Kidney Stone: ಕಿಡ್ನಿ ಸ್ಟೋನ್ ಸಮಸ್ಯೆ ಏಕೆ ಕಂಡುಬರುತ್ತದೆ? ಅದರಿಂದ ರಕ್ಷಣೆ ಹೇಗೆ? ಇಲ್ಲಿದೆ ವಿವರ

ಬಹುತೇಕ ಕಿಡ್ನಿ ಸ್ಟೋನ್ ಸಮಸ್ಯೆ ಕಳಪೆ ಜೀವನಶೈಲಿಯಿಂದ ಉಂಟಾಗುತ್ತದೆ. ಅಂದರೆ, ಕಡಿಮೆ ನೀರು ಕುಡಿಯುವುದು, ಸರಿಯಾಗಿ ಬಹಿರ್ದೆಸೆಗೆ ತೆರಳದಿರುವುದು ಇತ್ಯಾದಿ ಕಾರಣವಾಗಿ ಕಾಣುತ್ತದೆ.

Kidney Stone: ಕಿಡ್ನಿ ಸ್ಟೋನ್ ಸಮಸ್ಯೆ ಏಕೆ ಕಂಡುಬರುತ್ತದೆ? ಅದರಿಂದ ರಕ್ಷಣೆ ಹೇಗೆ? ಇಲ್ಲಿದೆ ವಿವರ
ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಿ
Follow us
| Updated By: Skanda

Updated on: Jun 30, 2021 | 6:55 AM

ಸಾಮಾನ್ಯವಾಗಿ ಕಂಡುಬರುವ ಆರೋಗ್ಯ ಸಮಸ್ಯೆಗಳಲ್ಲಿ ಕಿಡ್ನಿ ಸ್ಟೋನ್ ಕೂಡ ಇತ್ತೀಚೆಗೆ ಪ್ರಮುಖ ಸಮಸ್ಯೆಯಾಗಿದೆ. ಕಿಡ್ನಿ ಸ್ಟೋನ್ ಸಮಸ್ಯೆಗೆ ಇಂಥದ್ದೇ ಎಂಬ ಕಾರಣವೇನು ಇಲ್ಲದಿದ್ದರೂ ಬಹುತೇಕ ಕಿಡ್ನಿ ಸ್ಟೋನ್ ಸಮಸ್ಯೆ ಕಳಪೆ ಜೀವನಶೈಲಿಯಿಂದ ಉಂಟಾಗುತ್ತದೆ. ಅಂದರೆ, ಕಡಿಮೆ ನೀರು ಕುಡಿಯುವುದು, ಸರಿಯಾಗಿ ಬಹಿರ್ದೆಸೆಗೆ ತೆರಳದಿರುವುದು ಇತ್ಯಾದಿ ಕಾರಣವಾಗಿ ಕಾಣುತ್ತದೆ. ಯೂರಿಕ್ ಆಸಿಡ್ ಸರಿಯಾದ ಪ್ರಮಾಣದಲ್ಲಿ ಇಡಲು ಅಥವಾ ಅದು ಕರಗಲು ಸೂಕ್ತ ನೀರು ದೇಹಕ್ಕೆ ಬೇಕಾಗುತ್ತದೆ. ಹೀಗೆ ನೀರು ಬೇಕಾದಷ್ಟು ಪ್ರಮಾಣದಲ್ಲಿ ದೇಹಕ್ಕೆ ಸಿಗದೇ ಹೋದಾಗ ಕಿಡ್ನಿ ಸ್ಟೋನ್ ಕಂಡುಬರಬಹುದು. 

ಕಿಡ್ನಿ ಸ್ಟೋನ್ ಸಮಸ್ಯೆಯು ಜನರಿಗೆ ಯಾವುದೇ ವಯಸ್ಸಿನಲ್ಲಿ ಕಂಡುಬರಬಹುದು. ಹಾಗೂ ಒಂದು ಬಾರಿ ಕಿಡ್ನಿ ಸ್ಟೋನ್ ಉಂಟಾದವರಿಗೆ ಸಮಸ್ಯೆ ಮತ್ತೆ ಮರುಕಳಿಸಬಹುದು. ಯೂರಿಕ್ ಆಸಿಡ್ ಅಥವಾ ಫಾಸ್ಪೇಟ್ ಸ್ಟೋನ್​ಗಳಿಂದ ಹೀಗಾಗಬಹುದು. ಅತಿಯಾದ ಪ್ರೊಟೀನ್​ಯುಕ್ತ ಆಹಾರ ಸ್ವೀಕರಿಸುವುದು ಅಥವಾ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಅತಿ ಎನಿಸುವಷ್ಟು ಸೇವಿಸುವುದು ಈ ಎರಡು ಸ್ಟೋನ್ ರೂಪಗೊಳ್ಳಲು ಕಾರಣ ಆಗಬಹುದು.

ಇದರಿಂದ ಯಾರಿಗೆ ಹೆಚ್ಚು ಆತಂಕ? ಸಕ್ಕರೆ ಖಾಯಿಲೆ ಇರುವವರಿಗೆ, ಅತಿಯಾದ ತೂಕದ ದೇಹ ಹೊಂದಿರುವವರಿಗೆ, ಹೈಪರ್ ಥೈರಾಯಿಡ್ ಸಮಸ್ಯೆ ಇರುವವರಿಗೆ, ಕಿಡ್ನಿ ಬ್ಲಾಕೇಜ್ ಇರುವವರಿಗೆ, ಅತಿಯಾದ ರಕ್ತದೊತ್ತಡ ಇರುವವರಿಗೆ ಅಥವಾ ಕಿಡ್ನಿ ಸ್ಟೋನ್​ನ ಸಮಸ್ಯೆ ಈ ಮೊದಲು ಕೌಟುಂಬಿಕ ಹಿನ್ನೆಲೆಯಲ್ಲಿ ಯಾರಿಗಾದರೂ ಕಂಡುಬಂದಿದ್ದರೆ ಅಂಥವರು ಈ ಬಗ್ಗೆ ಹೆಚ್ಚು ಜಾಗ್ರತೆ ವಹಿಸುವುದು ಒಳ್ಳೆಯದೇ ಆಗಿದೆ. ಹಾಗೆಂದು ಗಾಬರಿ ಪಡುವ ಅವಶ್ಯಕತೆ ಖಂಡಿತಾ ಇಲ್ಲ.

ಈ ಸಮಸ್ಯೆಗೆ ಚಿಕಿತ್ಸೆ ಏನು? ಕೆಲವು ಪ್ರಕರಣಗಳಲ್ಲಿ ಕಿಡ್ನಿ ಸ್ಟೋನ್ ಬಹಳ ಸಣ್ಣದಾಗಿರುತ್ತದೆ. ಔಷಧ ಸೇವನೆಯಿಂದಲೇ ಕಿಡ್ನಿ ಸ್ಟೋನ್ ನಿವಾರಿಸಬಹುದು. ಹೆಚ್ಚಿನ ಪ್ರಮಾಣದ ಅಥವಾ ದೊಡ್ಡ ಕಿಡ್ನಿ ಸ್ಟೋನ್ ಕಂಡುಬಂದರೆ ವೈದ್ಯರ ಸೂಚನೆಯಂತೆ ಲಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಮೂಲಕ ಗುಣಪಡಿಸಬಹುದು. 5 ಎಮ್​ಎಮ್​ಗಿಂತ ಸಣ್ಣ ಅಳತೆಯ ಸ್ಟೋನ್​ನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಗುಣಪಡಿಸಬಹುದು ಎಂದು ಹೇಳಲಾಗುತ್ತದೆ.

ಕಿಡ್ನಿ ಸ್ಟೋನ್​ನಿಂದ ರಕ್ಷಣೆ ಪಡೆದುಕೊಳ್ಳುವುದು ಹೇಗೆ? ಕಿಡ್ನಿ ಸ್ಟೋನ್ ಕಂಡುಬಂದರೆ ಪ್ರತಿ ದಿನ ಸುಮಾರು ಮೂರು ಲೀಟರ್​ಗಳಷ್ಟು ಅಥವಾ 8ರಿಂದ 9 ಗ್ಲಾಸ್​ಗಳಷ್ಟು ನೀರು ಕುಡಿಯಬೇಕು. ದಿನವೂ ಕನಿಷ್ಠ 40 ನಿಮಿಷಗಳಷ್ಟು ಕಾಲ ದೈಹಿಕ ವ್ಯಾಯಾಮ ನಡೆಸಬೇಕು. ಸೊಪ್ಪು, ಟೊಮ್ಯಾಟೋ, ಬದನೆಕಾಯಿಯಂತಹ ತರಕಾರಿ ಸೇವನೆ ಕಡಿಮೆ ಮಾಡಬೇಕು. ಹೀಗೆ ಮಾಡುವುದರಿಂದ ಕಿಡ್ನಿ ಸ್ಟೋನ್​ನಿಂದ ರಕ್ಷಣೆಯನ್ನೂ ಪಡೆಯಬಹುದು.

ಇದನ್ನೂ ಓದಿ: Health Tips: ಒಣ ಕೆಮ್ಮಿನಿಂದ ಸುಸ್ತಾಗಿದ್ದೀರಾ? ಜೇಷ್ಠ ಮಧುವಿನ ಸೇವನೆ ಉತ್ತಮ ಔಷಧ

Health Tips: ಮಾವಿನ ಹಣ್ಣಿನ ಸಿಪ್ಪೆಯಲ್ಲಿದೆ ಹಲವು ಪ್ರಯೋಜನಗಳು

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ