Health Tips: ಕೊರೊನಾ ಸೋಂಕಿನ ಮಧ್ಯೆ ಮತ್ತೆ ನೆನಪಾಯಿತು ಈ ಗಿಡ! ‘ನೆಲನೆಲ್ಲಿ’ ಸಸ್ಯದಲ್ಲಿ ಅಡಗಿದೆ ಔಷಧೀಯ ಗುಣ

ಸಾಮಾನ್ಯವಾಗಿ ಸರ್ಪಸುತ್ತು, ಏಡ್ಸ್​, ನ್ಯುಮೋನಿಯಾ, ಚಿಕನ್​ ಗುನ್ಯಾ ಕಾಯಿಲೆಗಳಿಗೆ ಕಾರಣವಾಗುವಂತಹ ವೈರಸ್​ ಅನ್ನು ನಾಶಪಡಿಸುವ ಗುಣ ನೆಲನೆಲ್ಲಿ ಸಸ್ಯದಲ್ಲಿದೆ. ದೇಹದಲ್ಲಿ ಉರಿಯೂತ, ಮೂತ್ರದ ಸಮಸ್ಯೆಗಳಿಗೆ ಕೂಡಾ ಪರಿಹಾರವಾಗಿ ಕೆಲಸ ಮಾಡುತ್ತದೆ.

Health Tips: ಕೊರೊನಾ ಸೋಂಕಿನ ಮಧ್ಯೆ ಮತ್ತೆ ನೆನಪಾಯಿತು ಈ ಗಿಡ! ‘ನೆಲನೆಲ್ಲಿ’ ಸಸ್ಯದಲ್ಲಿ ಅಡಗಿದೆ ಔಷಧೀಯ ಗುಣ
ನೆನನೆಲ್ಲಿ ಸಸ್ಯ
Follow us
TV9 Web
| Updated By: Skanda

Updated on: Jun 08, 2021 | 8:00 AM

ಕೆಲವು ಗಿಡಗಳು ಚಿಕ್ಕದಾಗಿದ್ದರೂ ಕೂಡಾ ಅದರಿಂದ ಪ್ರಯೋಜನಗಳು ಹೆಚ್ಚು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯಂತೆ ನೆಲನೆಲ್ಲಿ ಸಸ್ಯವೂ ಕೂಡಾ ಆರೋಗ್ಯಕ್ಕೆ ಒಳ್ಳೆಯದು. ಮೊದಲೆಲ್ಲಾ ಜ್ವರ, ಶೀತ, ನೆಗಡಿಯಂತಹ ಲಕ್ಷಣಗಳು ಕಂಡು ಬಂದರೆ ನೆಲನೆಲ್ಲಿ ತಂಬುಳಿ ಅಥವಾ ಕಷಾಯವನ್ನು ಮಾಡಿ ಸೇವಿಸುತ್ತಿದ್ದರು. ದಿನನಿತ್ಯ ಒಂದು ಲೋಟ ಕಷಾಯ ಸೇವಿಸಿದರೆ ಜ್ವರ, ನೆಗಡಿ ತಲೆನೋವು ಎರಡೇ ದಿನಕ್ಕೆ ಮಾಯವಾಗಿ ಬಿಡುತ್ತದೆ. ಹೀಗಾಗಿ ನೆಲನೆಲ್ಲಿಗೆ ವಿಶೇಷ ಪ್ರಾಮುಖ್ಯತೆ ಅಂದಿನಿಂದಲೂ ಇದೆ.

ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ. ಕೊರೊನಾ ಸೋಂಕು ತಗುಲದಿರಲು ರೋಗನಿರೋಧಕ ಶಕ್ತಿ ಹೆಚ್ಚಿರುವ ಪೌಷ್ಠಿಕಾಂಶಯುಕ್ತ ಆಹಾರ ನಮ್ಮದಾಗಿರಬೇಕು. ಹಾಗಿರುವಾಗ ಮನೆಯಲ್ಲಿಯೇ ಸಿಗುವ ಒಳ್ಳೆಯ ಸಸ್ಯಗಳಿಂದ ಪೌಷ್ಠಿಕಾಂಶವನ್ನು ಪಡೆದುಕೊಳ್ಳುವುದು ಉತ್ತಮ. ನೆಲನೆಲ್ಲಿಯಲ್ಲಿರುವ ರೋಗನಿರೋಧಕ ಶಕ್ತಿ ನಿಮ್ಮನ್ನು ಆರೋಗ್ಯವಾಗಿಡುವಂತೆ ನೋಡಿಕೊಳ್ಳುವುದರಿಂದ ಅದರ ಸದುಪಯೋಗ ಪಡೆದುಕೊಳ್ಳಬಹುದು.

ಸಾಮಾನ್ಯವಾಗಿ ಸರ್ಪಸುತ್ತು, ಏಡ್ಸ್​, ನ್ಯುಮೋನಿಯಾ, ಚಿಕನ್​ ಗುನ್ಯಾ ಕಾಯಿಲೆಗಳಿಗೆ ಕಾರಣವಾಗುವಂತಹ ವೈರಸ್​ ಅನ್ನು ನಾಶಪಡಿಸುವ ಗುಣ ನೆಲನೆಲ್ಲಿ ಸಸ್ಯದಲ್ಲಿದೆ. ದೇಹದಲ್ಲಿ ಉರಿಯೂತ, ಮೂತ್ರದ ಸಮಸ್ಯೆಗಳಿಗೆ ಕೂಡಾ ಪರಿಹಾರವಾಗಿ ಕೆಲಸ ಮಾಡುತ್ತದೆ. ಮನೆಯಲ್ಲಿಯಲ್ಲಿಯೇ ಅತಿ ಸುಲಭದಲ್ಲಿ ಸಿಗುವ ಈ ಸಸ್ಯದ ಪ್ರಯೋಜನ ಒಂದೆರಡಲ್ಲ.

ಪ್ರಸ್ತುತ ಸಮಯದಲ್ಲಂತೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಮುಖ್ಯ. ಜ್ವರ, ಶೀತದಂತಹ ಲಕ್ಷಣಗಳು ಕಂಡು ಬಂದರೆ ಕಡೆಗಣಿಸುವಂತಿಲ್ಲ. ಹೀಗಿರುವಾಗ ನಮ್ಮ ಆರೋಗ್ಯದ ಸುರಕ್ಷತೆಯನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚಿನ ಗಮನ ಹರಿಸಬೇಕಾಗಿದೆ. ನೆಲನೆಲ್ಲಿಯ ಕಷಾಯ ಅಥವಾ ತಂಬುಳಿ ಮಾಡಿ ಸವಿಯುವ ಮೂಲಕ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ನೆಲನೆಲ್ಲಿ ಎಂಬ ಹೆಸರೇ ಸೂಚಿಸುವಂತೆ ನೆಲದ ಮೇಲೆ ಚಿಕ್ಕ ಗಿಡಗಳಾಗಿ ಬೆಳೆಯುತ್ತವೆ. ಚಿಕ್ಕ ಸಸ್ಯಕ್ಕೆ ಚಿಕ್ಕದಾದ ಕಾಯಿ ಬಿಡುತ್ತದೆ. ಹಾಗಾಗಿ ನೆಲನೆಲ್ಲಿ ಎಂಬ ಹೆಸರು ಬಂದಿದೆ. ಗಾಯ, ಕಜ್ಜಿ, ತುರಿಕೆ ಹಾಗೂ ಜಂತುಹುಳುಗಳ ನಿವಾರಣೆಗೆ ನೆಲನೆಲ್ಲಿಯನ್ನು ಹಳ್ಳಿಗಳಲ್ಲಿ ಹೆಚ್ಚು ಬಳಸುತ್ತಾರೆ. ಸಾಮಾನ್ಯವಾಗಿ ಚರ್ಮರೋಗದ ನಿವಾರಣೆಗೆ ಈ ಸಸ್ಯವನ್ನು ಬಳಸುವುದು ಹೆಚ್ಚು. ಮಹಿಳೆಯರಿಗೆ ಮಾಸಿಕ ಋತುಸ್ರಾವದಲ್ಲಿ ಅಧಿಕ ರಕ್ರಸ್ರಾವವಾಗುತ್ತದೆ. ಇಂತಹ ಸಮಯದಲ್ಲಿ ನೆಲನೆಲ್ಲಿಯನ್ನು ಸೇವಿಸುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇದನ್ನೂ ಓದಿ: Health Tips: ಕಿಡ್ನಿ ಸ್ಟೋನ್​ ಸಮಸ್ಯೆಯ ಲಕ್ಷಣಗಳೇನು? ಪರಿಹಾರಗಳಿವೆಯಾ?

Health Tips: ಆರೋಗ್ಯ ಕಾಪಾಡಿಕೊಳ್ಳಲು ಮಹಿಳೆಯರಿಗಾಗಿ ಕಿವಿಮಾತು; ನಿಮಗಾಗಿಯೇ ಒಂದಿಷ್ಟು ಸಮಯ ಮೀಸಲಿಡಿ

ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್