Health Tips: ಒಣ ಕೆಮ್ಮಿನಿಂದ ಸುಸ್ತಾಗಿದ್ದೀರಾ? ಜೇಷ್ಠ ಮಧುವಿನ ಸೇವನೆ ಉತ್ತಮ ಔಷಧ

ಜೇಷ್ಠ ಮಧು ಕಡ್ಡಿಯನ್ನು ನಿರಿನಲ್ಲಿ ಬೆರೆಸಿ ಕುದಿಸಿ ನಂತರ ಕಷಾಯದ ರೂಪದಲ್ಲಿಯೂ ಸೇವಿಸಬಹುದು. ಜತೆಗೆ ಚೂರೇ ಚೂರು ನಿಂಬೆ ರಸ ಮಿಶ್ರಣ ಮಾಡಿ ಸೇವಿಸಬಹುದು

Health Tips: ಒಣ ಕೆಮ್ಮಿನಿಂದ ಸುಸ್ತಾಗಿದ್ದೀರಾ? ಜೇಷ್ಠ ಮಧುವಿನ ಸೇವನೆ ಉತ್ತಮ ಔಷಧ
ಜೇಷ್ಠ ಮಧು
Follow us
TV9 Web
| Updated By: Skanda

Updated on: Jun 29, 2021 | 9:36 AM

ನಮ್ಮ ಸುತ್ತಮುತ್ತಲೇ ಸಿಗುವ ಅದೆಷ್ಟೋ ಆಹಾರ ಪದಾರ್ಥಗಳಿಂದ ನಾವು ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದು. ಮಳೆಗಾಲದ ಸಮಯದಲ್ಲಂತೂ ಕೆಮ್ಮು, ನೆಗಡಿ ಮಾಮೂಲಿ. ಅದರಲ್ಲಿಯೂ ಕೊರೊನಾ ಮಹಾಮಾರಿಯ ಆರ್ಭಟ ಬೇರೆ ಇರುವುದರಿಂದ ಕೊಂಚ ಭಯವಾದರೂ ಹೆಚ್ಚು ಆರೋಗ್ಯದ ಕುರಿತಾಗಿ ಜಾಗೃತಿ ಮಾಡುತ್ತಿದ್ದೇವೆ. ಹಾಗಾಗಿ ಮಕ್ಕಳಿಗೆ ಒಣ ಕೆಮ್ಮು, ಶೀತವಾದಾಗ ಜೇಷ್ಠ ಮಧು ನೀಡುವ ಮೂಲಕ ಕೆಮ್ಮು ಬಹುಬೇಗ ವಾಸಿಯಾಗುತ್ತವೆ.

ಜೇಷ್ಠ ಮಧು ನೋಡಲು ಸಣ್ಣ ಕಡ್ಡಿಯಷ್ಟೆ. ಸಣ್ಣ ಸಸಿಯ ಕಾಂಡದಂತೆ ಇರುತ್ತದೆ. ಇದನ್ನು ಜಗಿಯುವುದರಿಂದ ಕೆಮ್ಮು ವಾಸಿಯಾಗುತ್ತದೆ. ಬಹುಬೇಗ ಉಸಿರಾಟ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು. ಆಯುರ್ವೇದದ ಅಂಗಡಿಗಳಲ್ಲಿ ಸಾಮಾನ್ಯವಾಗಿ ಜೇಷ್ಠ ಮಧು ಸಿಗುತ್ತದೆ. ತಿನ್ನಲು ಸ್ವಲ್ಪ ಸಿಹಿಯಾಗಿರುವುದರಿಂದ ಮಕ್ಕಳು ಈ ಔಷಧವನ್ನು ಇಷ್ಟಪಟ್ಟು ತಿನ್ನುತ್ತಾರೆ.

ಈ ಕಡ್ಡಿಯನ್ನು ನೀರಿನಲ್ಲಿ ಬೆರೆಸಿ ಕುದಿಸಿ ನಂತರ ಕಷಾಯದ ರೂಪದಲ್ಲಿಯೂ ಸೇವಿಸಬಹುದು. ಜತೆಗೆ ಚೂರೇ ಚೂರು ನಿಂಬೆ ರಸ ಮಿಶ್ರಣ ಮಾಡಿ ಸೇವಿಸಬಹುದು. ನಿಂಬೆ ರಸದಲ್ಲಿಯೂ ಸಹ ಒಣ ಕೆಮ್ಮಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಾಶ ಪಡಿಸುವ ಸಾಮರ್ಥ್ಯ ಇರುವುದರಿಂದ ಆರೋಗ್ಯ ಸಮಸ್ಯೆಯಿಂದ ಬಹುಬೇಗ ಗುಣಮುಖರಾಗಲು ಸಹಾಯಕವಾಗುತ್ತದೆ.

ಮಕ್ಕಳಲ್ಲಿ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಜೇಷ್ಠಮಧು ಸಹಾಯಕವಾಗಿದೆ. ಕಷಾಯ ಮಾಡಿ ಸೇವಿಸುವುದರ ಮೂಲಕ ಅಥವಾ ತೇಯ್ದು ಜೇಷ್ಠ ಮಧುವಿನ ಪೇಸ್ಟ್​ ಅನ್ನು ನೀರಿಗೆ ಬೆರೆಸಿ ಸೇವಿಸುವುದರ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ.

ಚರ್ಮದ ಅಲರ್ಜಿ, ಆಮಶಂಕೆ ಮತ್ತು ಅಸ್ತಮಾ ರೋಗಿಗಳಿಗೆ ಜೇಷ್ಠ ಮಧು ಸಹಾಯಕವಾಗಿದೆ. ಗಂಟಲಲ್ಲಿ ಅಥವಾ ಶ್ವಾಸಕೋಶದಲ್ಲಿ ಕಟ್ಟಿಕೊಂಡಿರುವ ಕಫವನ್ನು ಕರಗಿಸಲು ಇದು ಸಹಾಯ ಮಾಡುತ್ತದೆ. ನೋಡಲು ಸಣ್ಣ ಕಡ್ಡಿಯಾಗಿದ್ದರೂ ಸಹ ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ.

ಇದನ್ನೂ ಓದಿ:

ಸಂಸ್ಕರಿಸಿದ ಹಾಗೂ ಸಾವಯವ ಪ್ರಮಾಣೀಕೃತ ಹಲಸಿನ ಹಣ್ಣು ಬೆಂಗಳೂರಿನಿಂದ ಜರ್ಮನಿಗೆ ರಫ್ತು

Health Tips: ಕೊರೊನಾ ಸೋಂಕಿನ ಮಧ್ಯೆ ಮತ್ತೆ ನೆನಪಾಯಿತು ಈ ಗಿಡ! ‘ನೆಲನೆಲ್ಲಿ’ ಸಸ್ಯದಲ್ಲಿ ಅಡಗಿದೆ ಔಷಧೀಯ ಗುಣ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ