತಂಪು. ಉರಿಯೂತದ ಸಮಸ್ಯೆ ಇರುವವರು ರಾಗಿ ಸೇವಿಸುವುದು ಉತ್ತಮ. ರಾಗಿ ಮುದ್ದೆ ತಿಂದರೆ ಎಂತಹ ಕೆಲಸವನ್ನಾದರೂ ಮಾಡುವ ಶಕ್ತಿ ನಮ್ಮ ದೇಹಕ್ಕೆ ದೊರೆಯುತ್ತದೆ ಎಂದು ಹಿರಿಯರು ಹೇಳುತ್ತಾರೆ. ಯಾವಾಗಲೂ ರಾಗಿ ಮುದ್ದೆ ಮಾಡಲು ಸಾಧ್ಯವಿಲ್ಲ. ಇದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಹೀಗಾಗಿ ಸುಲಭವಾಗಿ ರಾಗಿ ಅಂಬಲಿ ಮಾಡಿ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು. ವಿಶೇಷವಾಗಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ರಾಗಿ ಅಂಬಲಿ ಹೆಚ್ಚು ಸಹಾಯಕವಾಗಿದೆ. ಇಂದು ರಾಗಿ ಅಂಬಲಿಯನ್ನು ಹೇಗೆ ತಯಾರಿಸುವುದು ಮತ್ತು ಇದನ್ನು ಕುಡಿಯುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದುಕೊಳ್ಳೋಣ

ರಾಗಿ ಅಂಬಲಿ ಮಾಡಲು ಬೇಕಾಗುವ ಸಾಮಾಗ್ರಿಗಳು ರಾಗಿ, ಗೋಡಂಬಿ, ಒಣದ್ರಾಕ್ಷಿ, ಜೇನುತುಪ್ಪ, ರುಚಿಗೆ ಉಪ್ಪು, ಮೆಣಸಿನಕಾಯಿ

ರಾಗಿ ಅಂಬಲಿ ತಯಾರಿಸುವ ವಿಧಾನ ರಾಗಿಯನ್ನು ಕೆಲವು ಗಂಟೆಗಳ ಕಾಲ ನೀಡಿನಲ್ಲಿ ನೆನೆಸಿಡಿ. ನಂತರ ಅದನ್ನು ಒಂದು ಬಟ್ಟೆಯಲ್ಲಿ ಚೆನ್ನಾಗಿ ಕಟ್ಟಿ ಮೊಳಕೆ ಒಡೆಯಲು ಬಿಡಿ. ಕೆಲವೊಮ್ಮೆ ರಾಗಿ ಮೊಳಕೆಯೊಡೆಯುವುದು ವಿಳಂಬವಾಗಬಹುದು. ಹೀಗಾಗಿ ಮೊದಲೇ ಇದಕ್ಕೆ ಸಿದ್ಧರಿರುವುದು ಉತ್ತಮ. ನಂತರ ಇದನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಬಳಿಕ ಸ್ವಲ್ಪ ನೀರಿಗೆ ರಾಗಿ ಪುಡಿ ಸೇರಿಸಿ ಚೆನ್ನಾಗಿ ಬೇಯಿಸಿ. ಇದನ್ನು ಮಣ್ಣಿಯ ರೀತಿಯಲ್ಲಿ ಮಾಡಿ ಅದಕ್ಕೆ ಗೋಡಂಬಿ, ಒಣದ್ರಾಕ್ಷಿ ಮತ್ತು ಜೇನುತುಪ್ಪ ಸೇರಿಸಿ. ನಂತರ ಉಪ್ಪು ಮತ್ತು ಮೆಣಸಿನಕಾಯಿ ಸೇರಿಸಿ ಕುದಿಸಿ. ಈಗ ರುಚಿಕರವಾದ ರಾಗಿ ಅಂಬಲಿ ಸವಿಯಲು ಸಿದ್ಧ.

ರಾಗಿ ಅಂಬಲಿ ಕುಡಿಯುವುದರಿಂದಾಗುವ ಪ್ರಯೋಜನಗಳು ರಾಗಿ ಅಂಬಲಿಯು ದೇಹಕ್ಕೆ ಉತ್ತಮ ಶಕ್ತಿಯನ್ನು ನೀಡುತ್ತದೆ. ಇಡೀ ದಿನ ನವ ಉತ್ಸಾಹದ ಜತೆ ಕೆಲಸ ಮಾಡಲು ಇದು ನೆರವಾಗುತ್ತದೆ. ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಪಡೆಯಲು ರಾಗಿ ಅಂಬಲಿ ಉತ್ತಮ ಆಯ್ಕೆಯಾಗಿದೆ. ದೈಹಿಕವಾಗಿ ಶ್ರಮವಹಿಸಿ ಕೆಲಸ ಮಾಡುವವರಿಗೆ ರಾಗಿ ಅಂಬಲಿ ಹೆಚ್ಚು ಶಕ್ತಿಯನ್ನು ನೀಡುತ್ತದೆ.

* ರಾಗಿ ಅಂಬಲಿ ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೆದುಳು ಸಕ್ರಿಯವಾಗಿ ಕೆಲಸ ಮಾಡಲು ಸಹಾಯಕವಾಗಿದೆ. ವಿದ್ಯಾಭ್ಯಾಸ ಮಾಡುವ ಮಕ್ಕಳು ಕಲಿಕೆಯಲ್ಲಿಯೂ ಹೆಚ್ಚು ಉತ್ಸಾಹದಿಂದ ಭಾಗವಹಿಸುತ್ತಾರೆ.

* ದೇಹದಲ್ಲಿನ ಹೆಚ್ಚುವರಿ ಉಷ್ಣಾಂಶವನ್ನು ರಾಗಿ ಅಂಬಲಿ ಕಡಿಮೆ ಮಾಡುತ್ತದೆ.

* ಒಂದು ಗ್ಲಾಸ್ ರಾಗಿ ಅಂಬಲಿಯನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿ ಪೂರ್ಣತೆಯ ಭಾವನೆ ಉಂಟಾಗುತ್ತದೆ. ಇದು ನಿಮ್ಮನ್ನು ದೀರ್ಘಕಾಲದವರೆಗೆ ಹಸಿವಿನಿಂದ ದೂರವಿರಿಸುತ್ತದೆ.

* ತೂಕ ಇಳಿಸಿಕೊಳ್ಳಲು ಬಯಸುವವರಿಗೆ ರಾಗಿ ಅಂಬಲಿ ಸಹಾಯಕವಾಗಿದೆ. ಬೊಜ್ಜಿನ ಸಮಸ್ಯೆಯಿಂದ ದೂರವಿರಲು ಮತ್ತು ವೇಗವಾಗಿ ತೂಕವನ್ನು ಇಳಿಸಲು ಸಹಾಯವಾಗಿದೆ.

* ರಾಗಿ ಅಂಬಲಿ ಸೇವಿಸುವುದರಿಂದ ಬಿಪಿ ಮತ್ತು ಸಕ್ಕರೆ ನಿಯಂತ್ರಣಕ್ಕೆ ಬರುತ್ತದೆ.

* ನಿಯಮಿತವಾಗಿ ರಾಗಿ ಅಂಬಲಿಯನ್ನು ಕುಡಿಯುತ್ತಿದ್ದರೆ, ಪುರುಷರಲ್ಲಿ ವೀರ್ಯ ಹೆಚ್ಚಾಗುತ್ತದೆ.

* ಪ್ರತಿದಿನ ಬೆಳಿಗ್ಗೆ ಸಾಮಾನ್ಯ ಉಪಹಾರದ ಬದಲು ರಾಗಿ ಅಂಬಲಿ ಕುಡಿಯುವುದರಿಂದ ದಿನವಿಡೀ ನಿಮ್ಮನ್ನು ಸಕ್ರಿಯವಾಗಿರಿಸಿಕೊಳ್ಳಬಹುದು ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು.

ಇದನ್ನೂ ಓದಿ:

Health Tips: ಬೀಟ್​ರೂಟ್​​ ಡಿಟಾಕ್ಸ್​ ಜ್ಯೂಸ್; ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯಿರಿ

Neem Leaves: ಕಹಿ ಬೇವಿನ ಸೇವನೆ ಕಷ್ಟವಾದರೂ, ಆರೋಗ್ಯಕರ ಗುಣಗಳ ದೃಷ್ಟಿಯಿಂದ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ