Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಎಳನೀರು ಕುಡಿದು ಹಾಗೇ ಬರುವ ಅಭ್ಯಾಸ ಬಿಟ್ಟು ಬಿಡಿ; ಒಳಗಿನ ಗಂಜಿ ಸೇವಿಸಿ, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ನೈಸರ್ಗಿಕ ಕಿಣ್ವಗಳು ಹಾಗೂ ಖನಿಜಾಂಶವನ್ನು ಹೊಂದಿರುವ ಎಳನೀರಿನ ಸೇವನೆಯು ಬೇಸಿಗೆಯ ಉಷ್ಣತೆಯಿಂದ ನಮ್ಮನ್ನು ದೂರವಾಗಿಸುತ್ತದೆ. ಅನೇಕ ಬಾರಿ ಎಳನೀರನ್ನು ಮಾತ್ರ ಕುಡಿದು ಹಾಗೇ ಹೋಗುವವರಿದ್ದಾರೆ. ಅದರೆ ನೆನಪಿಡಿ ಎಳನೀರಿನ ಒಳಗಿನ ಗಂಜಿ ತಿನ್ನದೆ ಎಳನೀರು ಕುಡಿಯುವ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ.

Health Tips: ಎಳನೀರು ಕುಡಿದು ಹಾಗೇ ಬರುವ ಅಭ್ಯಾಸ ಬಿಟ್ಟು ಬಿಡಿ; ಒಳಗಿನ ಗಂಜಿ ಸೇವಿಸಿ, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on:Jun 09, 2021 | 7:45 AM

ಎಳನೀರು ನೈಸರ್ಗಿಕವಾಗಿ ಸಿಗುವ ಪಾನೀಯವಾಗಿದ್ದು, ಅನಾದಿಕಾಲದಿಂದಲೂ ಇದಕ್ಕೆ ಬೇಡಿಕೆ ಇದೆ. ಇಂದು ಎಷ್ಟೇ ತೆರನಾದ ತಂಪು ಪಾನೀಯಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಎಳನೀರು ಮಾತ್ರ ತನ್ನ ಸ್ಥಾನವನ್ನು ಕಳೆದುಕೊಂಡಿಲ್ಲ. ಬೀಸಿಲಿನ ಬೇಗೆ ಇರಲಿ, ಒತ್ತಡದ ಮನಸ್ಥಿತಿ ಇರಲಿ ಒಮ್ಮೆ ಎಳನೀರನ್ನು ಕುಡಿದರೆ ದೇಹಕ್ಕೆ ನವಚೈತನ್ಯ ದೊರೆತಂತಾಗುತ್ತದೆ. ನೈಸರ್ಗಿಕ ಕಿಣ್ವಗಳು ಹಾಗೂ ಖನಿಜಾಂಶವನ್ನು ಹೊಂದಿರುವ ಎಳನೀರಿನ ಸೇವನೆಯು ಬೇಸಿಗೆಯ ಉಷ್ಣತೆಯಿಂದ ನಮ್ಮನ್ನು ದೂರವಾಗಿಸುತ್ತದೆ. ಅನೇಕ ಬಾರಿ ಎಳನೀರನ್ನು ಮಾತ್ರ ಕುಡಿದು ಹಾಗೇ ಹೋಗುವವರಿದ್ದಾರೆ. ಅದರೆ ನೆನಪಿಡಿ ಎಳನೀರಿನ ಒಳಗಿನ ಗಂಜಿ ತಿನ್ನದೆ ಎಳನೀರು ಕುಡಿಯುವ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ.

ಎಳನೀರಿನಲ್ಲಿರುವ ಗಂಜಿ ಅಥವಾ ಒಳಗಿನ ತಿರುಳು ತೆಂಗಿನ ಎಣ್ಣೆ, ತೆಂಗಿನ ನೀರು ಮತ್ತು ತೆಂಗಿನ ಹಾಲಿನಂತೆಯೇ ಹೆಚ್ಚು ಉಪಯುಕ್ತಕಾರಿಯಾಗಿದೆ. ಸಾಮಾನ್ಯವಾಗಿ ಎಳನೀರಿನ ಗಂಜಿಯನ್ನು ಏಕೆ ಸೇವಿಸಬೇಕು? ಅದರಿಂದ ನಮ್ಮ ಆರೋಗ್ಯಕ್ಕೆ ಯಾವ ರೀತಿಯ ಪ್ರಯೋಜನಗಳಿದೆ ಎನ್ನುವ ಪ್ರಶ್ನೆ ನಮ್ಮಲ್ಲಿ ಇರುತ್ತದೆ. ಹೀಗಾಗಿ ಎಳನೀರಿನ ಗಂಜಿಯನ್ನು ಸೇವಿಸುವುದರಿಂದ ಅಗುವ ಪ್ರಯೋಜನಗಳು ಏನು ಎನ್ನುವುದನ್ನು ಅರಿಯುವುದು ಸೂಕ್ತ

1. ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಳನೀರಿನ ಗಂಜಿಯ ಹೆಚ್ಚಿನ ಭಾಗವು ಕೊಬ್ಬಿನಾಂಶದಿಂದ ಕೂಡಿದೆ ನಿಜ. ಆದರೆ ಇದು ಒಳ್ಳೆಯ, ಸ್ಯಾಚುರೇಟೆಡ್ ಕೊಬ್ಬಿನಾಂಶದಿಂದ ಕೂಡಿದೆ. ಇದು ಹೃದಯಕ್ಕೆ ಅಗತ್ಯವಾದ ಕೊಲೆಸ್ಟ್ರಾಲ್ ಅನ್ನು ನೀಡುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

2. ತೂಕ ಇಳಿಸಲು ಸಹಾಯಕವಾಗಿದೆ ಎಳನೀರಿನ ಗಂಜಿಯನ್ನು ಸೇವಿಸುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಗಂಜಿಯಲ್ಲಿನ ಶಕ್ತಿಯುತ ಅಂಶ ದೀರ್ಘಕಾಲದವರೆಗೆ ಇರುತ್ತದೆ. ಹೀಗಾಗಿ ಪದೇ ಪದೇ ಆಹಾರ ಸೇವಿಸುವುದರಿಂದ ನಮ್ಮನ್ನು ದೂರವಿರುಸುತ್ತದೆ. ಇನ್ನು ದೇಹಕ್ಕೆ ಪ್ರೋಟಿನ್ ನೀಡುವಲ್ಲಿಯೂ ಎಳನೀರಿನ ಗಂಜಿ ಸಹಾಯಕವಾಗಿದೆ.

3. ಜೀರ್ಣಕ್ರಿಯೆಗೆ ಸಹಕಾರಿ ಎಳನೀರಿನ ಗಂಜಿಯೂ ನಾರಿನಾಂಶದಿಂದ ಕೂಡಿರುತ್ತದೆ. ಇದು ನಯವಾದ ಜೀರ್ಣಕ್ರಿಯೆಗೆ ಸಹಕಾರಿ ಮತ್ತು ಕರುಳನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.

4. ದೇಹಕ್ಕೆ ಶಕ್ತಿ ನೀಡುತ್ತದೆ ಎಳನೀರಿನ ಗಂಜಿಯಲ್ಲಿ ದೇಹಕ್ಕೆ ಶಕ್ತಿ ನೀಡುವ ಅಂಶಗಳು ಹೇರಳವಾಗಿದೆ. ಇದು ಖನಿಜಾಂಶವನ್ನು ಹೊಂದಿದ್ದು, ಟ್ರಿಗಲ್​ಸರೈಡ್ಸ್ (MCTs)ಅನ್ನು ಹೊಂದಿದೆ.

5. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಕೊರೊನಾದಂತಹ ಈ ಕಾಲಘಟ್ಟದಲ್ಲಿ ಎಳನೀರಿನ ಸೇವನೆ ಮತ್ತು ಎಳನೀರಿನ ಗಂಜಿಯ ಸೇವನೆ ಬಹಳ ಮುಖ್ಯ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಉತ್ಕರ್ಷಣ ನಿರೋಧಕ ಮೌಲ್ಯವನ್ನು ಹೊಂದಿದ್ದು, ಉರಿಯೂತದ ಗುಣಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ಎಳನೀರಿನ ಗಂಜಿಯನ್ನು ಹೇಗೆ ಸೇವಿಸಬೇಕು ಎಳನೀರು ಕುಡಿದ ನಂತರದಲ್ಲಿ ಅದನ್ನು ಎರಡು ಭಾಗಗಳನ್ನಾಗಿ ಕತ್ತರಿಸಿದ ಬಳಿಕ, ಅದರಲ್ಲಿರುವ ತೆಳುವಾದ ಗಂಜಿಯನ್ನು ಸೇವಿಸಿ. ಎಳನೀರಿನ ಗಂಜಿ ಸ್ವಲ್ಪ ದಪ್ಪಗಿದ್ದರೆ, ಇದರಿಂದ ಕಡುಬು ತಯಾರಿಸಬಹುದು. ಇನ್ನು ಕೆಲವರು ಎಳನೀರಿನ ಜೊತೆ ಗಂಜಿಯನ್ನು ಮಿಶ್ರಣ ಮಾಡಿಯೂ ಸೇವಿಸುತ್ತಾರೆ. ಒಟ್ಟಾರೆ ಎಳನೀರು ಕುಡಿದ ನಂತರ ಅದನ್ನು ಬಿಸಾಡುವ ಬದಲು ಎರಡು ಭಾಗ ಮಾಡಿ ಒಳಗಿನ ಗಂಜಿ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದು ಆರೋಗ್ಯಕ್ಕೂ ಒಳ್ಳೆಯದು, ರುಚಿಯೂ ಚೆನ್ನಾಗಿರುತ್ತದೆ.

ಇದನ್ನೂ ಓದಿ:

Weight loss Tips: ತೂಕವನ್ನು ಇಳಿಸಲು ದೇಹದಂಡನೆ ಮಾಡುವುದನ್ನು ಬಿಡಿ; ಈ ಸರಳ ಆಹಾರ ಪದ್ಧತಿಯನ್ನು ಅನುಸರಿಸಿ

ಬಿಳಿ ಜಂಬೂ ಅಥವಾ ಪನ್ನೇರಳೆ ಹಣ್ಣು ರುಚಿಯಷ್ಟೇ ಆರೋಗ್ಯಕರ; ರೋಗನಿರೋಧಕ ಶಕ್ತಿ ಹೆಚ್ಚಿಸುವ ಈ ಹಣ್ಣನ್ನು ಒಮ್ಮೆ ತಿಂದು ನೋಡಿ

Published On - 7:29 am, Wed, 9 June 21